ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ 72 ಪದಾರ್ಥಗಳನ್ನು ಬಳಸಿ ಬರೋಬ್ಬರಿ 72 ಕೆ.ಜಿಯ ಚಾಕಲೇಟ್ ಬಾರ್ ತಯಾರಿಸಿ ಪ್ರದರ್ಶನಕ್ಕೆ ಇಡಲಾಗಿದೆ.
ಭಾರತದ ಅತ್ಯಂತ ಜನಪ್ರಿಯ ಚಾಕಲೇಟ್ ಬ್ರಾಂಡ್ ಫೆಬೆಲ್ಲೆ(Fabelle), ಇದೇ ಮೊದಲ ಬಾರಿಗೆ ವಿಶಿಷ್ಟ ಹಾಗೂ 72 ಪದಾರ್ಥಗಳನ್ನು ಬಳಸಿ 72 ಕಿಲೋ ಚಾಕಲೇಟ್ ಬಾರ್ ತಯಾರಿಸಿದೆ. ಬೆಂಗಳೂರು ಮಾತ್ರವಲ್ಲದೇ ಎಲ್ಲ 6 ಮೆಟ್ರೋ ನಗರಗಳಲ್ಲಿ ಒಂದೊಂದು 72 ಕಿಲೋ ಚಾಕೊಲೇಟ್ ಬಾರ್ ತಯಾರಿಸಿದೆ.
Advertisement
Advertisement
ಈ ಚಾಕಲೇಟ್ ಬಾರ್ ಗಳನ್ನು ಮುಂಬೈ, ದೆಹಲಿ, ಕೋಲ್ಕತ್ತಾ, ಹೈದರಾಬಾದ್, ಚೆನ್ನೈ ಮತ್ತು ಬೆಂಗಳೂರಿನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಉನ್ನತ ಗುಣಮಟ್ಟದ ಹಾಲು, ನಟ್ಸ್, ಒಣ ಹಣ್ಣುಗಳು, ಕುಕೀಸ್, ಸೀಡ್‍ಗಳು, ಜೆಲ್ಲಿ, ಬಿಸ್ಕಿಟ್ ಹಾಗೂ ಇತರ ಪದಾರ್ಥಗಳ ಮಿಶ್ರಣದಿಂದ ಫೆಬೆಲ್ಲೆ ಮಾಸ್ಟರ್ ಚಾಕಲೇಟಿಯರ್ ಗಳು ಮಿಲ್ಕ್ ಚಾಕಲೇಟ್ ಬಾರ್ ಗಳನ್ನು ತಯಾರಿಸಿದ್ದಾರೆ. ಚಾಕಲೇಟ್ ರುಚಿಯನ್ನು ವಿಶಿಷ್ಟವಾಗಿಸಲು ಹಲವು ಸುತ್ತಿನ ಟೆಸ್ಟಿಂಗ್ ಟ್ರಯಲ್‍ಗಳನ್ನೂ ಮಾಡಲಾಗಿದೆಯಂತೆ. ಅಂತಿಮವಾಗಿ 7 ರಿಂದ 8 ದಿನಗಳವರೆಗೆ ಕೆಲಸ ಮಾಡಿ ಚಾಕಲೇಟ್ ಬಾರ್ ತಯಾರಿಸಲಾಗಿದೆ. ಇದನ್ನೂ ಓದಿ: ಈ ಪುಟಾಣಿ ಚಾಕ್ಲೇಟ್ ಬೆಲೆ 6 ಲಕ್ಷ ರೂ.
Advertisement
Advertisement
ಈ ತಯಾರಿಕೆಯ ಪಯಣ ಅತ್ಯಂತ ಸವಾಲಿನದಾಗಿದ್ದು, ಬರಿ ದೊಡ್ಡ ಚಾಕಲೇಟ್ ಬಾರ್ ತಯಾರಿಸುವುದಷ್ಟೇ ನಮ್ಮ ಗುರಿಯಾಗಿರಲಿಲ್ಲ. ಬದಲಿಗೆ ಸಾಮಾನ್ಯ ಫೆಬೆಲ್ಲೆ ಚಾಕಲೇಟ್‍ಗಿಂತ ವಿಶಿಷ್ಟ ರುಚಿಯನ್ನು ಇದು ಹೊಂದಿರಬೇಕು ಎಂದು ನಾವು ಬಯಸಿದ್ದೆವು. ಇದೇ ಕಾರಣಕ್ಕೆ ಚಾಕಲೇಟ್ ತಯಾರಕರು ತಮ್ಮ ಎಲ್ಲ ಅನುಭವವನ್ನೂ ಬಳಸಿ ತಯಾರಿಸಿದ್ದಾರೆ.
ಈ ಚಾಕಲೇಟ್ ಮಾರಾಟ ಮಾಡಿ ಮೇಕ್ ಎ ವಿಶ್ ಫೌಂಡೇಶನ್ ಮೂಲಕ ಮಕ್ಕಳಿಗೆ ಆ ಹಣ ನೀಡುವುದು ಈ ಚಾಕಲೇಟ್ ತಯಾರಿಕೆಯ ಹಿಂದಿನ ಉದ್ದೇಶವಾಗಿದೆ. ಜೊತೆಗೆ 72 ನೇ ಸ್ವಾತಂತ್ರೋತ್ಸವ ಹಿನ್ನೆಲೆಯಲ್ಲಿ 72 ಕೆಜಿಯ ಚಾಕಲೇಟ್ ತಯಾರು ಮಾಡಿ ಒಂದೊಳ್ಳೆ ಕೆಲಸ ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv