ಮಂಗಳೂರು: ಮಕ್ಕಳಾಟ ಮಾಡಲು ಹೋಗಿ ಬಾಲಕನೊಬ್ಬ ಮೃತಪಟ್ಟ ಘಟನೆ ಮಂಗಳೂರಿನ ಕಂಕನಾಡಿಯ ವಾಸ್ ಲೇನ್‍ನಲ್ಲಿರುವ 25 ವರ್ಷದ ಹಳೆಯ ಶಮಾ ಅಪಾರ್ಟ್‍ಮೆಂಟ್ ನಲ್ಲಿ ನಡೆದಿದೆ.
ಮಹಮ್ಮದ್ ಸಿಮಕ್(7) ಮೃತಪಟ್ಟ ಬಾಲಕ. ತಾಯಿ ಜೊತೆಗೆ ಹೊರ ಹೋಗಿ ಹಿಂತಿರುಗಿ ಫ್ಲಾಟ್ ಗೆ ಬರುತ್ತಿದ್ದಾಗ ಓಡಿ ಬಂದಿದ್ದ ಸಿಮಕ್, ಲಿಫ್ಟ್ ಬಾಗಿಲು ಹಾಕಿ ತಾಯಿಯನ್ನು ಬಿಟ್ಟು ಮೇಲೆ ಹೋಗಿದ್ದಾನೆ.
Advertisement
ಆದರೆ ಒಬ್ಬನೇ ತೆರಳುವಾಗ ಹೆದರಿದ ಬಾಲಕ ನಡುವಲ್ಲಿ ಮ್ಯಾನ್ವಲ್ ಲಿಫ್ಟ್ ಆಗಿದ್ದರಿಂದ ಬಾಗಿಲು ತೆರೆದಿದ್ದಾನೆ. ಅಲ್ಲದೆ ಬಾಗಿಲ ಸಂದಿನಲ್ಲಿ ಹೊರಗೆ ಹೋಗಲು ಯತ್ನಿಸಿದ್ದಾನೆ. ಇದೇ ವೇಳೆ ಲಿಫ್ಟ್ ಚಲಿಸಿದ್ದು ಬಾಲಕ ನಡುವೆ ಸಿಕ್ಕಿಕೊಂಡು ದುರಂತ ಸಾವು ಕಂಡಿದ್ದಾನೆ. ಮೃತ ಬಾಲಕ ಅಹಮ್ಮದ್ ಬಾಸಿಂ ಎಂಬವರ ಪುತ್ರ ಎಂದು ಹೇಳಲಾಗಿದೆ.
Advertisement
ಸದ್ಯ ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv