ಬೆಂಗಳೂರು: `ಒಬ್ಬ ಇನ್ಸ್ಪೆಕ್ಟರ್ (Police Inspector) ಆಗಿರೋನು ತಾಲ್ಲೂಕಲ್ಲಿ 70, 80 ಲಕ್ಷ ಕೊಟ್ಟು ಕೆಲಸ ಮಾಡಲು ಆಗುತ್ತಾ?’ ಅನ್ನೋ ಹೇಳಿಕೆ ನನ್ನದಲ್ಲ. ಯಾರೋ ಹೇಳಿದ್ದನ್ನ ನಾನು ಹೇಳಿಕೊಂಡು ಹೋದೆ ಅಷ್ಟೇ. ಅದನ್ನೇ ಯಾರೋ ರೆಕಾರ್ಡ್ ಮಾಡಿದ್ದಾರೆ ಎಂದು ಸಚಿವ ಎಂಟಿಬಿ ನಾಗರಾಜ್ (MTB Nagaraj) ಕೊನೆಗೂ ಸತ್ಯ ಒಪ್ಪಿಕೊಂಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಂದೀಶ್ ಸಾವನ್ನಪ್ಪಿದ್ದಾರೆ ಅಂತಾ ಹಿಂದಿನ ಇನ್ಸ್ಪೆಕ್ಟರ್ ನನಗೆ ತಿಳಿಸಿದ್ರು. ಅಲ್ಲಿ ನೋಡಲು ಹೋದಾಗ ಕಾರ್ಯಕರ್ತರು 70-80 ಲಕ್ಷ ಕೊಟ್ಟು ಪೋಸ್ಟಿಂಗ್‌ಗೆ ಬಂದಿದ್ದ, ಈಗ ಹೃದಯಾಘಾತ (Heart Attack) ಆಗಿದೆ ಅಂತಾ ಹೇಳ್ತಿದ್ರು. ನಾನು 70-80 ಲಕ್ಷ ಕೊಟ್ಟು ಬಾಯಿಬಡಿದುಕೊಳ್ಳಲು ಬಂದಿದ್ನಾ? ಅಂತ ಕೇಳಿದ್ದೆ ಅಷ್ಟೇ ಹೊರತು, ಹಣ ಕೊಟ್ಟು ಬಂದಿದ್ದಾನೆ ಅಂತ ಹೇಳಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ರಾಜ್ಯೋತ್ಸವಕ್ಕೆ ಗಿಫ್ಟ್ – ನಾಳೆಯಿಂದ ಮೊಬೈಲ್‌ನಲ್ಲೇ ಮೆಟ್ರೋ ಟಿಕೆಟ್ ಖರೀಸಿದಿ
ನಾನು ಎಂದೂ ಸರ್ಕಾರಕ್ಕೆ (Government) ಹಣ ಕೊಟ್ಟಿದ್ದಾರೆ ಅಂತ ಹೇಳಿಲ್ಲ. ಈ ಬಗ್ಗೆ ಸಿಎಂ (CM Basavaraj Bommai) ತನಿಖೆ ಮಾಡೋದಾಗಿ ಹೇಳಿದ್ದಾರೆ. ಸಿಎಂ, ಗೃಹಸಚಿವ ರಾಜೀನಾಮೆ ಕೊಡಬೇಕು ಅಂತ ಹೇಳ್ತಿದ್ದಾರೆ. ತಪ್ಪಿತಸ್ಥರು ಯಾರು ಅಂತ ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ತನಿಖೆಗೆ (Investigation) ಒತ್ತಾಯಿಸಿದ್ದಾರೆ. ಇದನ್ನೂ ಓದಿ: ರಸ್ತೆಗುಂಡಿಗಳಿಂದಾದ ಸಾವನ್ನು ಸರ್ಕಾರಿ ಕೊಲೆ ಎಂದು ಪರಿಗಣಿಸಿ ಅಧಿಕಾರಿಗಳು, ಸಚಿವರನ್ನು ಆರೋಪಿಗಳನ್ನಾಗಿಸಿ: ಕಾಂಗ್ರೆಸ್
ಅಮಾನತು ಶಿಕ್ಷೆಗೆ ಗುರಿಯಾಗಿ ಧಾರುಣ ಸಾವಿಗೆ ತುತ್ತಾದ ಕೆ.ಆರ್.ಪುರ ಠಾಣೆ ಇನ್ಸಪೆಕ್ಟರ್ ನಂದೀಶ್ ಅವರ ಹೃದಯಾಘಾತಕ್ಕೆ ಕಾರಣವೇನು? ಇದು, ಇಡೀ ರಾಜ್ಯದ ಪ್ರಶ್ನೆ.
ಈಗ ಸರಕಾರವೇ ಸತ್ಯ ಹೇಳಿದೆ! ಸದ್ಯ, ಸರಕಾರವು ಸಾವಿನಲ್ಲೂ ಸತ್ಯ ಹೇಳುವ ಧೈರ್ಯ ಮಾಡಿದೆ!! ಶ್ರೀ @BSBommai ಸಂಪುಟ ಸಚಿವರೇ ವಿಷಯ ಬಹಿರಂಗ ಮಾಡಿದ್ದಾರೆ.1/7#CashForPosting pic.twitter.com/mXqghB6cHz
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) October 28, 2022
ರಾಜೀನಾಮೆ ಯಾಕೆ ಕೊಡಬೇಕು?
ರಾಜೀನಾಮೆ ಕೊಡುವ ಕೆಲಸ ನಾವು ಏನೂ ಮಾಡಿಲ್ಲ. ಹಣ ಕೊಟ್ಟಿರೋದು, ತೆಗೆದುಕೊಂಡಿರೋದ್ರ ಬಗ್ಗೆ ಸಿದ್ದರಾಮಯ್ಯ (Siddaramaiah), ಡಿಕೆಶಿ (Dk Shivakumar) ಸಾಕ್ಷಿ ಕೊಡಲಿ. ಒಬ್ಬ ಇನ್ಸ್ಪೆಕ್ಟರ್ ಆಗಿರೋನು ತಾಲ್ಲೂಕಲ್ಲಿ 70, 80 ಲಕ್ಷ ಕೊಟ್ಟು ಕೆಲಸ ಮಾಡಲು ಆಗುತ್ತಾ? ಅಂತಾ ಯಾರೋ ಹೇಳಿರೋದನ್ನಷ್ಟೇ ನಾನು ಹೇಳಿಕೊಂಡು ಹೋದೆ. ಅದನ್ನೇ ಯಾರೋ ರೆಕಾರ್ಡ್ ಮಾಡಿದ್ದಾರೆ. ಅದಕ್ಕೆ ರಾಜೀನಾಮೆ ಯಾಕೆ ಕೊಡಬೇಕು. ಬೇಕಿದ್ದರೆ ತನಿಖೆ ನಡೆಯಲಿ, ಯಾವುದೇ ತನಿಖೆಗೂ ನಾನು ಸಿದ್ಧ ಎಂದು ಸವಾಲ್ ಹಾಕಿದ್ದಾರೆ.
ನಮ್ಮ ಸರ್ಕಾರದಲ್ಲಿ ಯಾವುದೇ ಹಣ ಪಡೆದು ಪೋಸ್ಟಿಂಗ್ ನೀಡಿಲ್ಲ. ಉಚಿತವಾಗಿಯೇ ಪೋಸ್ಟಿಂಗ್ ಮಾಡ್ತಿದ್ದೀವಿ. ಯಾರೂ ಯಾರಿಗೂ ಹಣ ಕೊಡಬೇಕಿಲ್ಲ ಎಂದು ಮುಗುಳ್ನಕ್ಕಿದ್ದಾರೆ.