ಮಾಸ್ಕೋ: ಮೊದಲ ಬಾರಿಗೆ 7 ಮಂದಿಯಲ್ಲಿ ಹಕ್ಕಿ ಜ್ವರ ಕಾಣಿಸಿಕೊಳ್ಳುವ ಮೂಲಕವಾಗಿ ಜನರಲ್ಲಿ ಆತಂಕವನ್ನುಂಟು ಮಾಡಿದ ಘಟನೆ ರಷ್ಯಾದಲ್ಲಿ ನಡೆದಿದೆ.
ರಷ್ಯಾದ ಕೋಳಿ ಫಾರಂನಲ್ಲಿ ಕೆಲಸ ಮಾಡುವ 7 ಮಂದಿ ಸಿಬ್ಬಂದಿಯಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದೆ. ಈ 7 ಮಂದಿ ಆರೋಗ್ಯವಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಬೇರೆ ಕೋಳಿ ಫಾರಂಗಳಲ್ಲಿ ಹಕ್ಕಿಜ್ವರ ಬಂದಿರಬಹುದೆಂಬ ನಿಟ್ಟಿನಲ್ಲಿ ಎಲ್ಲೆಡೆ ತಪಾಸಣೆ ಮಾಡಲು ರಷ್ಯಾ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
Advertisement
Advertisement
ಹಕ್ಕಿಯಿಂದ ಸೋಂಕು ಹರಡಿರುವ ಮೊದಲ ಪ್ರಕರಣವಿದು. ದಕ್ಷಿಣ ರಷ್ಯಾದ ಕೋಳಿ ಘಟಕದಲ್ಲಿ 7 ಕಾರ್ಮಿಕರಿಗೆ ಸೋಂಕು ಇರುವುದು ದೃಢಪಟ್ಟಿದೆ. ಹಕ್ಕಿಜ್ವರ ತಳಿಗಳಾದ H5N1, H7N9, ಮತ್ತು H9N2 ಕೂಡಾ ಮಾನವರಿಗೆ ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
Advertisement
Advertisement
ಹಕ್ಕಿಜ್ವರ ಹರಡುವುದನ್ನು ತಡೆಗಟ್ಟಲು ನೆರೆಯ ಕೇರಳ, ತಮಿಳುನಾಡು, ರಾಜಸ್ಥಾನ, ಹಿಮಾಚಲ ಪ್ರದೇಶದಲ್ಲಿ ಸಾವಿರಾರು ಪಕ್ಷಿಗಳನ್ನು ಕೊಲ್ಲಲಾಗಿತ್ತು. ಆದರೆ ಹಕ್ಕಿಗಳಿಂದ ಮಾನವನಿಗೂ ಹಕ್ಕಿಜ್ವರದ ಸೋಂಕು ಹರಡಲಿದೆ ಎಂಬುದು ರಷ್ಯಾದಲ್ಲಿ ಸಾಬೀತಾಗಿದೆ.