ಇಸ್ಲಾಮಾಬಾದ್: ಇರಾನ್‌ನ ಉಗ್ರರ ನೆಲೆಗಳ ಮೇಲೆ ಪಾಕಿಸ್ತಾನ (Pakistan) ಪ್ರತಿದಾಳಿ ನಡೆಸಿದ್ದು, 7 ಮಂದಿ ಇರಾನಿಯನ್ನರನ್ನು ಹತ್ಯೆಗೈದಿದೆ. ಈ ಮೂಲಕ ತನ್ನ ವಿರುದ್ಧದ ದಾಳಿಗೆ ಸೇಡು ತೀರಿಸಿಕೊಂಡಿದೆ.
ಪಾಕಿಸ್ತಾನದ ಬಲೂಚಿಸ್ತಾನ (Balochistan) ಪ್ರಾಂತ್ಯದಲ್ಲಿರುವ `ಜೈಷ್ ಎ ಅದ್ಲ್’ ಎಂಬ ಉಗ್ರ ಸಂಘಟನೆಯ 2 ನೆಲೆಗಳ ಮೇಲೆ ಇರಾನ್ ಮಾರಣಾಂತಿಕ ಕ್ಷಿಪಣಿ ಹಾಗೂ ಡ್ರೋನ್‌ಗಳಿಂದ ದಾಳಿ (Iran Missile Attack) ನಡೆಸಿತ್ತು. ಇದಾದ ಒಂದು ದಿನದ ನಂತರ ಪಾಕಿಸ್ತಾನ ಸಹ ಪ್ರತೀಕಾರದ ದಾಳಿ ನಡೆಸಿದೆ. ಇದನ್ನೂ ಓದಿ: ಅಮೆರಿಕ ಅಧ್ಯಕ್ಷೀಯ ರೇಸ್‌ನಿಂದ ಹೊರಗುಳಿದ ಭಾರತೀಯ ಮೂಲದ ವಿವೇಕ್ – ಟ್ರಂಪ್‌ಗೆ ಬೆಂಬಲ
ಪಾಕಿಸ್ತಾನವು ಗುರುವಾರ ಇರಾನ್ ಪ್ರದೇಶದೊಳಗಿನ ಉಗ್ರಗಾಮಿ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿ, 7 ಮಂದಿಯನ್ನ ಹತ್ಯೆಗೈದಿದೆ. ಇರಾನ್ ಪಾಕ್ ಮೇಲಿನ ಆಕ್ರಮಣವನ್ನು ಒಪ್ಪಿಕೊಂಡ ನಂತರ ಪಾಕಿಸ್ತಾನ ದಾಳಿ ನಡೆಸಿದೆ.
ಗುರುವಾರ ಬೆಳಗ್ಗೆ ಪಾಕಿಸ್ತಾನವು ಬಲೂಚಿಸ್ತಾನ ಪ್ರತ್ಯೇಕತಾವಾದಿ ಸಂಘಟನೆಗಳಾದ ಬಲೂಚಿಸ್ತಾನ್ ಲಿಬರೇಷನ್ ಫ್ರಂಟ್ ಹಾಗೂ ಬಲೂಚಿಸ್ತಾನ್ ಲಿಬರೇಷನ್ ಆರ್ಮಿ ಸಂಘಟನೆಯ ನೆಲೆಗಳ ಮೇಲೆ ದಾಳಿ ನಡೆಸಿದೆ. ಪಾಕ್ ದಾಳಿ ವೇಳೆ ಹಲವು ಭಯೋತ್ಪಾದಕರು ಹತ್ಯೆಗೀಡಾಗಿರುವುದು ಕಂಡುಬಂದಿದೆ. ಈ ನಡುವೆ ಪಾಕಿಸ್ತಾನಿ ವಿರೋಧಿ ಉಗ್ರಗಾಮಿ ಸಂಘಟನೆ ಮೇಲೆ ದಾಳಿ ನಡೆಸಲಾಗಿದೆ ಎಂದಷ್ಟೇ ನಾನು ಹೇಳಬಲ್ಲೆ ಎಂದು ಪಾಕಿಸ್ತಾನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದಾಳಿ ನಡೆದ ಕೆಲಸ ಸಮಯದ ಬಳಿಕ ಸಿಯೆಸ್ತಾನ್-ಒ-ಬಲೂಚಿಸ್ತಾನ್ ಪ್ರಾಂತ್ಯದಲ್ಲಿರುವ ಅಡಗು ತಾಣಗಳ (Terrorist Hideouts) ಮೇಲೆ ಮಿಸೈಲ್ ದಾಳಿ ನಡೆದಿರುವುದಾಗಿ ಇರಾನ್ ಮಾಧ್ಯಮಗಳು ವರದಿ ಮಾಡಿವೆ.
ಪಾಕಿಸ್ತಾನದ ಅಧಿಕಾರಿಯೊಬ್ಬರ ಪ್ರಕಾರ, ಆಗ್ನೇಯ ಇರಾನ್ ನಗರವಾದ ಸರವನ್‌ನಲ್ಲಿ ಸರಣಿ ಸ್ಫೋಟಗಳು ಸಂಭವಿಸಿವೆ. ಈ ಸ್ಫೋಟದಲ್ಲಿ 7 ಇರಾನಿಯನ್ನರು ಸಾವನ್ನಪ್ಪಿದ್ದಾರೆ. ಇದರಲ್ಲಿ ಮೂವರು ಮಹಿಳೆಯರು, ನಾಲ್ವರು ಮಕ್ಕಳು ಸೇರಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಮೇಯರ್ ಚುನಾವಣೆ : ಮಾಲ್ಡೀವ್ಸ್ ಆಡಳಿತ ಪಕ್ಷಕ್ಕೆ ಹೀನಾಯ ಸೋಲು – ಭಾರತದ ಪರ ಪಕ್ಷಕ್ಕೆ ಭರ್ಜರಿ ಜಯ
ಒಂದು ದಿನದ ಹಿಂದೆಯಷ್ಟೇ ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಮೇಲೆ ಜೈಷ್-ಅಲ್-ಅದ್ ಉಗ್ರ ಸಂಘಟನೆಯ ಎರಡು ನೆಲೆಗಳ ಮೇಲೆ ಇರಾನ್ ದಾಳಿ ನಡೆಸಿತ್ತು. ಈ ಘಟನೆಯಲ್ಲಿ ಇಬ್ಬರು ಮಕ್ಕಳು ಸಾವಿಗೀಡಾಗಿದ್ದರು. ಮೂವರು ಗಾಯಗೊಂಡಿದ್ದರು. ಈ ದಾಳಿ ತನ್ನ ವಾಯುಸೀಮೆ ಹಾಗೂ ಸಾರ್ವಭೌಮತೆಯ ಉಲ್ಲಂಘನೆ ಎಂದು ಪಾಕಿಸ್ತಾನ ಹೇಳಿತ್ತು. ಈ ಕಾನೂನುಬಾಹಿರ ಕೃತ್ಯಕ್ಕೆ ತಿರುಗೇಟು ನೀಡುವ ಅಧಿಕಾರವೂ ತನಗಿದೆ ಎಂದು ಹೇಳಿಕೊಂಡಿತ್ತು. ಈ ಬೆನ್ನಲ್ಲೇ ಇರಾನ್ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದೆ. ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟು – ಪಾಕಿಸ್ತಾನದಲ್ಲಿ 1 ಮೊಟ್ಟೆಯ ಬೆಲೆ 33 ರೂ. – ಈರುಳ್ಳಿ ಪ್ರತಿ ಕೆಜಿಗೆ 250 ರೂ.