ಬನ್ನೇರುಘಟ್ಟ ಉದ್ಯಾನದಲ್ಲಿ ಮಾರಕ ವೈರಸ್‌ಗೆ 7 ಚಿರತೆ ಮರಿಗಳು ಸಾವು

Public TV
2 Min Read
bannerghatta national park cage

ಆನೇಕಲ್: ಮಾರಕ ವೈರಸ್‌ಗೆ 7 ಚಿರತೆ ಮರಿಗಳು ಸಾವನ್ನಪ್ಪಿರುವ ಘಟನೆ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ (Bannerghatta National Park) ನಡೆದಿದೆ. ಪೆಲಿನ್ ಪ್ಯಾನ್ಲೂಕೋಪೇನಿಯಾ (Feline Panleukopenia Virus) ಎಂಬ ಮಾರಕ ವೈರಸ್‌ಗೆ ಚಿರತೆ ಮರಿಗಳು ಬಲಿಯಾಗಿವೆ ಎನ್ನಲಾಗಿದೆ.

ಬೆಕ್ಕಿನಿಂದ ಹರಡುವ‌ ಮಾರಕ ರೋಗ ಇದು. ಮೊದಲಿಗೆ ಆಗಸ್ಟ್ 22 ರಂದು ಕಾಣಿಸಿಕೊಂಡಿತ್ತು. ಆಗಸ್ಟ್ 22 ರಿಂದ ಸೆಪ್ಟೆಂಬರ್ 5ರ ಅವಧಿಯಲ್ಲಿ 7 ಚಿರತೆಗಳ ಸಾವು ಕಂಡಿವೆ. ಮನೆಯಲ್ಲಿ ಬೆಕ್ಕು ಸಾಕಿದ್ದ ಅನಿಮಲ್ ಕೀಪರ್‌ನಿಂದ ಸೋಂಕು ಹರಡಿರುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಲಕ್ನೋದಲ್ಲಿ ಇಲಿ ಹಿಡಿಯೋದಕ್ಕೆ 69 ಲಕ್ಷ ರೂ. ಖರ್ಚು ಮಾಡಿದ ರೈಲ್ವೆ

leopard cub died

ರಾಜ್ಯದ ನಾನಾ ಭಾಗಗಳಿಂದ ರೈತರ ಜಮೀನುಗಳ ಬಳಿ ಸಿಕ್ಕಿದ್ದ ಚಿರತೆ ಮರಿಗಳು ಇವಾಗಿದ್ದವು. ಚಿರತೆ ಮರಿಗಳನ್ನ ರಕ್ಷಣೆ ಮಾಡಿ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ತರಲಾಗಿತ್ತು. ಮಾರಕ ರೋಗಕ್ಕೆ ತುತ್ತಾಗಿ ಈಗ ಏಳು ಚಿರತೆ ಮರಿಗಳ ಮೃತಪಟ್ಟಿವೆ.

ಒಂದು ವರ್ಷದವರೆಗೆ ಮರಿಗಳಿಗೆ ಯಾವುದೇ ವ್ಯಾಕ್ಸಿನೇಷನ್ ನೀಡುವಂತಿಲ್ಲ. 11 ಜನರ ಕಮಿಟಿ‌ ಮಾಡಿ ಬೂಸ್ಟರ್ ಡೋಸ್ ನೀಡಿ ಕಂಟ್ರೋಲ್‌ ಮಾಡಲು ಕ್ರಮ ವಹಿಸಲಾಗಿತ್ತು. ಸೋಂಕು ತಗುಲಿದ ಬಳಿಕ ಜೀರ್ಣ ಕ್ರಿಯೆ ಆಗದೇ ರಕ್ತ ವಾಂತಿಯಾಗಿ ಪ್ರಾಣ ಬಿಟ್ಟಿವೆ. ಇದನ್ನೂ ಓದಿ: ಕುರುಡುಮಲೆ ವಿನಾಯಕನ ಹುಂಡಿಗೆ 2 ಕಂತೆ ಹಣ ಹಾಕಿದ ಯಡಿಯೂರಪ್ಪ – ಎಲ್ಲರಲ್ಲೂ ಅಚ್ಚರಿ

ಚಿರತೆ, ಹುಲಿ, ಸಿಂಹ ಸೇರಿದಂತೆ ಎಲ್ಲಾ ಕೇಜ್‌ಗಳಿಗೆ ಬರ್ನಿಂಗ್ ಮಾಡಿ ಜಾಗೃತಿ ವಹಿಸಲಾಗಿದೆ. ಬ್ಲೀಚಿಂಗ್ ಪೌಡರ್, ಔಷಧಿ ಸಿಂಪಡಣೆ ಮಾಡಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ವೈರಾಣು ನಿಯಂತ್ರಣಕ್ಕಾಗಿ ಅಧಿಕಾರಿಗಳು ಮುಂಜಾಗ್ರತಾ ಕ್ರಮ ವಹಿಸಿದ್ದಾರೆ.

ವಿಶೇಷ ತಜ್ಞರು ವೈದ್ಯರ ಸಮಿತಿ ರಚನೆ ಮಾಡಿ ವೈರಸ್ ನಿಯಂತ್ರಣಕ್ಕೆ ಮುಂದಾಗಿದ್ದಾರೆ. ಹೆಲ್ತ್ ಕಮಿಟಿಯಲ್ಲಿ ಬನ್ನೇರುಘಟ್ಟ ಕಾರ್ಯ ನಿರ್ವಾಹಕ ಅಧಿಕಾರಿ ಸೂರ್ಯ ಸೇನ್, ಡಾ.ರವಿಂದ್ರ ಹೆಗ್ಡೆ, ಡಾ. ಉಮಾಶಂಕರ್, ಮಂಜುನಾಥ್. ವಿಜಯ್ ಇದ್ದಾರೆ.

Web Stories

Share This Article