ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಬಿ.ಎಸ್.ಲಿಂಗದೇವರು ನಿರ್ದೇಶನದಲ್ಲಿ ಮೂಡಿ ಬಂದಿರುವ, ಹಾನಗಲ್ಲ ಕುಮಾರ ಶಿವಯೋಗಿಗಳ ಜೀವನಚರಿತ್ರೆ ಆಧರಿತ ಸಿನಿಮಾ ‘ವಿರಾಟಪುರ ವಿರಾಗಿ’ ಸಿದ್ಧವಾಗಿದೆ. ಸಮಾಧಾನ ಸಂಸ್ಥೆ ನಿರ್ಮಾಣದಲ್ಲಿ ಮೂಡಿ ಬಂದಿರುವ ಈ ಸಿನಿಮಾದ ಹಿನ್ನೆಲೆಯನ್ನು ಸಾರುವುದಕ್ಕಾಗಿ ಕುಮಾರ ಶಿವಯೋಗಿಗಳ ನೆನಪಿನಲ್ಲಿ ‘ವಿರಾಗಿ ಶ್ರೀ ಕುಮಾರೇಶ್ವರ ರಥಯಾತ್ರೆ’ ನಡೆಸಲು ಉದ್ದೇಶಿಸಲಾಗಿದೆ.
Advertisement
ರಾಜ್ಯಾದ್ಯಂತ ಆರು ರಥಗಳು, ಹದಿಮೂರು ದಿನಗಳ ಕಾಲ, ಏಳು ಸಾವಿರ ಕಿಲೋ ಮೀಟರ್ ಪಯಣವನ್ನು ಮಾಡಲಿವೆ. ಈ ರಥಯಾತ್ರೆಯಲ್ಲಿ ಒಟ್ಟು 360 ಸಭೆಗಳನ್ನೂ ಆಯೋಜನೆ ಮಾಡಲಾಗಿದ್ದು, ಒಂದು ಕೋಟಿ ಜನರನ್ನು ಮುಟ್ಟುವ ಗುರಿಯನ್ನು ಹೊಂದಲಾಗಿದೆ ಎಂದು ಲಿಂಗದೇವರು ತಿಳಿಸಿದ್ದಾರೆ. ಡಿಸೆಂಬರ್ 20ರಂದು ಶುರುವಾಗಲಿರುವ ಈ ರಥಯಾತ್ರೆಯು ಜನವರಿ 1 ರಂದು ಗದಗನಲ್ಲಿ ಮುಕ್ತಾಯಗೊಳ್ಳಲಿದೆ. ಇದನ್ನೂ ಓದಿ: ನಾನು ಪಠಾಣ್ ಸಿನಿಮಾ ನೋಡುತ್ತೇನೆ: ಬಹಿರಂಗವಾಗಿ ಘೋಷಿಸಿಕೊಂಡ ನಟ ಪ್ರಕಾಶ್ ಬೆಳವಾಡಿ
Advertisement
Advertisement
ಸಿನಿಮಾ ಕುರಿತು ಮತ್ತೋರ್ವ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಗಿರೀಶ್ ಕಾಸರವಳ್ಳಿ, ‘ಕುಮಾರ ಶಿವಯೋಗಿಗಳು ಒಂದು ದಂತಕಥೆ. ಒಬ್ಬ ಮನುಷ್ಯ ತನ್ನ ಜೀವಿತಾಧಿಯಲ್ಲಿ ಏನೇನು ಮಾಡಲು ಅಸಾಧ್ಯವೋ ಅದನ್ನೆಲ್ಲಾ ಸಾಧ್ಯ ಮಾಡಿದ್ದಾರೆ. ಗಾಂಧೀಜಿಯವರು ಭಾರತಕ್ಕೆ ಬರುವ ಕೆಲವು ವರ್ಷಗಳ ಮೊದಲೇ ಗಾಂಧೀಜಿ ಅವರು ಆದರ್ಶ ಅಂದುಕೊಂಡಿದ್ದ ಬಹುತೇಕ ಕೆಲಸಗಳನ್ನು ಮಾಡಿ ತೋರಿಸಿದವರು ಹಾನಗಲ್ಲ ಗುರುಕುಮಾರ ಶಿವಯೋಗಿಗಳು’ ಎಂದು ಮಾತನಾಡಿದ್ದಾರೆ.
Advertisement
ಹಾನಗಲ್ಲ ಕುಮಾರೇಶ್ವರನನ್ನು 2ನೇ ಬಸವಣ್ಣ ಎಂದು ಕರೆಯಲಾಗುತ್ತದೆ. ಸ್ವಾತಂತ್ರ್ಯ ಪೂರ್ವದ ವಿಪರ್ಯಾಸದ ದಿನಗಳಲ್ಲಿ ನಾಡಿನ ಹಿತಕ್ಕಾಗಿ ನಿಂತವರು ಹಾನಗಲ್ಲ ಶ್ರೀಗಳು. ಮಠದಿಂದ ಘಟ ಬೆಳಗಬಾರದು – ಘಟದಿಂದ ಮಠ ಬೆಳಗಬೇಕೆಂದು ಸಾಧಿಸಿ ತೋರಿಸಿದವರು. 19ನೇ ಶತಮಾನದ ಆದಿಯಲ್ಲಿಯೇ ಅವರು ಹೊಸ ಮನ್ವಂತರಕ್ಕೆ ಭದ್ರ ಬುನಾದಿ ಹಾಕಿದವರು. ಸಮ ಸಮಾಜ ನಿರ್ಮಾಣದ ರೂವಾರಿಗಳು. ಸರ್ವರಿಗೂ ಶಿಕ್ಷಣ. ಅಂಧರ ಬಾಳಿಗೆ ಸಂಗೀತ ಶಿಕ್ಷಣ. ಅಖಿಲ ಭಾರತ ವೀರಶೈವ (ಲಿಂಗಾಯತ) ಮಹಾಸಭಾ ಸ್ಥಾಪನೆ. ಮಹಿಳಾ ಶಿಕ್ಷಣ ಮತ್ತು ಸ್ತ್ರೀ ಸಬಲೀಕರಣ. ಶಿವಯೋಗ ಮಂದಿರ ಸ್ಥಾಪನೆ. ವಚನ ತಾಡೋಲೆಗಳ ಸಂಗ್ರಹ ಮತ್ತುಗ್ರಂಥಾಲಯ ಸ್ಥಾಪನೆ. ಅಧುನಿಕ ಕೃಷಿ ಪದ್ಧತಿ ಮತ್ತು ಗೋಶಾಲೆ ಸ್ಥಾಪನೆ. ವಿಭೂತಿ ಹಾಗೂ ಇಷ್ಟ ಲಿಂಗದ ನಿರ್ಮಾಣ, ಹತ್ತಿ ಕಾರ್ಖಾನೆಯ ಸ್ಥಾಪನೆ. ಆಯುರ್ವೇದಚಿಕಿತ್ಸಾಲಯ ಸ್ಥಾಪನೆ. ಚಿತ್ರಮಂದಿರಗಳ ಪ್ರಾರಂಭ, ಪ್ರಾಣಿ ಬಲಿ ನಿಷೇಧ. ಹೀಗೆ ಹತ್ತು ಹಲವಾರು ಸಾಧ್ಯತೆಗಳನ್ನು ಸಾಧ್ಯವಾಗಿಸಿದವರು ಇವೆಲ್ಲವುಗಳನ್ನೂ ಸಿನಿಮಾದಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರಂತೆ ಲಿಂಗದೇವರು.
ಕನ್ನಡದ ಖ್ಯಾತ ನಟ ಸುಚೇಂದ್ರ ಪ್ರಸಾದ್ ಹಾನಗಲ್ ಕುಮಾರ ಶ್ರೀಗಳ ಪಾತ್ರವನ್ನು ನಿರ್ವಹಿಸಿದ್ದು, ಲೇಖಕಿ ಕುಸುಮಾ ಆಯರಹಳ್ಳಿ ಅವರ ಪುತ್ರ ಸಮರ್ಥ ಆಯರಹಳ್ಳಿ ಹಾನಗಲ್ ಕುಮಾರ ಶ್ರೀಗಳ ಬಾಲ್ಯದ ಪಾತ್ರ ಮಾಡಿದ್ದಾರೆ. ಕರ್ನಾಟಕದ ನಾನಾ ಮಠಗಳ ಮಠಾಧೀಶರು ಕೂಡ ಪಾತ್ರ ಮಾಡಿರುವುದು ವಿಶೇಷ. ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಮೂಡಿ ಬಂದಿದ್ದು, ಅಶೋಕ್ ವಿ ರಾಮನ್ ಅವರ ಸಿನಿಮಾಟೋಗ್ರಫಿ ಹಾಗೂ ಎಸ್. ಗುಣಶೇಖರನ್ ಅವರು ಸಂಕಲನ ಚಿತ್ರಕ್ಕಿದೆ. ಈಗಾಗಲೇ ಸಿನಿಮಾದ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದ್ದು ಮೆಚ್ಚುಗೆ ವ್ಯಕ್ತವಾಗಿದೆ.