ಮೈಸೂರು: ಐತಿಹಾಸಿಕ ತಲಕಾಡು ಪಂಚಲಿಂಗದ ದರ್ಶನ ಇಂದಿನಿಂದ ಪ್ರಾರಂಭವಾಗಲಿದೆ. ಸತತ 7 ವರ್ಷಗಳ ನಂತರ ಮೈಸೂರಿನ ಟಿ.ನರಸೀಪುರದ ತಲಕಾಡಿನಲ್ಲಿ ಪಂಚಲಿಂಗ ದರ್ಶನ ಸಿಗಲಿದೆ.
ವೈದ್ಯನಾಥೇಶ್ವರ, ಅರ್ಕೇಶ್ವರ, ಪಾತಾಳೇಶ್ವರ, ಮರಳೇಶ್ವರ, ಮಲ್ಲಿಕಾರ್ಜುನೇಶ್ವರ ದೇವಾಲಯಲ್ಲಿ ಪಂಚಲಿಂಗ ದರ್ಶನ ನಡೆಯುತ್ತಿದೆ. ಇಂದಿನಿಂದ ಪ್ರಾರಂಭವಾಗಿ 10 ದಿನಗಳ ಕಾಲ ಪಂಚಲಿಂಗ ದರ್ಶನ ನಡೆಯಲಿದೆ.
Advertisement
Advertisement
ವೈದ್ಯನಾಥೇಶ್ವರ ದೇವಾಲಯದಿಂದ ಪಂಚಲಿಂಗ ದರ್ಶನಕ್ಕೆ ಚಾಲನೆ ನೀಡಲಾಗುತ್ತದೆ. ಮೊದಲ ಪೂಜೆಯನ್ನು ವೈದ್ಯನಾಥೇಶ್ವರಗೆ ಸಲ್ಲಿಸಿದ ನಂತರ ಪಂಚಲಿಂಗ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಇಂದು ಸಂಜೆ 6.30 ರಿಂದ ಪಂಚಲಿಂಗ ದರ್ಶನಕ್ಕೆ ಅವಕಾಶ ಪ್ರಾರಂಭವಾಗುತ್ತದೆ.
Advertisement
Advertisement
ಅಪರೂಪಕ್ಕೆ 5 ಕಾರ್ತಿಕ ಸೋಮವಾರ ಬರುವ ವರ್ಷದಲ್ಲಿ ಆಚರಣೆಯಾಗುವ ಪಂಚಲಿಂಗ ದರ್ಶನವಾಗಿದೆ. ಈ ಹಿಂದೆ 2013ರಲ್ಲಿ 5 ಕಾರ್ತಿಕ ಸೋಮವಾರ ಬಂದಿದ್ದಾಗ ಪಂಚಲಿಂಗ ದರ್ಶನ ಆಚರಣೆ ಮಾಡಲಾಗಿತ್ತು. ಇದೀಗ 7 ವರ್ಷದ ನಂತರ ಮತ್ತೆ ಬಂದ 5 ಕಾರ್ತಿಕ ಸೋಮವಾರದ ಹಿನ್ನೆಲೆ ಪಂಚಲಿಂಗ ದರ್ಶನ ಆಚರಣೆಯಾಗುತ್ತಿದೆ. ಈ ಬಾರಿ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಸರಳವಾಗಿ ಪಂಚಲಿಂಗ ದರ್ಶನ ಆಚರಣೆ ಮಾಡಲಾಗುತ್ತಿದೆ.
ಕೋವಿಡ್ ಹಿನ್ನೆಲೆಯಲ್ಲಿ 1000 ಮಂದಿ ಮಾತ್ರ ಪಂಚಲಿಂಗ ದರ್ಶನದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದ್ದು, ತಾಂತ್ರಿಕ ಸಲಹಾ ಸಮಿತಿ ಮಾರ್ಗಸೂಚಿಯಂತೆ ಪಂಚಲಿಂಗ ದರ್ಶನ ಆಚರಣೆ ನಡೆಯಲಿದೆ.