ಹಾಸನ: ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಜೋಡಿ ಸೇರಿ ಅಮರನಾಥ ಯಾತ್ರೆಗೆ (Amarnth Yatre) ತೆರಳಿರುವ 7 ಮಂದಿ ಸುರಕ್ಷಿತವಾಗಿದ್ದಾರೆ.
ಹಾಸನದ (Hassan) ನಿವಾಸಿ ದಿನೇಶ್ ಜೂ.7 ರಂದು ಅರ್ಪಿತಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಹೀಗಾಗಿ ಮದುವೆಯಾಗಿ ಒಂದು ತಿಂಗಳು ತುಂಬಿದ ಹಿನ್ನೆಲೆಯಲ್ಲಿ ಹನಿಮೂನ್ ಟ್ರಿಪ್ ಜೊತೆಗೆ ಅಮರನಾಥಯಾತ್ರೆಗೆ ಹೊರಟಿದ್ದರು. ಇವರ ಜೊತೆ ದಿನೇಶ್ ಸ್ನೇಹಿತರು ಹಾಗೂ ನವ ದಂಪತಿಗಳಾದ ರಕ್ಷಿತ್-ಕೃಪಾ, ನವೀನ್-ಶ್ವೇತಾ ಹಾಗೂ ಸಾಗರ್ ತೆರಳಿದ್ದರು.
ಜು.7 ರಂದು ಹಾಸನದಿಂದ ಹೊರಟು ಜು.8 ರಂದು ಬೆಂಗಳೂರಿನಿಂದ ವಿಮಾನ ಮೂಲಕ ಪ್ರಯಾಣ ಬೆಳೆಸಿದ್ದರು. ಭಾನುವಾರ ರಾತ್ರಿ ಕುಲುಮೊನಾಲಿಯಿಂದ ತನ್ನ ತಾಯಿಗೆ ಫೋನ್ ಮಾಡಿದ್ದ ದಿನೇಶ್ ಎಲ್ಲರೂ ಸೇಫ್ ಆಗಿದ್ದೀವಿ ಯಾರೂ ಗಾಬರಿಯಾಗಬೇಡಿ ಎಂದು ಹೇಳಿದ್ದರು. ನಂತರ ಸಹೋದರ ದೀಪುಗೂ ಫೋನ್ ಮಾಡಿದ್ದ ದಿನೇಶ್, ಭಾರೀ ಮಳೆಯಾಗುತ್ತಿದೆ. ಯಾರು ಹೆದರುವುದು ಬೇಡ. ಎಲ್ಲರೂ ಸುರಕ್ಷಿತವಾಗಿದ್ದೇವೆ ಎಲ್ಲರ ಕುಟುಂಬಕ್ಕೂ ವಿಷಯ ತಿಳಿಸು ಎಂದಿದ್ದರು. ಇದನ್ನೂ ಓದಿ: ಭಾರೀ ಮಳೆ.. ಹಿಮಪಾತ – ಲಡಾಕ್‌ನಲ್ಲಿ ಬೆಂಗಳೂರಿಗರು ಲಾಕ್
ಅದಾದ ಬಳಿಕ ಎಲ್ಲರ ಫೋನ್ ಸ್ವಿಚ್ ಆಫ್ ಆಗಿದೆ. ಇತ್ತ ಮಕ್ಕಳು ಸಂಪರ್ಕಕ್ಕೆ ಸಿಗದಿರುವ ಕಾರಣ ಕುಟುಂಬಸ್ಥರು ಆತಂಕಗೊಂಡಿದ್ದರು. ದರೆ ಇದೀಗ ಎಲ್ಲರೂ ಸುರಕ್ಷಿತವಾಗಿದ್ದಾರೆ. ಸದ್ಯ ತಮ್ಮ ಪೋಷಕರಿಗೆ ಕರೆ ಮಾಡಿ ಎಲ್ಲರೂ ಸುರಕ್ಷಿತವಾಗಿದ್ದೇವೆ ಎಂದು ದಿನೇಶ್ ಹಾಗೂ ರಕ್ಷಿತ್ ಹೇಳಿದ್ದಾರೆ. ಕುಲುಮೊನಾಲಿಯಿಂದ ಇಪ್ಪತ್ತು ಕಿಲೋಮೀಟರ್ ದೂರದಲ್ಲಿ ಸುರಕ್ಷಿತವಾಗಿದ್ದಾರೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]