ಜೈಪುರ: 70 ವರ್ಷದ ವಿಧವೆಯೊಬ್ಬರನ್ನು ಪಕ್ಕದ ಮನೆಯವರೇ ಹೊಡೆದು ಕೊಂದ ಘಟನೆ ರಾಜಸ್ಥಾನದ ಉದಯ್ ಪುರ ಜಿಲ್ಲೆಯಲ್ಲಿ ನಡೆದಿದೆ.
ಮೃತ ವಿಧವೆಯನ್ನು ಚಂಪಾ ದೇವಿ ಎಂಬುವುದಾಗಿ ಗುರುತಿಸಲಾಗಿದ್ದು, ಮಾಟಗಾತಿ ಎಂದು ಆರೋಪಿಸಿ ಈ ಕೃತ್ಯ ಎಸಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
Advertisement
ಚಂಪಾ ದೇವಿ ಹಲಿ ಘಟಿ ಗ್ರಾಮದಲ್ಲಿ ಭಾನುವಾರ ಎಂದಿನಂತೆ ತನ್ನ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಪಕ್ಕದ ಮನೆಯವರು ಬಂದು ಆಕೆಯನ್ನು ನಿಂದಿಸಿ, ಕೋಲುಗಳಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಾರೆ.
Advertisement
ತಮ್ಮ ಪುತ್ರನ ಮೇಲೆ ಆಕೆ ಮಾಟ ಪ್ರಯೋಗಿಸಿದ ಕಾರಣ ಆತ ಅನಾರೋಗ್ಯಕ್ಕೀಡಾಗಿದ್ದು ಎಂದು ಶಂಕಿಸಿ ರೊಚ್ಚಿಗೆದ್ದ ಕುಟುಂಬ ಈ ಕೃತ್ಯ ಎಸಗಿದೆಯೆಂದು ಪೊಲೀಸರು ಹೇಳಿದ್ದಾರೆ. ಸದ್ಯ ಮೃತಳ ಪುತ್ರ ಮೋಹನ್ ಲಾಲ್ ನೀಡಿದ ದೂರಿನಂತೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂಬುವುದಾಗಿ ಹಿರಿಯ ಪೊಲೀಸ್ ಅಧಿಕಾರೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.
Advertisement
ರಾಜ್ಯದಲ್ಲಿ ಮಾಟಮಂತ್ರ ಮುಂತಾದವುಗಳನ್ನು ತಡೆಯುವ ನಿಟ್ಟಿನಲ್ಲಿ ಚಿತ್ತೋರ್ ಘರ್ ಹಾಗೂ ಭಿಲ್ವಾರ ಜಿಲ್ಲೆಯ ಕೆಲ ಪ್ರದೇಶಗಳಿಂದ ಕಳೆದೆರಡು ದಿನಗಳಿಂದ ಏಳು ಮಂದಿ ಮಾಟಗಾರರನ್ನು ಬಂಧಿಸಲಾಗಿದೆ.