44 ಸೆಕೆಂಡ್‌ನಲ್ಲಿ 72 ರಾಕೆಟ್ – ಏನಿದು ಪಿನಾಕಾ ರಾಕೆಟ್ ಲಾಂಚರ್?

Public TV
1 Min Read
Pinaka Multi Barrel Rocket Launcher 1 Copy

ನವದೆಹಲಿ: ಭಾರತದ ದಾಳಿಯಿಂದ ಪಾಕಿಸ್ತಾನ (Pakistan) ಕಂಗೆಟ್ಟು ಹೋಗಿದೆ. ಪಾಪರ್ ಪಾಕಿಸ್ತಾನಕ್ಕೆ ಇನ್ನೂ ಶಾಕ್ ಕಾದಿದೆ. ಬಾಲ ಬಿಚ್ಚಿದ್ರೆ ಸಾಕು ಪಾಕಿಸ್ತಾನ ಭೂಪಟದಲ್ಲೇ ಇಲ್ಲ ಎಂಬಂತೆ ಮಾಡುವ ಶಕ್ತಿ ಭಾರತೀಯ ಸೇನೆಗಿದೆ.

Pinaka Multi Barrel Rocket Launcher

ಗುರುವಾರ ಬರೀ ಟ್ರೇಲರ್ ಅಷ್ಟೇ ತೋರಿಸಿದ್ದ ಭಾರತ ಪಿಕ್ಚರ್ ಅಭಿ ಬಾಕಿ ಹೈ ಎಂಬ ಮಂತ್ರ ಹಾಡಿದೆ. ಸುದರ್ಶನ್ ಚಕ್ರ, ಆಕಾಶ್ ಮಿಸೈಲ್ ಇವೆಲ್ಲ ಜಸ್ಟ್ ಚಮಕ್ ಅಷ್ಟೇ. ಭಾರತದ ಬತ್ತಳಿಕೆಯಲ್ಲಿ ದೊಡ್ಡ ದೊಡ್ಡ ಬ್ರಹ್ಮಾಸ್ತ್ರಗಳಿವೆ. ಭಾರತವನ್ನು ಕೆಣಕಿದರೆ ಪಿನಾಕಾ ರಾಕೆಟ್ ಲಾಂಚರ್ (Pinaka Rocket Launcher) ಬ್ರಹ್ಮಾಸ್ತ್ರವನ್ನು ಬಳಸುವ ಸಾಧ್ಯತೆ ಇದೆ. ಇದನ್ನೂ ಓದಿ: ಭಾರತದ 36 ಕಡೆ 400 ಮಿಸೈಲ್‌ನಿಂದ ಪಾಕ್ ದಾಳಿ: ಕರ್ನಲ್ ಸೋಫಿಯಾ ಖುರೇಷಿ

ಕೇವಲ 44 ಸೆಕೆಂಡ್‌ಗಳಲ್ಲೇ 72 ರಾಕೆಟ್‌ಗಳನ್ನು ಉಡಾಯಿಸಬಲ್ಲ ಶಕ್ತಿ ಹೊಂದಿರುವ ಪಿನಾಕಾ, 60 ಕಿ.ಮೀ ದೂರದಲ್ಲಿದ್ದರೂ ಗುರಿ ಮುಟ್ಟಲಿದೆ. ಇದನ್ನೂ ಓದಿ: ಪಾಕ್‌ನಿಂದ ಶೆಲ್ ದಾಳಿ – ಸ್ಥಳಾಂತರಗೊಂಡ ಜನರೊಂದಿಗೆ ಕ್ರಿಕೆಟ್ ಆಡಿದ ಜಮ್ಮು ಸಿಎಂ

ಪಿನಾಕಾ ರಾಕೆಟ್ ಲಾಂಚರ್ ವಿಶೇಷತೆಗಳೇನು?
*44 ಸೆಕೆಂಡ್‌ನಲ್ಲಿ 72 ರಾಕೆಟ್ ಉಡಾಯಿಸಬಹುದು.
*60 ಕಿ.ಮೀ ದೂರದ ಗುರಿ ಹೊಡೆಯಬಹುದು.
*ರಾಕೆಟ್‌ನ ವ್ಯಾಪ್ತಿಯು 90 ಕಿ.ಮೀವರೆಗೆ ಇರುತ್ತೆ.
*ಇದರ ಹೊಸ ಆವೃತ್ತಿಯನ್ನು ತಯಾರಿಸಲಾಗುತ್ತಿದೆ.
*ಪಿನಾಕಾ ಎಂಕೆ-2 ಇಆರ್ ಹೆಸರಿನ ಹೊಸ ಆವೃತ್ತಿ.
*ಇದರ ವ್ಯಾಪ್ತಿ 150 ಕಿಲೋ ಮೀಟರ್‌ಗಳಿಗಿಂತ ಹೆಚ್ಚು.
*ಜಿಪಿಎಸ್&ಭಾರತೀಯ ನ್ಯಾವಿಗೇಷನ್ ಹೊಂದಿದೆ.
*ಗಂಟೆಗೆ 5,800 ಕಿ.ಮೀ ವೇಗದಲ್ಲಿ ಆಕಾಶಕ್ಕೆ ಚಿಮ್ಮುತ್ತೆ.
*ಇದರಲ್ಲಿನ ರೆಡಾರ್, ಎಲೆಕ್ಟ್ರೋಆಪ್ಟಿಕಲ್ ಟಾರ್ಗೆಟಿಂಗ್ ಸಿಸ್ಟಂ&ಟೆಲಿಮೆಟ್ರಿ ಸಿಸ್ಟಮ್ ಗುರಿ ಪತ್ತೆಹಚ್ಚಿ ನಾಶ ಮಾಡುತ್ತವೆ.

Share This Article