ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಆಸ್ತಿಗಳ ನಕಲಿ ದಾಖಲಾತಿ, ರಿಯಲ್ ಎಸ್ಟೇಟ್ ಮಾಫಿಯಾಗೆ ಕಡಿವಾಣ ಹಾಕಲು ಹೊಸ ಹೊಸ ಕ್ರಮಕ್ಕೆ ಬಿಬಿಎಂಪಿ (BBMP) ಮುಂದಾಗಿದೆ. ಹಾಗಾಗಿಯೇ ನಿವೇಶನ, ಆಸ್ತಿ ಖಾತೆಗಳ ಗೊಂದಲ ಬಗೆಹರಿಸಲು ಪಾಲಿಕೆ ಇ-ಖಾತಾ (E Khata) ಯೋಜನೆ ಜಾರಿ ಮಾಡಿದೆ. ಆದರೀಗ ಬಿಬಿಎಂಪಿಗೆ ಮತ್ತೊಂದು ತಲೆನೋವು ಶುರುವಾಗಿದೆ.
Advertisement
ಹೌದು. ಮಹಾನಗರ ಬೆಂಗಳೂರಿನಲ್ಲಿ ಆಸ್ತಿಗಳ ನಕಲಿ ದಾಖಲಾತಿ, ರಿಯಲ್ ಎಸ್ಟೇಟ್ ಮಾಫಿಯಾಗೆ ಕಡಿವಾಣ ಸೇರಿದಂತೆ ನಿವೇಶನ, ಆಸ್ತಿಗಳ ಗೊಂದಲಗಳಿಗೆ ತೆರೆ ಎಳೆಯಲು ಪಾಲಿಕೆ ಇ-ಖಾತಾ ಯೋಜನೆ ಜಾರಿಗೊಳಿಸಿದೆ. ಕಳೆದ 2-3 ತಿಂಗಳಿಂದ ಇ-ಖಾತಾ ಪಡೆಯಲು ಆಸ್ತಿ ಮಾಲೀಕರಿಗೆ ಅವಕಾಶವನ್ನೂ ಮಾಡಿಕೊಡಲಾಗಿದೆ. ಈ ನಡುವೆ ನಗರದಲ್ಲಿ 7 ಲಕ್ಷ ಆಸ್ತಿಗಳಿಗೆ ʻಎʼ ಅಥವಾ ʻಬಿʼ ಖಾತಾ ಇಲ್ಲದಿರುವುದು ಬೆಳಕಿಗೆ ಬಂದಿದೆ. ಇದು ಬಿಬಿಎಂಪಿ ಅಧಿಕಾರಿಗಳಿಗೆ (BBMP officials) ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದನ್ನೂ ಓದಿ: ಏಯ್ ಯತ್ನಾಳ್ ಎಲ್ಲವನ್ನ ತೆಗೀಬೇಕಾ? – ಜಿಟಿಡಿ ಖಡಕ್ ವಾರ್ನಿಂಗ್
Advertisement
Advertisement
ಹೌದು. ಸುಮಾರು 7 ಲಕ್ಷ ಆಸ್ತಿಗಳಿಗೆ ಯಾವುದೇ ದಾಖಲಾತಿಗಳು ಇಲ್ಲವಂತೆ. ಇಂಥಾ ಆಸ್ತಿಗಳಿಗೆ ಈಗ ಹೇಗೆ ಇ-ಖಾತಾ ನೀಡುವುದು ಎನ್ನುವುದೇ ಮತ್ತೊಂದು ಸಮಸ್ಯೆ. ಪಾಲಿಕೆ 22 ಲಕ್ಷ ಡ್ರಾಫ್ಟ್ ಅನ್ನು ಆನ್‌ಲೈನ್‌ಗೆ ಅಪ್ಲೋಡ್ ಮಾಡಿದೆ. ಆದ್ರೆ ಒಂದೇ ಸರ್ವೇ ನಂಬರ್ ಹಾಗೂ ಒಂದೇ ಖಾತೆಯ ಆಸ್ತಿಗಳಿಗೆ ಇಬ್ಬರು-ಮೂವರು ಮಾಲೀಕರೆಂದು ಹೇಳಿಕೊಳ್ಳುವವರಿಂದ ಅರ್ಜಿಗಳು ಪಾಲಿಕೆಗೆ ಬಂದಿದೆ.
Advertisement
ಈ ಎಲ್ಲ ಬೆಳವಣಿಗೆಯಿಂದ ಇ-ಖಾತಾ ಹಂಚಿಕೆಗೆ ದೊಡ್ಡ ತೊಡಕಾಗಿದೆ. ಇದು ಪಾಲಿಕೆಯ ತಳಮಟ್ಟದ ಕಂದಾಯ ಅಧಿಕಾರಿಗಳ ಲಂಚಬಾಕತನದಿಂದ ಆಗಿರುವ ಸಮಸ್ಯೆ ಎನ್ನುವುದು ಸಾರ್ವಜನಿಕರ ಆರೋಪ. ಇದನ್ನೂ ಓದಿ: ಹೆಬ್ಬಾಳ್ಕರ್ ಕಾರನ್ನು ಬಟ್ಟೆ ಹಾಕಿ ಮುಚ್ಚಿದ್ದು ಯಾಕೆ? – ಮತ್ತೆ ಅನುಮಾನ ವ್ಯಕ್ತಪಡಿಸಿದ ಛಲವಾದಿ