ಬೆಂಗಳೂರು: ರಾಜ್ಯ ಬಿಜೆಪಿ ಹಿರಿಯ ನಾಯಕ ವಸತಿ ಸಚಿವ ವಿ ಸೋಮಣ್ಣ ಅವರು ಇಂದು 70 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ವಿಜಯನಗರದ ಶಾಸಕರ ಕಛೇರಿ ಮುಂಭಾಗದಲ್ಲಿ ಸರಳವಾಗಿ ನೂರಾರು ಕಾರ್ಯಕರ್ತರ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಸಿಕೊಂಡಿದ್ದಾರೆ. ಇದನ್ನೂ ಓದಿ: ನಾಯಕತ್ವ ಬದಲಾವಣೆ ಚರ್ಚೆ ನಮ್ಮಲ್ಲಿ ಆಗಿರುವುದು ನಿಜ: ಈಶ್ವರಪ್ಪ
ನಿಮ್ಮ ಪ್ರೀತಿಯ ಶುಭಾಶಯಕ್ಕೆ ಧನ್ಯವಾದಗಳು ಶ್ರೀ @mepratap ಅವರೇ. ನಿಮ್ಮ ಬೆಂಬಲ ಮತ್ತು ಸಹಕಾರ ಹೀಗೆಯೇ ಇರಲಿ ಎಂದು ಬಯಸುತ್ತೇನೆ. https://t.co/rmMg93QGJn
— V. Somanna (@VSOMANNA_BJP) July 20, 2021
Advertisement
ಬಳಿಕ ಮಾತನಾಡಿದ ಅವರು, ಈ ಬಾರಿ ಹುಟ್ಟು ಹಬ್ಬ ಸಂಭ್ರಮ ಇಲ್ಲ. ಸಿದ್ದಗಂಗಾ ಶ್ರೀಗಳಾದ ಶಿವಕುಮಾರ್ ಸ್ವಾಮೀಜಿಗಳು ಮತ್ತು ಬಾಲಗಂಗಾಧರ ನಾಥ ಸ್ವಾಮಿಜಿ ಲಿಂಗೈಕ್ಯರಾದ ಮೇಲೆ ಆಚರಣೆ ನಿಲ್ಲಿಸಿದ್ದೇನೆ. ನಿನ್ನೆ ರಾತ್ರಿ ಸ್ಥಳೀಯ ಮುಖಂಡರು ಸಣ್ಣದೊಂದು ಪ್ರಚಾರ ಕೊಟ್ಟಿದ್ದಾರೆ. ಕಳೆದ 25 ವರ್ಷಗಳಿಂದ ಸಿದ್ದಗಂಗೆ ಶ್ರೀಗಳು ನನ್ನ ಹುಟ್ಟುಹಬ್ಬಕ್ಕೆ ಬರ್ತಾ ಇದ್ದರು. ಅವರು ಲಿಂಗೈಕ್ಯರಾದ ಮೇಲೆ ಅವರು ಇಲ್ಲ ಅನ್ನೊ ನೋವು ಕಾಡಬಾರದೆಂದು ಹುಟ್ಟುಹಬ್ಬ ಆಚರಣೆ ಮಾಡೋದು ನಿಲ್ಲಿಸಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ನಾನು ಮಂತ್ರಿಯಾಗಬೇಕೆಂದು ಬಿಜೆಪಿಗೆ ಬಂದವನಲ್ಲ: ಮಹೇಶ್ ಕುಮಟಳ್ಳಿ
Advertisement
ವಸತಿ ಸಚಿವರು ಹಾಗೂ ಆತ್ಮೀಯರಾದ ಶ್ರೀ ವಿ. ಸೋಮಣ್ಣ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.
ಭಗವಂತ ನಿಮಗೆ ಉತ್ತಮ ಆರೋಗ್ಯ ಹಾಗೂ ಯಶಸ್ಸು ಕರುಣಿಸಲಿ ಎಂದು ಹಾರೈಸುತ್ತೇನೆ.@VSOMANNA_BJP pic.twitter.com/M76rM28j7v
— Shashikala Jolle (@ShashikalaJolle) July 20, 2021
Advertisement
ನನ್ನ ಮೇಲಿನ ಪ್ರೀತಿ ವಿಶ್ವಾಸದಿಂದ ಜನ ಬರುತ್ತಾರೆ. ಇವತ್ತು ಬೇಡ ಅಂತ ಹೇಳಿದ್ದರು ಜನ ಬರುತ್ತಿದ್ದಾರೆ. ಕೊರೊನಾದಿಂದ ರಾಜ್ಯ ತತ್ತರಿಸಿದೆ. ಸಾಮಾಜಿಕ ಅಂತರದ ಬಗ್ಗೆ ನಾವೇ ಹೇಳ್ತೇವೆ. ಮತ್ತೆ ನಾವೇ ಆ ತಪ್ಪು ಆಗೋದು ಬೇಡ ಅಂತ ಕೆಲವು ವಿಷಯಗಳಿಗೆ ಕಡಿವಾಣ ಹಾಕಿದ್ದೆ. ಆದರೂ ಈ ರೀತಿ ಜನ ಬರ್ತಿದ್ದಾರೆ ಇದು ನನ್ನ ಮನಸ್ಸಿಗೂ ನೋವಾಗಿದೆ .ಮಾಧ್ಯಮಗಳ ಮುಖಾಂತರ ಸಾರ್ವಜನಿಕರನ್ನ ಕ್ಷಮೆ ಕೇಳುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಧಾರಾವಾಹಿ ನಟಿ ಚೈತ್ರಾ ರೈ ಸೀಮಂತ
Advertisement
ನನ್ನ ಜನ್ಮದಿನಕ್ಕೆ ಹಾರೈಸಿದ್ದಕ್ಕೆ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ಬೆಂಬಲ ಮತ್ತು ಸಹಕಾರ ಚಿರಕಾಲವಿರಲಿ ಎಂದು ಬಯಸುತ್ತೇನೆ. @ShashikalaJolle https://t.co/e52Kh6bBzV
— V. Somanna (@VSOMANNA_BJP) July 20, 2021
ನಾಲ್ಕು ದಶಕಗಳು ಜನಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ್ದೇನೆ, ಇರುವಷ್ಟು ದಿನ ಏನಾದರೂ ಮಾಡುವ ಆಸೆ ಇದೆ. ಗುಡಿಸಲಿನಲ್ಲಿ ವಾಸ ಮಾಡುವವರಿಗೂ ಮನೆ ಕಲ್ಪಿಸಲು ಮುಖ್ಯಮಂತ್ರಿಗಳು ನನಗೊಂದು ಅವಕಾಶ ಕೊಟ್ಟಿದ್ದಾರೆ. ಅದರಂತೆ ನಡೆಯುತ್ತೇನೆ. ಇದರ ಜೊತೆಗೆ ಮತ್ತೆ ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಭೀತಿ ಇದೆ. ಎಲ್ಲರು ಕೊರೊನಾ ನಿಯಮಗಳನ್ನ ಪಾಲಿಸಿ, ಕರ್ತವ್ಯ ನಿರ್ವಹಣೆ ಜೊತೆಗೆ ಸಾಮಾಜಿಕ ಅಂತರ ಪಾಲನೆ ಮಾಡೋಣ ಎಂದು ಕರೆ ನೀಡಿದ್ದಾರೆ.
ಮುಖ್ಯಮಂತ್ರಿಗಳ ಗೃಹಕಚೇರಿಯಲ್ಲಿ ನಮ್ಮ ನೆಚ್ಚಿನ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ ಎಸ್ ಯಡಿಯೂರಪ್ಪ ಅವರನ್ನು ಆತ್ಮೀಯವಾಗಿ ಭೇಟಿ ಮಾಡಲಾಯಿತು.
Greeted honourable CM of Karnataka, Sri BS Yediyurappa at his home office ‘Cauvery’. pic.twitter.com/Ad4vRmVerT
— V. Somanna (@VSOMANNA_BJP) July 20, 2021
ಇಂದು ಜನ್ಮದಿನದ ಪ್ರಯುಕ್ತ ಕುಟುಂಬದವರೊಂದಿಗೆ, ವಿಜಯನಗರದ ಶ್ರೀ ಆದಿಚುಂಚನಗಿರಿ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆಯಲಾಯಿತು. pic.twitter.com/p5Dpz9W5XG
— V. Somanna (@VSOMANNA_BJP) July 20, 2021