ಶೇರುದಾರರಿಗೆ ಬರೆದ ಪತ್ರದಲ್ಲಿ 7 ಬಾರಿ ಭಾರತದ ಹೆಸರನ್ನು ಉಲ್ಲೇಖಿಸಿದ ಜೆಫ್ ಬೆಜೊಸ್

Public TV
2 Min Read
Amazon CEO Jeff Bezos

ಕ್ಯಾಲಿಫೋರ್ನಿಯಾ: ಜಗತ್ತಿನ ಶ್ರೀಮಂತ ಉದ್ಯಮಿ, ಅಮೆಜಾನ್ ಸಿಇಒ ಜೆಫ್ ಬೆಜೊಸ್ ತಮ್ಮ ಕಂಪೆನಿಯ ವಾರ್ಷಿಕ ಹೂಡಿಕೆದಾರರಿಗೆ ಕಳುಹಿಸಿದ ಪತ್ರದಲ್ಲಿ 7 ಬಾರಿ ಭಾರತದ ಹೆಸರನ್ನು ಉಲ್ಲೇಖಿಸಿದ್ದಾರೆ. ಈ ಮೂಲಕ ಭಾರತದಲ್ಲಿ ತನ್ನ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸುವುದಾಗಿ ತಿಳಿಸಿದ್ದಾರೆ.

ವಿಶ್ವದ ನಂ. 1 ಇ-ಮಾರಾಟ ಸೇವಾ ಸಂಸ್ಥೆ ಎಂದು ಗುರುತಿಸಿಕೊಂಡಿರುವ ಅಮೆಜಾನ್ ಭಾರತದಲ್ಲಿ ಕಂಪೆನಿಯ ಹೂಡಿಕೆ ಪ್ರಮಾಣವನ್ನು ಹೆಚ್ಚಿಸಲು ನಿರ್ಧರಿಸಿದೆ. ಲ್ಲದೇ ಅಮೆಜಾನ್ ನೀಡುತ್ತಿರುವ ಅಲೆಕ್ಸಾ ವಾಯ್ಸ್ ಸೇವೆಯಲ್ಲಿ ಹಿಂದಿ ಭಾಷೆಯನ್ನು ಸೇರಿಸುವ ಕುರಿತು ಮಾಹಿತಿಯನ್ನು ನೀಡಿದ್ದಾರೆ. ಇದರಿಂದ ಭಾರತದಲ್ಲಿ ಮತ್ತಷ್ಟು ಗ್ರಾಹಕರನ್ನು ಸೆಳೆಯಲು ಸಾಧ್ಯ ಎಂದು ಜೆಫ್ ಬೆಜೊಸ್ ಹೇಳಿದ್ದಾರೆ.

Amazon CEO Jeff Bezos 2

ಅಮೆಜಾನ್ ಪ್ರೈಂ ವಿಡಿಯೋಗೆಂದೇ ಅಮೆರಿಕ, ಇಂಗ್ಲೆಂಡ್ ನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿದಂತೆ ಭಾರತದಲ್ಲೂ ಮುಂದಿನ ದಿನಗಳಲ್ಲಿ ಭಾರತದ ಭಾಷೆಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ತಿಳಿಸಿದ್ದಾರೆ.

ಭಾರತದಲ್ಲಿ ಮೊದಲ ಬಾರಿಗೆ ಅಮೆಜಾನ್ ಪ್ರೈಂ ಸದಸ್ಯತ್ವ ಪಡೆಯಲು ಅವಕಾಶ ನೀಡಿದ ಒಂದು ವರ್ಷದಲ್ಲೇ ಕಂಪೆನಿಯ ಇತಿಹಾಸದಲ್ಲಿ ಅತೀ ಹೆಚ್ಚು ಸದಸ್ಯರಾಗಿದ್ದಾರೆ. ಬೇರೆ ದೇಶಗಳ ಮಾರುಕಟ್ಟೆಗೆ ಹೋಲಿಸಿದರೆ ಇದೊಂದು ದಾಖಲೆ ಎಂದು ಉಲ್ಲೇಖಿಸಿದ್ದಾರೆ.

ವೆಬ್‍ಸೈಟ್ ಟ್ರಾಫಿಕ್ ಲೆಕ್ಕ ಹಾಕುವ ಸಂಸ್ಥೆಗಳು ನೀಡಿದ ವರದಿಯನ್ನು ಉಲ್ಲೇಖಿಸಿ, ಅಮೆಜಾನ್ ಭಾರತದಲ್ಲಿ ಅತ್ಯಂತ ಹೆಚ್ಚು ವೇಗವಾಗಿ ಬೆಳೆಯುತ್ತಿದ್ದು, 2017 ರಲ್ಲಿ ಭಾರತದಲ್ಲಿ ಮೊಬೈಲ್ ಹಾಗೂ ಡೆಸ್ಕ್ ಟಾಪ್ ಮೂಲಕ ಅಮೆಜಾನ್ ತಾಣಕ್ಕೆ ಭೇಟಿ ನೀಡಿರುವುದು ಸಂತಸದ ಸಂಗತಿ. 2007ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಡೌನ್ ಲೋಡ್ ಆಗಿರುವ ಅಪ್ಲಿಕೇಶನ್‍ಗಳ ಪೈಕಿ ಅಮೆಜಾನ್.ಇನ್ ಅಪ್ಲಿಕೇಶನ್ ಒಂದಾಗಿದೆ ಎಂದು ಜೆಫ್ ಬೆಜೊಸ್ ತಿಳಿಸಿದ್ದಾರೆ.

amazonprime

ಏನಿದು ಅಮೆಜಾನ್ ಪ್ರೈಂ?
ಹಣವನ್ನು ಪಾವತಿಸಿ ಪಡೆಯುವ ಸೇವೆಯೇ ಅಮೆಜಾನ್ ಪ್ರೈಂ. ಪ್ರೈಂ ಸದಸ್ಯರಾದರೆ ಡೆಲಿವರಿಗಾಗಿ (ಒಂದು ದಿನ, ಎರಡು ದಿನ) ಹೆಚ್ಚುವರಿ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ. ಅಷ್ಟೇ ಅಲ್ಲದೇ ಪ್ರೈಂ ವಿಡಿಯೋ, ಮ್ಯೂಸಿಕ್ ಗಳನ್ನು ಸಹ ಉಚಿತವಾಗಿ ನೋಡಬಹುದಾಗಿದೆ. ಹೊಸದಾಗಿ ರಿಲೀಸ್ ಆಗಿರುವ ಸಿನಿಮಾ ಗಳನ್ನು ಸಹ ಪ್ರೈಮ್ ಅಪ್ಲಿಕೇಶನ್ ಡೌನ್‍ಲೋಡ್ ಮಾಡಿ ನೋಡಬಹುದಾಗಿದೆ. ಈ ಸೇವೆಯನ್ನು ಮೊದಲ ಬಾರಿಗೆ 13 ವರ್ಷಗಳ ಹಿಂದೆ ಅಂದರೆ 2005 ರ ಜನವರಿ 2 ರಂದು ಆರಂಭಿಸಲಾಯಿತು. ಏಪ್ರಿಲ್ 2018ರ ವೇಳೆಗೆ ವಿಶ್ವದೆಲ್ಲೆಡೆ 10 ಕೋಟಿ ಪ್ರೈಂ ಸದಸ್ಯರು ಇದ್ದಾರೆ ಎಂದು ಅಮೆಜಾನ್ ತಿಳಿಸಿದೆ. ಭಾರತದಲ್ಲಿ ಈ ಸೇವೆಯನ್ನು 2016 ಜುಲೈ ತಿಂಗಳಿನಲ್ಲಿ ಆರಂಭಿಸಿತ್ತು. 999 ರೂ. ನೀಡಿದ್ದಲ್ಲಿ ವರ್ಷ ಕಾಲ ಪ್ರೈಂ ಸದಸ್ಯರಾಗಬಹುದು.

amazon

Share This Article
Leave a Comment

Leave a Reply

Your email address will not be published. Required fields are marked *