70 ವರ್ಷದ ಹೆರಿಗೆ ಆಸ್ಪತ್ರೆಗೆ ಬೀಗ: 3 ವರ್ಷಗಳಿಂದ ದುರಸ್ತಿ ಹೆಸರಿನಲ್ಲಿ ಕಾಮಗಾರಿ ವಿಳಂಬ!

Public TV
1 Min Read
shivajinagara hospital

-ಬಡವರ ಆಸ್ಪತ್ರೆ ಎಂದೇ ಖ್ಯಾತಿ ಪಡೆದಿದ್ದ ಪೂರ್ ಹೌಸ್ ಹೆರಿಗೆ ಆಸ್ಪತ್ರೆ

ಬೆಂಗಳೂರು: ಬಡವರಿಗೆ ಸಹಾಯ ಆಗಲೆಂದು ನಿರ್ಮಾಣವಾಗಿದ್ದ ಹೆರಿಗೆ ಆಸ್ಪತ್ರೆ (Maternity Hospital) ಕಳೆದ ಮೂರು ವರ್ಷಗಳಿಂದ ದುರಸ್ತಿ ಹೆಸರಿನಲ್ಲಿ ಬೀಗ ಹಾಕಲಾಗಿದೆ.

ನಗರದ ಶಿವಾಜಿನಗರದಲ್ಲಿರುವ (Shivaji Nagara) ಪೂರ್ ಹೌಸ್ ಹೆರಿಗೆ ಆಸ್ಪತ್ರೆಯು (Poor House Hospital) 1957ರಲ್ಲಿ ಬಡವರಿಗೆ ಸಹಾಯ ಆಗಲೆಂದು ನಿರ್ಮಾಣವಾಗಿತ್ತು. ಯಾರೂ ಕೇಳವವರೂ ಹೇಳುವವರೂ ಇಲ್ಲದಂತಾಗಿ ಕಳೆದ ಮೂರು ವರ್ಷಗಳಿಂದ ದುರಸ್ತಿ ಹೆಸರಿನಲ್ಲಿ ಆಸ್ಪತ್ರೆಗೆ ಬೀಗ ಹಾಕಿಲಾಗಿದೆ.ಇದನ್ನೂ ಓದಿ: ಮಕ್ಕಳಲ್ಲಿ ಹೆಚ್ಚುತ್ತಿರುವ ಹೃದಯಘಾತ – 4 ದಿನಗಳಲ್ಲಿ 4 ಸಾವು

ಶಿವಾಜಿನಗರ ವಿಧಾನಸಭಾ ಕ್ಷೇತ್ರದ ನಾರಯಣ ಪಿಳ್ಳೈ ರಸ್ತೆಯಲ್ಲಿರುವ ಬಡವರ ಆಸ್ಪತ್ರೆ ಎಂದೆ ಖ್ಯಾತಿ ಪಡೆದಿದ್ದ ಪೂರ್ ಹೌಸ್ ಹೆರಿಗೆ ಆಸ್ಪತ್ರೆ ದುಸ್ಥಿತಿಯಲ್ಲಿದೆ. ಕಟ್ಟಡ ದೂಳು ಹಿಡಿದು ಪಾಳು ಬಿದ್ದಿದ್ದು, ಅದರ ಸುತ್ತಮುತ್ತಲೂ ಗಿಡ ಗಟಿಂಗಳು ದಟ್ಟವಾಗಿ ಬೆಳೆದು ನಿಂತಿವೆ.

ಈ ಭಾಗದ ಜನರಿಗೆ ತುಂಬಾ ಅನುಕೂಲ ಆಗಿತ್ತು. ಹಳೆಯ ಆಸ್ಪತ್ರೆ ಆಗಿದ್ದರಿಂದ ಇದಕ್ಕೆ ಬೀಗ ಜಡಿದು, ಹೊಸ ಕಟ್ಟಡವನ್ನು ಬ್ರ‍್ಯಾಂಡ್ ಬೆಂಗಳೂರು ಅಡಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ದುರಸ್ತಿ ಹೆಸರಿನಲ್ಲಿ ಪೂರ್ ಹೌಸ್ ಹೆರಿಗೆ ಆಸ್ಪತ್ರೆಗೆ ಬೀಗ ಹಾಕಿದ್ದರಿಂದ ಆದರೆ ಕಳೆದ ಮೂರು ವರ್ಷಗಳಿಂದ ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಮುಗಿದಿಲ್ಲ. ನಿತ್ಯ ಆರೋಗ್ಯ ಸೇವೆ ಸಿಗದೇ ಈ ಭಾಗದ ಜನ ಪರದಾಡುವಂತಾಗಿದೆ.ಇದನ್ನೂ ಓದಿ: ಸಿಖ್ಖರ ವಿರುದ್ಧ ಹೇಳಿಕೆಗೆ ತೀವ್ರ ಆಕ್ಷೇಪ – ರಾಹುಲ್‌ ಗಾಂಧಿ ವಿರುದ್ಧ 3 ಎಫ್‌ಐಆರ್‌

shivajinagar Hospital

ಆಸ್ಪತ್ರೆಯ ಕಾಮಗಾರಿ ತ್ವರಿತ ಗತಿಯಲ್ಲಿ ಮುಗಿಸುವಂತೆ ಸ್ಥಳೀಯರು ಹಲವು ಬಾರಿ ಪಾಲಿಕೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಏನು ಪ್ರಯೋಜನವಾಗಲಿಲ್ಲ. ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯಿಂದಲೂ ಬಿಬಿಎಂಪಿ (BBMP) ಆರೋಗ್ಯ ವಿಭಾಗದ ವಿಶೇಷ ಆಯುಕ್ತರಿಗೂ ಪತ್ರ ಬರೆದಿದ್ದಾರೆ. ಬಡವರಿಗೆ ಅನುಕೂಲವಾಗಿದ್ದ ಈ ಆಸ್ಪತ್ರೆಗೆ ಆದಷ್ಟು ಬೇಗ ಉದ್ಘಾಟನೆಯ ಭಾಗ್ಯ ಸಿಗಲಿ ಎಂದು ಅಲ್ಲಿನ ಜನ ಕಾದು ಕೂರುವಂತಾಗಿದೆ.

Share This Article