-24 ಗಂಟೆಯಲ್ಲಿ 74,383 ಮಂದಿಗೆ ಸೋಂಕು
ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 70 ಲಕ್ಷದ ಗಡಿ ದಾಟಿದ್ದು, 60,77,977 ಮಂದಿ ಗುಣಮುಖರಾಗಿದ್ದಾರೆ.
ಕಳೆದ 24 ಗಂಟೆಯಲ್ಲಿ 74,383 ಹೊಸ ಪ್ರಕರಣಗಳು ವರದಿಯಾಗಿದ್ದು, 918 ಸೋಂಕಿತರನ್ನ ಕೊರೊನಾ ಬಲಿ ಪಡೆದುಕೊಂಡಿದೆ. ಸದ್ಯ ದೇಶದಲ್ಲಿ 8,67,496 ಸಕ್ರಿಯ ಪ್ರಕರಣಗಳಿದ್ದು, ಸಾವನ್ನಪ್ಪಿದವರ ಸಂಖ್ಯೆ 1,08,334ಕ್ಕೆ ಏರಿಕೆಯಾಗಿದೆ.
Advertisement
India's #COVID19 tally crosses 70-lakh mark with a spike of 74,383 new cases & 918 deaths reported in the last 24 hours.
Total case tally stands at 70,53,807 including 8,67,496 active cases, 60,77,977 cured/discharged/migrated cases & 1,08,334 deaths: Union Health Ministry pic.twitter.com/Ynu0wOodzU
— ANI (@ANI) October 11, 2020
Advertisement
ನೆರೆಯ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಯಾವುದೇ ಬದಲಾವಣೆಗಳು ಕಾಣಿಸುತ್ತಿಲ್ಲ. ನಿನ್ನೆಯೂ ಮಹಾರಾಷ್ಟ್ರದಲ್ಲಿ 11,416 ಮಂದಿಗೆ ಸೋಂಕು ತಗುಲಿದ್ದು, 308 ಜನರು ಮರಣ ಹೊಂದಿದ್ದಾರೆ. ಕೊರೊನಾ ಪೀಡಿತ ರಾಜ್ಯಗಳ ಪೈಕಿ ಆಂಧ್ರ ಪ್ರದೇಶ ಮತ್ತು ಕರ್ನಾಟಕ ಎರಡು, ಮೂರನೇ ಸ್ಥಾನದಲ್ಲಿವೆ. ಆಂಧ್ರ ಪ್ರದೇಶದಲ್ಲಿ 46,624 ಸಕ್ರಿಯ ಪ್ರಕರಣಗಳಿದ್ರೆ, ಕರ್ನಾಟಕದಲ್ಲಿ 1,20,948 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
Advertisement