ಚೆನ್ನೈ: ಎರಡನೇ ತರಗತಿಯ ಬಾಲಕಿಯೊಬ್ಬಳು ತನ್ನ ತಂದೆ ಕೊಟ್ಟ ಮಾತನ್ನು ನಡೆಸಿಕೊಟ್ಟಿಲ್ಲ ಎಂದು ಅಪ್ಪನ ವಿರುದ್ಧವೇ ಪೊಲೀಸರಿಗೆ ದೂರು ನೀಡಿರುವ ಘಟನೆ ತಮಿಳುನಾಡಿದ ವೆಲ್ಲೂರಿನ ಅಂಬೂರ್ ನಲ್ಲಿ ನಡೆದಿದೆ.
7 ವರ್ಷದ ಇ-ಹನಿಫಾ ಝಾರಾ ತಂದೆ ವಿರುದ್ಧ ದೂರು ನೀಡಿದ ಬಾಲಕಿ. ಈಕೆ ಸೋಮವಾರ ತನ್ನ ತಾಯಿ ಜೊತೆ ಮಹಿಳಾ ಪೊಲೀಸ್ ಠಾಣೆಗೆ ಹೋಗಿದ್ದು, ಸಬ್ ಇನ್ ಪೆಕ್ಟರ್ ವಾಲಾರ್ಮತಿ ಅವರಿಗೆ, ನಮ್ಮ ತಂದೆ ಇಹ್ಸನುಲ್ಲಾ ಶೌಚಾಲಯ ಕಟ್ಟಿಸುತ್ತೇನೆ ಎಂದು ಹೇಳಿದ್ದರು. ಆದರೆ ಅವರು ಮಾತು ತಪ್ಪಿದ್ದಾರೆ. ಆದ್ದರಿಂದ ಅವರನ್ನು ಬಂಧಿಸಿ ಎಂದು ದೂರು ನೀಡಿದ್ದಾಳೆ.
Advertisement
Advertisement
ತಂದೆಯ ಭರವಸೆ ಏನು?
ಬಾಲಕಿಯ ತಂದೆ, ನೀನು ತರಗತಿಯಲ್ಲಿ ಮೊದಲ ರ‍್ಯಾಂಕ್ ಪಡೆದರೆ ಮನೆಯಲ್ಲಿ ಶೌಚಾಲಯ ನಿರ್ಮಾಣ ಕಟ್ಟಿಸುವುದಾಗಿ ಎಲ್‍ಕೆಜಿಯಲ್ಲಿರುವಾಗ ಮಾತು ಕೊಟ್ಟಿದ್ದಾರಂತೆ. ಅದರಂತೆಯೇ ಬಾಲಕಿ ತರಗತಿಗೆ ಮೊದಲು ಬಂದಿದ್ದಾಳೆ. ಆದರೆ ಈವರೆಗೂ ತಂದೆ ಶೌಚಾಲಯ ನಿರ್ಮಾಣ ಮಾಡಿಲ್ಲವೆಂದು ಬಾಲಕಿ ದೂರು ನೀಡಿದ್ದಾಳೆ.
Advertisement
ಈ ಬಗ್ಗೆ ಶಿಕ್ಷಕರಿಗೆ ನಾನು ಹೇಳಲಿಲ್ಲ. ನನಗೆ ಶೌಚಾಲಯಕ್ಕೆ ಹೊರಗಡೆ ಹೋಗುವುದಕ್ಕೆ ನಾಚಿಕೆ ಆಗುತ್ತದೆ. ನಾನು ಪೊಲೀಸ್ ಠಾಣೆಗೆ ಹೋಗುವುದನ್ನು ನನ್ನ ತಾಯಿ ತಡೆಯಲು ಪ್ರಯತ್ನಿಸಿದರು. ಆದರೂ ನಾನೇ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಬೇಕು ಎಂದು ಒತ್ತಾಯಿಸಿದೆ ಎಂದು ಬಾಲಕಿ ಹೇಳಿದ್ದಾಳೆ.
Advertisement
ಝಾರಾ ತಾನು ಪಡೆದುಕೊಂಡಿದ್ದ 20 ಪದಕ ಹಾಗೂ ಪ್ರಮಾಣ ಪತ್ರ ಹಿಡಿದು ಪೊಲೀಸ್ ಠಾಣೆಗೆ ಬಂದಿದ್ದಳು. ಬಾಲಕಿ ದೂರು ನೀಡಿದ ಬಳಿಕ ನೈರ್ಮಲ್ಯ ಕಚೇರಿಗೆ ಫೋನ್ ಮಾಡಿ ಬಾಲಕಿ ಕುಟುಂಬದಲ್ಲಿ ಶೌಚಾಲಯ ನಿರ್ಮಾಣಕ್ಕೆ ಆರ್ಥಿಕ ಸಹಾಯ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ತಿಳಿದ ಅಂಬೂರ್ ಪುರಸಭೆಯ ಅಧಿಕಾರಿಯೊಬ್ಬರು ಬಾಲಕಿಯ ಮನೆಗೆ ಭೇಟಿ ನೀಡಿದ್ದು, ಶೌಚಾಲಯವನ್ನು ತಕ್ಷಣವೇ ನಿರ್ಮಾಣ ಮಾಡಿಸಿಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv