ಗಾಂಧಿನಗರ: ಮೊಮ್ಮಕ್ಕಳೊಂದಿಗೆ ಆಟ ಆಡುತ್ತಾ ತನ್ನ ಸಮಯ ಕಳೆಯ ಬೇಕಾದ ವಯಸ್ಸಿನಲ್ಲಿ ಮಹಿಳೆ ಮಗುವಿಗೆ ಜನ್ಮ ಕೊಟ್ಟಿರುವ ವಿಚಿತ್ರ ಘಟನೆಯೊಂದು ಗುಜರಾತ್‍ನ ಕಛ್‍ನಲ್ಲಿ ನಡೆದಿದೆ.
ಜಿವುಬೆನ್ ವಾಲಾಭಾಯಿ ರಬಾರಿ 70 ನೇ ವರ್ಷಕ್ಕೆ ಮಗುವಿಗೆ ಜನ್ಮ ಕೊಟ್ಟಿದ್ದಾರೆ. ಮೂಲತಃ ರಾಪರ್ ತಾಲ್ಲೂಕಿನ ಮೋರಾ ಗ್ರಾಮದ ನಿವಾಸಿಯಾಗಿದ್ದು, ತನ್ನ ವಯಸ್ಸನ್ನು ಸಾಬೀತುಪಡಿಸಲು ಯಾವುದೇ ದಾಖಲೆಗಳನ್ನು ಹೊಂದಿಲ್ಲ.
Advertisement
Advertisement
ನಾನು ಸುಮಾರು 65 ರಿಂದ 70 ಬೇಸಿಗೆಕಾಲವನ್ನು ನೋಡಿದ್ದೇನೆ ಈ ವಯಸ್ಸಿನಲ್ಲಿ ತಾವು ಒಂದು ಮಗುವಿಗೆ ಜನ್ಮ ನೀಡಲೇಬೇಕು ಎಂದು ಹೇಳಿಕೊಂಡಿದ್ದರು. ಈ ವೃದ್ಧ ದಂಪತಿಗಳ ಬಯಕೆಗೆ ನಾವು ಮಣಿಯಲೇ ಬೇಕಾಯಿತು ಮತ್ತು ಅವರ ಮೊದಲ ಮಗು, ಅವರು ಮದುವೆಯಾದ ಸರಿ ಸುಮಾರು 45 ವರ್ಷಗಳ ನಂತರ ಜನಿಸಿದೆ ಎಂದು ವೈದ್ಯರು ಹೇಳುತ್ತಾರೆ. ಈ ವಯಸ್ಸಿನಲ್ಲಿ ಗರ್ಭಧಾರಣೆಯ ಅಪಾಯ ತೆಗೆದುಕೊಳ್ಳದಂತೆ ಜಿವುಬೆನ್‍ಗೆ ಸಲಹೆ ನೀಡಿದ್ದೇವು. ಆದರೆ ಮಗುವನ್ನು ಪಡೆಯುವ ಬಗ್ಗೆ ಅವರು ಸಾಕಷ್ಟು ಭಾವುಕರಾಗಿದ್ದರು ಎಂದು ವೈದ್ಯರು ಹೇಳಿದ್ದಾರೆ.
Advertisement
Advertisement
ನಾವು ಮೊದಲು ಔಷಧಿಗಳನ್ನು ನೀಡವ ಮೂಲಕ ಅವರ ಋತುಚಕ್ರವನ್ನು ನಿಯಮಿತವಾಗಿ ಆಗುವಂತೆ ಮಾಡಿದ್ದೇವೆ. ನಂತರ ವಯಸ್ಸಿನ ಕಾರಣದಿಂದಾಗಿ ಕುಗ್ಗಿದ ಅವರ ಗರ್ಭಾಶಕ್ಕೆ ಚಿಕಿತ್ಸೆ ನೀಡಿದ್ದೇವೆ. ನಂತರ ಬ್ಲಾಸ್ಟೋಸಿಸ್ಟ್ ತಯಾರಾಗುವಂತೆ ಮಾಡಿ ಅದನ್ನು ಗರ್ಭಾಶಯಕ್ಕೆ ವರ್ಗಾಯಿಸಿದೆವು ಎಂದು ಸ್ತ್ರೀರೋಗ ತಜ್ಞ ಡಾ. ನರೇಶ್ ಭಾನುಶಾಲಿ ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿ ಸಾಧನೆ ಶೂನ್ಯ, ಅವಹೇಳನಕಾರಿ ಮಾತಾಡ್ತಿದ್ದಾರೆ: ಡಿಕೆಶಿ ಕಿಡಿ
ಎರಡು ವಾರಗಳ ನಂತರ ಜಿವುಬೆನ್ ಅವರ ಸೋನೋಗ್ರಫಿ ಮಾಡಿದರು ಮತ್ತು ಭ್ರೂಣವು ಬೆಳೆಯುವುದಕ್ಕೆ ಪ್ರಾರಂಭವಾಯಿತ್ತು. ನಂತರ ಸಮಯಕ್ಕೆ ಸರಿಯಾಗಿ ಹೃದಯ ಬಡಿತವನ್ನು ಕಂಡುಕೊಂಡೆವು, ಯಾವುದೇ ದೋಷ ಕಾಣಲಿಲ್ಲ ಮತ್ತು ಆದ್ದರಿಂದ, ಗರ್ಭಧಾರಣೆಯೊಂದಿಗೆ ಮುಂದುವರೆದರು. ಮಗು ಹಾಗೂ ತಾಯಿ ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ. ಒಂದು ಮಗುವಿಗೆ ಜನ್ಮ ನೀಡಬೇಕು ಎಂಬ ತಾಯಿಯ ಭಾವನಾತ್ಮಕ ಹಂಬಲ ಈಡೇರಿದೆ ಎಂದು ಹೇಳಬಹುದು ಎಂದು ವೈದ್ಯರು ಹೇಳಿದ್ದಾರೆ.