ನವದೆಹಲಿ: ಗಡಿ ಪ್ರದೇಶವನ್ನು ದಾಟದೆ ಬೊಫೋರ್ಸ್ ಫಿರಂಗಿಗಳನ್ನು ಬಳಸಿ ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ನಲ್ಲಿರುವ ಉಗ್ರರ ನೆಲೆಗಳ ಮೇಲೆ ಭಾರತ ಸೇನೆ ಅಚ್ಚರಿಯ ದಾಳಿಯನ್ನು ಭಾನುವಾರ ನಡೆಸಿದ್ದು, ಈ ದಾಳಿಯಲ್ಲಿ ಸುಮಾರು 50ಕ್ಕೂ ಉಗ್ರರನ್ನು ಸೇನೆ ಹೊಡೆದುರುಳಿಸಿರುವ ಕುರಿತ ಅಧಿಕೃತ ಮಾಹಿತಿ ಹೊರಬಿದ್ದಿದೆ.
ದಾಳಿಯಲ್ಲಿ ಪಾಕ್ ಸೇನೆಯ 7 ಮಂದಿ ಕಮಾಂಡೋಗಳು ಕೂಡ ಸಾವನ್ನಪ್ಪಿದ್ದು, ಪಿಒಕೆಯಲ್ಲಿರುವ ನೋಸೆರಿ ಜಲಾಶಯಕ್ಕೂ ತೀವ್ರ ಹಾನಿಯಾಗಿದೆ. ಗಡಿ ಪ್ರದೇಶದಲ್ಲಿ ಪಾಕ್ ನಿರ್ಮಾಣ ಮಾಡಿದ್ದ 7 ಉಗ್ರರ ಕ್ಯಾಂಪ್ ಗಳನ್ನು ಧ್ವಂಸ ಮಾಡಲಾಗಿದ್ದು, ಈ ಕಾರ್ಯಾಚರಣೆಗೆ ಬೊಫೋರ್ಸ್ ಫಿರಂಗಿಗಳೊಂದಿಗೆ, 3 ಸಾವಿರ ಸೆಲ್‍ಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಮಾಹಿತಿ ಲಭಿಸಿದೆ.
Advertisement
Advertisement
ಪಾಕಿಸ್ತಾನದ ಸೈನಿಕರು ಭಾರತದ ಯೋಧರನ್ನು ಗುರಿಯಾಗಿಸಿಕೊಂಡು ಭಾನುವಾರ ಗುಂಡಿನ ದಾಳಿಯನ್ನು ನಡೆಸಿದ್ದು, ಈ ದಾಳಿಗೆ ಉತ್ತರವಾಗಿ ಭಾರತ ಪ್ರತಿದಾಳಿ ನಡೆಸಿತ್ತು. ಆದರೆ ಈ ದಾಳಿಯನ್ನು ಮೊದಲು ನಿರಾಕರಿಸಿದ್ದ ಪಾಕ್, ಆ ಬಳಿಕ ದಾಳಿ ನಡೆದಿದೆ ಎಂದು ಅಧಿಕೃತವಾಗಿ ಒಪ್ಪಿಕೊಂಡಿದೆ.
Advertisement
ಉಗ್ರರ ನೆಲೆಗಳೊಂದಿಗೆ ಪಾಕ್ ನ ಸೇನಾ ಶಸ್ತ್ರಾಗಾರದ ಮೇಲೂ ಭಾರತ ದಾಳಿ ನಡೆಸಿದ್ದು, ಭಾರತದ ದಾಳಿಯಿಂದ ಬೆಚ್ಚಿ ಬಿದ್ದಿರುವ ಪಾಕ್ ತುರ್ತು ಸಭೆಯನ್ನು ಕೂಡ ನಡೆಸಿದೆ. ಪಾಕ್ ನ ಮೂವರು ಸೇನಾ ಪಡೆಗಳ ಮುಖ್ಯಸ್ಥರು ಈ ಸಭೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.
Advertisement
ಇದರೊಂದಿಗೆ ಭಾರತದಲ್ಲಿ ವಿಧ್ವಂಸ ಕೃತ್ಯ ನಡೆಸಲು ಪಾಕ್ ಉಗ್ರರರು ಗಡಿ ಪ್ರದೇಶ ದಾಟಿ ಬಂದು ಕಾಶ್ಮೀರದ ಅವಾಂತಿಪುರ ಪ್ರದೇಶದಲ್ಲಿ ಉಗ್ರರು ಅಡಗಿ ಕುಳಿತಿರುವ ಮಾಹಿತಿಯಡಿ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಉಗ್ರರು ಹಾಗೂ ಯೋಧರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
#UPDATE Jammu & Kashmir: Encounter breaks out between security forces & terrorists in Awantipora. https://t.co/aJBKlbjwkb
— ANI (@ANI) October 22, 2019