ಆರೋಗ್ಯಕರ ತರಕಾರಿಗಳನ್ನು ಮಕ್ಕಳಿಗೆ ತಿನ್ನಿಸುವ ಕಷ್ಟ ತಾಯಂದಿರಿಗೆ ಅಷ್ಟೇ ಗೊತ್ತು. ತರಕಾರಿಗಳನ್ನು ಅಡಗಿಸಿ ಬೇರೆ ಬೇರೆ ರೆಸಿಪಿಗಳನ್ನು ಮಾಡಿ ಮಕ್ಕಳಿಗೆ ತಿನ್ನಿಸುವಷ್ಟು ಹೊತ್ತಿಗಾಗಲೇ ದಿನಕಳೆದಿರುತ್ತದೆ. ಆದರೆ ನಾವಿಂದು ಹೇಳಿಕೊಡುತ್ತಿರೋ ರೆಸಿಪಿ ಈ ಒಂದು ಸಮಸ್ಯೆಗೆ ಖಂಡಿತಾ ಪರಿಹಾರವಾಗುತ್ತೆ. ಕೇವಲ 20 ನಿಮಿಷಗಳಲ್ಲಿ ಮಾಡಬಹುದಾದ 7 ಲೇಯರ್ ಚಿಕನ್ ಟಾಕೋ (7 Layer Chicken Taco) ಮಾಡಿ. ನೀವು ಮಕ್ಕಳಿಗೆ ತಿನ್ನಸಬೇಕೆಂದಿರೋ ತರಕಾರಿಗಳನ್ನೂ ಇದರಲ್ಲಿ ಅಡಗಿಸಿ ನೀಡಿ. ಮಕ್ಕಳು ಇದನ್ನು ಖಂಡಿತವಾಗಿಯೂ ಕಣ್ಣು ಮುಚ್ಚಿ ನಾಲಿಗೆ ಚಪ್ಪರಿಸಿಕೊಂಡು ಸವಿಯುತ್ತಾರೆ. ಹಾಗಾದ್ರೆ ಈ ಕೂಡಲೇ 7 ಲೇಯರ್ ಚಿಕನ್ ಟಾಕೋ ಹೇಗೆ ಮಾಡೋದು ಎಂಬುದನ್ನು ನೋಡೋಣ.
Advertisement
ಬೇಕಾಗುವ ಪದಾರ್ಥಗಳು:
ಬೇಯಿಸಿದ ಚಿಕನ್ ಬ್ರೆಸ್ಟ್ – 4 (ಮೂಳೆ ರಹಿತ)
ಹಸಿರು ಮೆಣಸಿನಕಾಯಿ – 1
ಜೇನುತುಪ್ಪ – ಕಾಲು ಕಪ್
ಹುಳಿ ಕ್ರೀಮ್ – 1 ಕಪ್
ಕರಿ ಮೆಣಸಿನಪುಡಿ – ಅರ್ಧ ಟೀಸ್ಪೂನ್
ಗಟ್ಟಿಯಾದ ಟಾಕೋ ಶೆಲ್‌ಗಳು – 10
ಫ್ರೈ ಮಾಡಿದ ಬೀನ್ಸ್ – ಮುಕ್ಕಾಲು ಕಪ್ (ಸೌತೆಕಾಯಿ, ಕುಂಬಳಕಾಯಿ, ಪಾಲಕ್ ಸೊಪ್ಪು, ಕ್ಯಾಬೇಜ್, ಹುರುಳಿ ಹೀಗೆ ಹಲವು ಬೇಯಿಸಿದ ತರಕಾರಿಗಳನ್ನೂ ನೀವಿದರಲ್ಲಿ ಸೇರಿಸಬಹುದು)
ತುರಿದ ಚೀಸ್ – ಅರ್ಧ ಕಪ್
ಹೆಚ್ಚಿದ ಕೊತ್ತಂಬರಿ ಸೊಪ್ಪು – ಕಾಲು ಕಪ್
ಸಣ್ಣಗೆ ಹೆಚ್ಚಿದ ಟೊಮೆಟೊ – 2
ಸಣ್ಣಗೆ ಕತ್ತರಿಸಿದ ಆವಕಾಡೋ – 1 ಇದನ್ನೂ ಓದಿ: ಮೆಕ್ಸಿಕನ್ ಸ್ಟೈಲ್‌ನಲ್ಲಿ ಚಿಕನ್ ಸಲಾಡ್ ಮಾಡಿ ನೋಡಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಓವನ್ ಅನ್ನು 350 ಡಿಗ್ರಿಗಳಿಗೆ ಪೂರ್ವಭಾವಿಯಾಗಿ ಕಾಯಿಸಿಕೊಳ್ಳಿ.
* ಬೇಯಿಸಿದ ಚಿಕನ್ ಬ್ರೆಸ್ಟ್ ಅನ್ನು ಸಣ್ಣ ಸಣ್ಣ ಚೂರುಗಳನ್ನಾಗಿ ಮಾಡಿಟ್ಟಿರಿ.
* ಒಂದು ಬಟ್ಟಲಿನಲ್ಲಿ ಚೂರು ಮಾಡಿದ ಚಿಕನ್, ಹಸಿರು ಮೆಣಸಿನಕಾಯಿ, ಜೇನುತುಪ್ಪ, ಹುಳಿ ಕ್ರೀಮ್ ಮತ್ತು ಕರಿ ಮೆಣಸಿನಪುಡಿ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
* ಈಗ ಬೇಕಿಂಗ್ ಪ್ಯಾನ್ ತೆಗೆದುಕೊಂಡು, ಅದರಲ್ಲಿ ಟಾಕೋ ಶೆಲ್‌ಗಳನ್ನು ಇರಿಸಿ. ಪ್ರತಿ ಶೆಲ್‌ಗಳಲ್ಲಿ ಒಂದೊಂದು ಟೀಸ್ಪೂನ್‌ಗಳಷ್ಟು ಹೆಚ್ಚಿ, ಬೇಯಿಸಿದ ತರಕಾರಿಗಳನ್ನು ಹರಡಿ.
* ಈಗ ತರಕಾರಿ ಮೇಲೆ ಚಿಕನ್ ಮಿಶ್ರಣವನ್ನು ಟಾಕೋ ಶೆಲ್‌ನ ಮುಕ್ಕಾಲು ಭಾಗದವರೆಗೆ ಬರುವಷ್ಟು ತುಂಬಿಕೊಳ್ಳಿ.
* ಈಗ ಅದರ ಮೇಲೆ ಚೀಸ್ ಅನ್ನು ಸಿಂಪಡಿಸಿ.
* ಬಳಿಕ ಪ್ಯಾನ್ ಅನ್ನು ಓವನ್‌ನಲ್ಲಿ ಇರಿಸಿ, ಸುಮಾರು 10 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
* ಬಳಿಕ ಟಾಕೋಗಳ ಮೇಲೆ ಹುಳಿ ಕ್ರೀಮ್, ಕೊತ್ತಂಬರಿ ಸೊಪ್ಪು, ಟೊಮೆಟೊ ಹಾಗೂ ಆವಕಾಡೋ ಹರಡಿ.
* ಇದೀಗ 7 ಲೇಯರ್ ಚಿಕನ್ ಟಾಕೋ ತಯಾರಾಗಿದ್ದು, ಇದನ್ನು ಬಿಸಿ ಬಿಸಿಯಾಗಿಯೇ ಸವಿಯಲು ಮಕ್ಕಳಿಗೆ ನೀಡಿ. ಇದನ್ನೂ ಓದಿ: ವೀಕೆಂಡ್‌ಗೆ ಮಾಡಿ ಕ್ರೀಮಿ ಸಿಗಡಿ ಪಾಸ್ತಾ