ಬೆಂಗಳೂರು: ಆ ಕುಟುಂಬ ದೂರದ ಊರಿನಿಂದ ಕೆಲಸ ಅರಸಿ ಬೆಂಗಳೂರಿಗೆ ಬಂದಿತ್ತು. ಅದರಂತೆ ಕೆಲಸ ಮಾಡಿ ತಮ್ಮ ಮಗನನ್ನು ಒಳ್ಳೆಯ ವಿದ್ಯಾವಂತನನ್ನಾಗಿ ಮಾಡಬೇಕು ಅಂತ ಕನಸು ಕಟ್ಟಿಕೊಂಡಿದ್ರು. ಅದರೆ ವಿಧಿಬರಹವೇ ಬೇರೆಯಾಗಿತ್ತು. ಅವರ ಮಗನನ್ನು ಸಾವಿನ ಮನೆ ಸೇರಿಸಿದೆ.
ಗುಂಪು ಕಟ್ಟಿಕೊಂಡು ನಿಂತಿರೋ ಜನ. ಮಗುವನ್ನು ಅವಸರದಲ್ಲಿ ಎತ್ತಿಕೊಂಡು ಓಡುತ್ತಿರೋ ಅಗ್ನಿಶಾಮಕ ಸಿಂಬಂದಿ. ಮಗು ಬದುಕಿದ್ರೆ ಸಾಕು ಅಂತ ದೇವರನ್ನು ನೆನೆಯುತ್ತಿರೋ ಅಲ್ಲಿನ ಸ್ಥಳೀಯರು, ಈ ಎಲ್ಲ ದೃಶ್ಯಗಳು ಕಂಡುಬಂದಿದ್ದು ಬೆಂಗಳೂರಿನ ಕೆಂಗೇರಿ ಬಳಿಯ ನಾಗದೇವನಹಳ್ಳಿಯ ರಾಜ ಕಾಲುವೆ ಬಳಿ.
Advertisement
Advertisement
ಬುಧವಾರ ಸಂಜೆ 4:30 ಸುಮಾರಿಗೆ ನಾಗದೇವನಹಳ್ಳಿ ರಾಜಾಕಾಲುವೆ ಬಳಿ 7 ವರ್ಷದ ಬಾಲಕ ರಾಕೇಶ್ ಮಲವಿಸರ್ಜನೆಗೆ ತೆರಳಿದ್ದ. ಇದೇ ವೇಳೆ ರಾಕೇಶ್ ಕಾಲು ಜಾರಿ ಕಾಲುವೆಗೆ ಬಿದ್ದು ಸಾವನಪ್ಪಿದ್ದ. ಮಲವಿಸರ್ಜನೆಗೆ ತೆರಳಿದ್ದ ಮಗ 1 ಗಂಟೆಯಾದ್ರೂ ಬರದ ಹಿನ್ನೆಲೆಯಲ್ಲಿ ರಾಕೇಶ್ ಕುಟುಂಬದವರು ಕಾಲುವೆ ಬಳಿ ಹೋಗಿ ನೋಡಿದಾಗ ರಾಕೇಶ್ ಕಾಲುವೆಗೆ ಬಿದ್ದಿರುವುದು ತಿಳಿಯಿತು. ಬಳಿಕ ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಂಬ್ಬಂದಿ ಮತ್ತು ಪೊಲೀಸರು ಸತತ ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನೆಡೆಸಿ ಕಾಲುವೆಯಲ್ಲಿ ಬಿದ್ದದ್ದ ರಾಕೇಶ್ ಮೃತ ದೇಹವನ್ನು ಹೊರತೆಗೆದ್ರು.
Advertisement
Advertisement
ಮೃತ ಬಾಲಕ ರಾಕೇಶ್ ಮೂಲತಃ ಗುಲ್ಬರ್ಗ ಜಿಲ್ಲೆಯ ಹೊಡಗಿ ಗ್ರಾಮದ ನಿವಾಸಿಗಳಾದ ಭಿಮಾರಾಯ ಮತ್ತು ನಾಗಮ್ಮ ದಂಪತಿಯ ಮಗ. ಮೃತ ರಾಕೇಶ್ ತಂದೆ ಕುಟುಂಬ ಸಮೇತ ಬೆಂಗಳೂರಿನ ನಾಗದೇವನಹಳ್ಳಿಗೆ ಗಾರೆ ಕೆಲಸಕ್ಕಾಗಿ ಬಂದು ಕೆಲಸ ಮಾಡುತ್ತಿದ್ದರು.
ಘಟನೆ ಕುರಿತು ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೊತೆಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮೇಯರ್ ಪದ್ಮಾವತಿ ಮೃತ ರಾಕೇಶ್ ಕುಟುಂಬಕ್ಕೆ ಒಂದು ಸ್ಲಮ್ ಬೋರ್ಡ್ ಮನೆ ಮತ್ತು ಪರಿಹಾರ ನೀಡಿ ಕಾಲುವೆ ಒತ್ತುವರಿ ಮಾಡಿರುವವರ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳವುದಾಗಿ ಭರವಸೆ ನೀಡಿದ್ರು. ಸ್ಥಳದಲ್ಲೇ 1 ಲಕ್ಷ ರೂಪಾಯಿಯನ್ನು ತತ್ಕಾಲಿಕ ಪಾರಿಹಾರವಾಗಿ ಘೋಷಿಸಿದ್ರು.