ಚಂಡೀಗಢ: ಗುಡಿಸಲಿನಲ್ಲಿ ಸಂಭವಿಸಿದ ಅಗ್ನಿ ಅವಘಡದಿಂದ 5 ಮಕ್ಕಳು ಸೇರಿ ಒಂದೇ ಕುಟುಂಬದ 7 ಮಂದಿ ಸಜೀವದಹನಗೊಂಡಿರುವ ಘಟನೆ ಪಂಜಾಬ್‌ನ ಲೂದಿಯಾನದಲ್ಲಿ ನಡೆದಿದೆ.
Advertisement
ಘಟನೆಯ ಕುರಿತು ಮಾಹಿತಿ ನೀಡಿರುವ ಟಿಬ್ಬಾ ಪೊಲೀಸ್ ಠಾಣೆಯ ಸಬ್‌ಇನ್ಸ್ಪೆಕ್ಟರ್ ಬಲದೇವ್ ರಾಜ್, ರಾತ್ರಿ 2 ಗಂಟೆ ಸುಮಾರಿಗೆ ಕುಟುಂಬ ಸದಸ್ಯರೆಲ್ಲರೂ ಗುಡಿಸಲಿನಲ್ಲಿ ಮಲಗಿದ್ದ ವೇಳೆ ಘಟನೆ ಸಂಭವಿಸಿದೆ. ಮೃತರನ್ನು ವಲಸೆ ಕಾರ್ಮಿಕರು ಎಂದು ಗುರುತಿಸಲಾಗಿದ್ದು, ಇವರು ಟಿಬ್ಬಾ ಪುರಸಭೆ ವ್ಯಾಪ್ತಿಯ ಕಸ ವಿಲೇವಾರಿ ಮಾಡುವ ರಸ್ತೆಯಲ್ಲಿ ಮಾರ್ಗದಲ್ಲಿರುವ ಗುಡಿಸಲುಗಳಲ್ಲಿ ವಾಸಿಸುತ್ತಿದ್ದರು ಎಂದು ಹೇಳಿದ್ದಾರೆ.
Advertisement
Punjab | Seven members, including 5 children of a family, were burnt alive in a fire that broke out in their hut in Ludhiana. The incident occurred at around 2 am when all the family members were sleeping in the shanty: Baldev Raj, Sub Inspector, Police Station Tibba pic.twitter.com/E1zPfjR7gR
— ANI (@ANI) April 20, 2022
Advertisement
ಮೃತಪಟ್ಟವರ ವೈಯಕ್ತಿಕ ವಿವರ ಪತ್ತೆಯಾಗಿಲ್ಲ. ಅಲ್ಲದೆ ಬೆಂಕಿ ಬಿದ್ದಿರುವುಕ್ಕೆ ನಿಖರ ಕಾರಣ ಏನೇಂಬುದೂ ತಿಳಿದಿಲ್ಲ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಟಿಬ್ಬಾ ಠಾಣೆಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.