ಇಸ್ಲಾಮಾಬಾದ್: ಅಫ್ಘಾನ್ ಗಡಿ ಬಳಿಯ ಉತ್ತರ ವಜೀರಿಸ್ತಾನದ ಮಿರ್ ಅಲಿಯಲ್ಲಿರುವ ಭದ್ರತಾ ಪಡೆಗಳ ಶಿಬಿರದ ಮೇಲೆ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 7 ಮಂದಿ ಪಾಕಿಸ್ತಾನಿ ಸೈನಿಕರು (Pakistani Soldiers) ಸಾವನ್ನಪ್ಪಿದ್ದಾರೆ.
ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ)ಗೆ ಸಂಬಂಧಿಸಿದ ಆತ್ಮಹತ್ಯಾ ಕಾರ್ ಬಾಂಬರ್, ಮಿರ್ ಅಲಿಯಲ್ಲಿರುವ ಭದ್ರತಾ ಪಡೆಗಳ ಕಾಂಪೌಂಡ್‌ಗೆ ಡಿಕ್ಕಿ ಹೊಡೆದಿದೆ. ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬೃಹತ್ ಸ್ಫೋಟವು ಹತ್ತಿರದ ಮನೆಗಳಿಗೆ ಹಾನಿಯನ್ನುಂಟು ಮಾಡಿದೆ. ಇದನ್ನೂ ಓದಿ: ಕೆನಡಾದಲ್ಲಿ ನಟ ಕಪಿಲ್ ಶರ್ಮಾ ಕೆಫೆ ಮೇಲೆ 3ನೇ ಬಾರಿ ಗುಂಡಿನ ದಾಳಿ
Two powerful suicide bombings target Pakistan Army camps in North Waziristan. pic.twitter.com/iu1aCMZFur
— WLVN (@TheLegateIN) October 17, 2025
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನವು ದೋಹಾದಲ್ಲಿ ಶಾಂತಿ ಮಾತುಕತೆ ನಡೆಸಲು ಕೆಲವೇ ಗಂಟೆಗಳ ಮೊದಲು ಈ ದಾಳಿ ನಡೆದಿದೆ. ದಾಳಿಯ ಹೊಣೆಯನ್ನು ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಹೊತ್ತುಕೊಂಡಿದೆ. ಅದರ ಖಾಲಿದ್ ಬಿನ್ ವಲೀದ್ ಆತ್ಮಹತ್ಯಾ ಘಟಕ ಮತ್ತು ತೆಹ್ರೀಕ್ ತಾಲಿಬಾನ್ ಗುಲ್ಬಹಾದಾರ್ ಈ ದಾಳಿಗಳನ್ನು ನಡೆಸಿವೆ ಎಂದು ಹೇಳಿದೆ.
ಒಂದು ವಾರದ ತೀವ್ರ ಗಡಿ ಹೋರಾಟದ ನಂತರ ಡುರಾಂಡ್ ರೇಖೆಯಲ್ಲಿ ನಡೆದ ಕದನ ವಿರಾಮದ ಸಮಯದಲ್ಲಿ ಈ ದಾಳಿ ನಡೆದಿದೆ. ಇದರಲ್ಲಿ ಎರಡೂ ಕಡೆಗಳಲ್ಲಿ ಹತ್ತಾರು ಜನರು ಸಾವನ್ನಪ್ಪಿದರು. ಅಫ್ಘಾನ್ ತಾಲಿಬಾನ್ ಕೋರಿಕೆಯ ಮೇರೆಗೆ ಕದನ ವಿರಾಮವಾಗಿದೆ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ತಿಳಿಸಿದೆ. ಇದನ್ನೂ ಓದಿ: ರಷ್ಯಾ-ಉಕ್ರೇನ್ ಸಂಘರ್ಷ – 2 ಗಂಟೆಗೂ ಅಧಿಕ ಕಾಲ ಪುಟಿನ್ ಜೊತೆ ಟ್ರಂಪ್ ಮಾತು
ಮಿರ್ ಅಲಿಯಲ್ಲಿ ಭದ್ರತಾ ಪಡೆಗಳ ಮೇಲೆ ಖವಾರಿಜ್ ಒಬ್ಬ ಆತ್ಮಹತ್ಯಾ ದಾಳಿ ನಡೆಸಲು ಪ್ರಯತ್ನಿಸಿದ. ಒಬ್ಬ ಖರ್ಜಿ ಸ್ಫೋಟಕಗಳಿಂದ ತುಂಬಿದ ವಾಹನವನ್ನು ಭದ್ರತಾ ಶಿಬಿರದ ಗೋಡೆಗೆ ಡಿಕ್ಕಿ ಹೊಡೆದ. ನಂತರ ಇನ್ನೂ ಮೂವರು ಖವಾರಿಜ್‌ಗಳು ಆವರಣಕ್ಕೆ ಪ್ರವೇಶಿಸಲು ಪ್ರಯತ್ನಿಸಿದರು. ಉತ್ತರ ವಜೀರಿಸ್ತಾನದಲ್ಲಿ ಇತ್ತೀಚಿಗೆ ನಡೆದ ಅತ್ಯಂತ ಗಂಭೀರವಾದ ಉಗ್ರಗಾಮಿ ದಾಳಿಗಳಲ್ಲಿ ಇದು ಕೂಡ ಒಂದು ಎನ್ನಲಾಗಿದೆ.