ನವದೆಹಲಿ: ಭಾರತೀಯ ಸೇನೆಯ 7 ಜನ ನಿವೃತ್ತ ಅಧಿಕಾರಿಗಳು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ನೇತೃತ್ವದಲ್ಲಿ ಲೆಫ್ಟಿನೆಂಟ್ ಜನರಲ್‍ಗಳಾದ ಜೆಬಿಎಸ್ ಯಾದವ್, ಆರ್.ಎನ್ ಸಿಂಗ್, ಎಸ್‍ಕೆ ಪಟ್ಯಾಲ್, ಸುನಿತ್ ಕುಮಾರ್, ನಿತಿನ್ ಕೊಹ್ಲಿ, ಕರ್ನಲ್ ಆರ್.ಕೆ ತ್ರಿಪಾಠಿ ಹಾಗೂ ವಿಂಗ್ ಕಮಾಂಡರ್ ನವನೀತ್ ಮಾಗೋನ್ ಅವರು ಬಿಜೆಪಿ ಸೇರಿದ್ದಾರೆ. ಇದನ್ನೂ ಓದಿ: ಫಸ್ಟ್ ಟೈಂ ಕಾಂಗ್ರೆಸ್ಸಿಗಿಂತ ಬಿಜೆಪಿ ಹೆಚ್ಚಿನ ಕ್ಷೇತ್ರದಲ್ಲಿ ಸ್ಪರ್ಧೆ
Advertisement
Delhi: 7 veteran officers join Bharatiya Janata Party (BJP) in presence of Defence Minister Nirmala Sitharaman. Lt Gen JBS Yadav, Lt Gen R N Singh, Lt Gen SK Patyal, Lt Gen Sunit Kumar, Lt Gen Nitin Kohli, Colonel RK Tripathi, WG Cdr Navneet Magon joined the party at the BJP HQ. pic.twitter.com/bA00JrWCKs
— ANI (@ANI) April 27, 2019
Advertisement
ಲೋಕಸಭಾ ಚುನಾವಣೆ ಘೋಷಣೆ ಆಗುತ್ತಿದ್ದಂತೆ ನಾಯಕರು, ಸೆಲಿಬ್ರಿಟಿಗಳು, ಅಧಿಕಾರಿಗಳು ಸೇರಿದಂತೆ ಅನೇಕರು ಬಿಜೆಪಿ ಸೇರಿದ್ದಾರೆ. ಹೀಗಾಗಿ ಮೊದಲ ಬಾರಿಗೆ ಬಿಜೆಪಿಯು ಕಾಂಗ್ರೆಸ್‍ಗಿಂತ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಕಣಕ್ಕೆ ಇಳಿದಿದೆ.
Advertisement
ಸೇನಾ ಪಡೆ ಮಾಜಿ ಉಪ ಮುಖ್ಯಸ್ಥರಾಗಿದ್ದ ಲೆಫ್ಟಿನಂಟ್ ಜನರಲ್ ಶರತ್ ಚಂದ್ ಅವರು ಇದೇ ತಿಂಗಳ ಆರಂಭದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ನೇತೃತ್ವದಲ್ಲಿ ಬಿಜೆಪಿ ಸೇರಿದ್ದರು.