ಚಾಮರಾಜನಗರ: ದೇಶಾದ್ಯಂತ ದೀಪ ಬೆಳಗಿಸಿ ಸಡಗರ ಸಂಭ್ರಮದಿಂದ ದೀಪಾವಳಿ ಹಬ್ಬವನ್ನ ಆಚರಿಸಲಾಗುತ್ತಿದೆ. ಆದರೆ ಚಾಮರಾಜನಗರದ (Chamarajanagara) ಈ ಏಳು ಗ್ರಾಮಗಳಲ್ಲಿ ದೀಪಾವಳಿಯ (Deepavali) ಸಡಗರ-ಸಂಭ್ರಮ ಯಾವುದೂ ಕಾಣುತ್ತಿಲ್ಲ. ಇದಕ್ಕೆ ಕಾರಣ ಮಂಗಳವಾರ ಹಬ್ಬ ಬಂದಿರುವುದು. ಹಾಗಾದರೆ ಈ ಗ್ರಾಮಗಳಲ್ಲಿ ದೀಪಾವಳಿ ಹಬ್ಬ ಯಾವಾಗ ಆಚರಿಸುತ್ತಾರೆ? ಯಾಕೆ ಬುಧವಾರದ ದಿನ ಹೊರತು ಪಡಿಸಿ ಉಳಿದ ದಿನಗಳಲ್ಲಿ ಹಬ್ಬ ಆಚರಿಸಲ್ಲ ಎಂಬ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಹೌದು, ದೀಪದಿಂದ ದೀಪವನ್ನು ಹಚ್ಚುತ್ತಾ ಮನೆ, ಮನಗಳಲ್ಲಿ ಸಂಭ್ರಮದ ವಾತಾವರಣ ಸೃಷ್ಟಿ ಮಾಡುವುದೇ ದೀಪಾವಳಿ ಹಬ್ಬ. ದೇಶಾದ್ಯಂತ ಸಂಭ್ರಮ, ಸಡಗರದಿಂದ ದೀಪಾವಳಿಯನ್ನ ಆಚರಿಸಲಾಗುತ್ತಿದೆ. ಆದರೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ (Gundlupet) ತಾಲೂಕಿನ ಬೆಂಡಗಳ್ಳಿ, ವೀರನಪುರ, ಬನ್ನಿತಾಳಪುರ, ಮಾಡ್ರಹಳ್ಳಿ, ನಲ್ಲೂರು, ಮಳವಳ್ಳಿ ಹಾಗೂ ನೇನೆಕಟ್ಟೆ ಗ್ರಾಮಗಳಲ್ಲಿ ಇಂದು (ಭಾನುವಾರ) ದೀಪಾವಳಿ ಹಬ್ಬವನ್ನ ಆಚರಿಸುತ್ತಿಲ್ಲ. ಇದಕ್ಕೆ ಕಾರಣ ದೀಪಾವಳಿಯ ಬಲಿಪಾಡ್ಯಮಿ ಮಂಗಳವಾರ ಬಂದಿರುವುದು. ಇದನ್ನೂ ಓದಿ: ದೀಪಾವಳಿ: ವ್ಯಾಪಾರ ವೃದ್ಧಿಗೆ ಮಾಡಿ ಧನಲಕ್ಷ್ಮಿ ಪೂಜೆ
Advertisement
Advertisement
ಈ ಮೇಲಿನ 7 ಗ್ರಾಮಗಳಲ್ಲಿ ಹಿಂದಿನ ಕಾಲದಿಂದಲೂ ದೀಪಾವಳಿಯ ಬಲಿಪಾಡ್ಯಮಿ ಬುಧವಾರ ಬಿಟ್ಟು ವಾರದ ಬೇರೆ ಯಾವುದೇ ದಿನಗಳಲ್ಲಿ ಬಂದರೂ ಆಚರಿಸುವುದಿಲ್ಲ. ಬದಲಾಗಿ ಹಬ್ಬವನ್ನ ಮುಂದಿನ ಬುಧವಾರ ಆಚರಿಸುತ್ತಾರೆ. ಬುಧವಾರದಂದು ಹೊಸ ಬಟ್ಟೆ ತೊಟ್ಟು ದೇವರಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ರಾಸುಗಳಿಗೆ ಎಣ್ಣೆ ಸ್ನಾನ ಮಾಡಿಸಿ ಮನೆಯಲ್ಲಿ ಸಿಹಿ ಊಟ ಮಾಡುತ್ತಾರೆ. ಕಳೆದ ಮೂರು ತಲೆಮಾರುಗಳಿಂದ ಈ ಏಳು ಗ್ರಾಮದವರು ಬುಧವಾರವೇ ಹಬ್ಬ ಆಚರಿಸುವ ಸಂಪ್ರದಾಯ ಪಾಲಿಸಿಕೊಂಡು ಬಂದಿದ್ದಾರೆ. ಅಷ್ಟಕ್ಕೂ ಬುಧವಾರವೇ ಏಕೆ ಹಬ್ಬ ಆಚರಿಸಬೇಕು ಎಂಬ ಪ್ರಶ್ನೆಗೆ ಗ್ರಾಮದವರ ಉತ್ತರ ಹೀಗಿದೆ.
Advertisement
Advertisement
ಬುಧವಾರ ಹೊರತುಪಡಿಸಿ ಬೇರೆ ಯಾವ ದಿನದಲ್ಲಿ ಹಬ್ಬ ಆಚರಿಸಿದರೆ ಊರಿಗೆ ಕೆಡಕಾಗುತ್ತದೆ. ರಾಸುಗಳು ಜಾನುವಾರುಗಳು ಇದ್ದಕ್ಕಿದ್ದಂತೆ ಸಾವನ್ನಪ್ಪುತ್ತವೆ ಎಂಬ ನಂಬಿಕೆ ಇದೆ. ಹಾಗಾಗಿ ನೂರಾರು ವರ್ಷಗಳಿಂದ ದೀಪಾವಳಿ ಹಬ್ಬವನ್ನ ಬುಧವಾರವನ್ನ ಹೊರತು ಪಡಿಸಿ ಇನ್ಯಾವುದೇ ದಿನದಲ್ಲಿ ಬಂದರೂ ಸುತ್ತಮುತ್ತ 7 ಗ್ರಾಮದ ಜನರು ಆಚರಿಸುವುದಿಲ್ಲ. ಬುಧವಾರದಂದು ದೇವಸ್ಥಾನದಿಂದ ತೀರ್ಥ ತಂದು ಹಸುಗಳಿಗೆ ಪೂಜೆ ಮಾಡಿ ಬಳಿಕ ಹಸುಗಳನ್ನ ಊರಿನ ಸುತ್ತ ಒಂದು ಸುತ್ತು ಹಾಕಿಸಲಾಗುವುದು. ಇದನ್ನೂ ಓದಿ: ಅಯೋಧ್ಯೆಯಲ್ಲಿ ದೀಪದಿಂದ ಎಣ್ಣೆ ಕದ್ದ ಮಕ್ಕಳು; ವೀಡಿಯೋ ಹಂಚಿಕೊಂಡ ಅಖಿಲೇಶ್ ಯಾದವ್