ರಾಯ್‌ಪುರ: ಛತ್ತೀಸ್‌ಗಢದ (Chhattisgarh) ದಾಂತೇವಾಡ ಜಿಲ್ಲೆಯ ಅಬುಜ್‌ಮದ್‌ನಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ (Encounter) 30 ನಕ್ಸಲರು (Maoists) ಹತ್ಯೆಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾಂತೇವಾಡ ಮತ್ತು ನಾರಾಯಣಪುರದ ಜಿಲ್ಲಾ ಮೀಸಲು ಗಾರ್ಡ್‌ಗಳು (ಡಿಆರ್‌ಜಿ), ಅಬುಜ್‌ಮದ್‌ನಲ್ಲಿ ನಕ್ಸಲರು ಇರುವುದರ ಬಗ್ಗೆ ನಿರ್ದಿಷ್ಟ ಗುಪ್ತಚರ ಮಾಹಿತಿ ಆಧರಿಸಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿವೆ. ಅಬುಜ್‌ಮದ್‌ನ ದಕ್ಷಿಣ ಭಾಗದಲ್ಲಿರುವ ತುಲ್ತುಲಿ ಗ್ರಾಮದಲ್ಲಿ ಎನ್‌ಕೌಂಟರ್ ನಡೆದಿದೆ. ಈ ಗ್ರಾಮವು ದಾಂತೇವಾಡದಿಂದ ಸುಮಾರು 40 ರಿಂದ 50 ಕಿಮೀ ದೂರದಲ್ಲಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಗೌರವ್ ರೈ ಹೇಳಿದ್ದಾರೆ. ಇದನ್ನೂ ಓದಿ: ಸರ್ಕಾರಿ ನಿವಾಸ ತೊರೆದು ಆಪ್ ಸಂಸದನ ಮನೆಗೆ ತೆರಳಿದ ಕೇಜ್ರಿವಾಲ್
ಎನ್‌ಕೌಂಟರ್ ನಡೆದ ಸ್ಥಳದಿಂದ ಎಕೆ 47 ರೈಫಲ್ ಮತ್ತು ಸ್ವಯಂ-ಲೋಡಿಂಗ್ ರೈಫಲ್ (ಎಸ್‌ಎಲ್‌ಆರ್) ನಂತಹ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಹೆಚ್ಚಿನ ಶೋಧ ಕಾರ್ಯಾಚರಣೆಗಳು ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗೋವಾದ ಗಾತ್ರದ ಅಬುಜ್ಮದ್ ಪ್ರದೇಶವನ್ನು ನಕ್ಸಲೀಯರ ಭದ್ರಕೋಟೆ ಎಂದು ಪರಿಗಣಿಸಲಾಗಿದೆ. ಕಳೆದ ಸೆಪ್ಟೆಂಬರ್ 3 ರಂದು ದಾಂತೇವಾಡ ಮತ್ತು ಬಿಜಾಪುರ ಜಿಲ್ಲೆಗಳ ಗಡಿಯಲ್ಲಿ ಆರು ಮಹಿಳೆಯರು ಸೇರಿದಂತೆ ಒಂಬತ್ತು ಮಾವೋವಾದಿಗಳು ಹತ್ಯೆಗೀಡಾಗಿದ್ದರು. ಇದನ್ನೂ ಓದಿ: ಬೆಂಗ್ಳೂರಿನ ಮೂರು ಕಾಲೇಜುಗಳಿಗೆ ಬಾಂಬ್ ಬೆದರಿಕೆ – ಪೊಲೀಸರಿಂದ ತೀವ್ರ ಶೋಧ