ಬಳ್ಳಾರಿ: 71ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಬಳ್ಳಾರಿಯ ಗವಿಯಪ್ಪ ವೃತ್ತದಲ್ಲಿ 150 ಅಡಿ ಎತ್ತರದಲ್ಲಿ ಧ್ವಜಾರೋಹಣ ನಡೆಯಿತು.
ಕೇವಲ ನಗರದಲ್ಲಿ ಲೇಔಟ್, ರಸ್ತೆ. ಪಾರ್ಕುಗಳನ್ನು ಅಭಿವೃದ್ಧಿ ಪಡಿಸುತ್ತಿದ್ದ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ ಜನರಲ್ಲಿ ದೇಶಾಭಿಮಾನ ಮೂಡಿಸುವ ಉದ್ದೇಶದಿಂದ 150 ಅಡಿ ಎತ್ತರದಲ್ಲಿ ಧ್ವಜ ಹಾರಿಸಲಾಗುತ್ತಿದೆ.
- Advertisement -
ಹಲವಾರು ವರ್ಷಗಳ ಇತಿಹಾಸ ಹೊಂದಿರುವ ನಗರದ ಈ ಮೋತಿ ವೃತ್ತವನ್ನು ನಗರಾಭಿವೃದ್ಧಿ ಪ್ರಾಧಿಕಾರ, ಪೊಲೀಸ್ ಇಲಾಖೆ ಮತ್ತು ಪಾಲಿಕೆ ಜಂಡಿಯಾಗಿ ಸಿಗ್ನಲ್ ಫ್ರೀ ಸರ್ಕಲ್ ಆಗಿ ಪರಿವರ್ತಿಸಿದೆ. ಈ ವೃತ್ತದಲ್ಲಿ ಒಂಭತ್ತು ಪಿರಮಿಡ್‍ಗಳನ್ನು ನಿರ್ಮಿಸಿ ಅವುಗಳನ್ನು ಹಸಿರೀಕರಣಗೊಳಿಸಿದ್ದು ಈಗ ಹೊಸದಾಗಿ ಅತೀ ಎತ್ತರದ ಧ್ವಜ ಸ್ತಂಭ ನಿರ್ಮಿಸಿ ರಾಷ್ಟ್ರಧ್ವಜ ಹಾರಿಸಿಲಾಗಿದೆ.
- Advertisement -
- Advertisement -