ಪಾಕಿಸ್ತಾನದಲ್ಲಿ ಭಯೋತ್ಪಾದಕರಿಂದ ಗುಂಡಿನ ದಾಳಿ – ಮಲಗಿದ್ದಲ್ಲೇ 7 ಕಾರ್ಮಿಕರು ಸಾವು

Public TV
1 Min Read
Pakistan Gwadar Port

ಇಸ್ಲಾಮಾಬಾದ್‌: ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಗ್ವಾದರ್ ಬಂದರಿನ (Gwadar Port) ಬಳಿಯ ತಮ್ಮ ವಸತಿ ಕ್ವಾರ್ಟರ್ಸ್‌ನಲ್ಲಿ ಅಪರಿಚಿತ ಬಂದೂಕುಧಾರಿ ಮನಬಂದಂತೆ ಗುಂಡು ಹಾರಿಸಿ, ಸ್ಥಳದಲ್ಲಿ ಮಲಗಿದ್ದ 7 ಮಂದಿ ಕಾರ್ಮಿಕರನ್ನು ಹತ್ಯೆ ಮಾಡಿದ್ದಾನೆ.

ಪಾಕಿಸ್ತಾನದ (Pakistan) ಅತ್ಯಂತ ಜನನಿಬಿಡ ಪ್ರಾಂತ್ಯವಾದ ಪಂಜಾಬ್‌ಗೆ ಸೇರಿದ ಕಾರ್ಮಿಕರ ಹತ್ಯೆ ಮಾಡಲಾಗಿದೆ. ಸುರಬಂದರ್‌ನ ಕ್ಷೌರಿಕ ಅಂಗಡಿಯಲ್ಲಿ ಇವರು ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ. ಸುರಬಂದರ್ ಪ್ರದೇಶದ ಫಿಶ್ ಹಾರ್ಬರ್ ಜೆಟ್ಟಿ ಬಳಿ ಗುಂಡಿನ ದಾಳಿ ನಡೆದಿದ್ದು, ಓರ್ವ ವ್ಯಕ್ತಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಆಸ್ಪತ್ರೆ ಬಿಲ್‌ ಕಟ್ಟಲು ಹಣವಿಲ್ಲ ಅಂತಾ ರೋಗಿ ಪತ್ನಿಯನ್ನೇ ಕೊಂದ ಪತಿ

FotoJet 5 8

ಗಾಯಗೊಂಡ ವ್ಯಕ್ತಿಯನ್ನು ಗ್ವಾದರ್‌ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಸಾವಿಗೀಡಾದ 7 ಕಾರ್ಮಿಕರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಗ್ವಾದರ್ ಸ್ಟೇಷನ್ ಹೌಸ್ ಅಧಿಕಾರಿ (ಎಸ್‌ಎಚ್‌ಒ) ಮೊಹ್ಸಿನ್ ಅಲಿ ತಿಳಿಸಿದ್ದಾರೆ.

ಬಲೂಚಿಸ್ತಾನ ಮುಖ್ಯಮಂತ್ರಿ ಮಿರ್ ಸರ್ಫ್ರಾಜ್ ಬುಗ್ತಿ ಅವರು ದಾಳಿಯನ್ನು ಖಂಡಿಸಿದ್ದಾರೆ. ದುಷ್ಕರ್ಮಿಗಳನ್ನು ಬಿಡಲಾಗುವುದಿಲ್ಲ. ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ನೆರವು ನೀಡುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಬ್ರೆಜಿಲ್‌ನಲ್ಲಿ ಹೆಚ್ಚಿದ ಪ್ರವಾಹ ತೀವ್ರತೆ – ಸಾವಿನ ಸಂಖ್ಯೆ 78ಕ್ಕೆ ಏರಿಕೆ, 105 ಮಂದಿ ನಾಪತ್ತೆ!

ನಾವು ಭಯೋತ್ಪಾದಕರು ಮತ್ತು ಅವರಿಗೆ ಸಹಾಯ ಮಾಡುವವರನ್ನು ಮಟ್ಟಹಾಕುತ್ತೇವೆ ಎಂದಿದ್ದಾರೆ. ಬಲೂಚಿಸ್ತಾನದ ಗೃಹ ಸಚಿವ ಮಿರ್ ಜಿಯಾ ಉಲ್ಲಾ ಲಾಂಗೌ ಅವರು, ಮುಗ್ಧ ಕಾರ್ಮಿಕರ ಹತ್ಯೆಯು ಹೇಡಿತನದ ಕೃತ್ಯ ಎಂದು ವಾಗ್ದಾಳಿ ನಡೆಸಿದ್ದಾರೆ.

Share This Article