ಕೈವ್: ಉತ್ತರ ಉಕ್ರೇನ್‍ನ (Ukraine) ಐತಿಹಾಸಿಕ ನಗರವಾದ ಚೆರ್ನಿವ್ ಮೇಲೆ ರಷ್ಯಾ ಕ್ಷಿಪಣಿ ದಾಳಿ (Russian Missile Strike) ನಡೆಸಿದೆ. ಘಟನೆಯಲ್ಲಿ 6 ವರ್ಷದ ಮಗು ಸೇರಿ ಒಟ್ಟು 7 ಮಂದಿ ಸಾವನ್ನಪ್ಪಿ, 90 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್‍ನ ಆಂತರಿಕ ಸಚಿವಾಲಯ ತಿಳಿಸಿದೆ.
ಧಾರ್ಮಿಕ ಆಚರಣೆಯ ಸಲುವಾಗಿ ಜನ ಚರ್ಚ್‍ಗೆ ತೆರಳುತ್ತಿದ್ದಾಗ ಈ ದಾಳಿ ನಡೆದಿದೆ. ಗಾಯಗೊಂಡವರಲ್ಲಿ 12 ಮಂದಿ ಮಕ್ಕಳು ಹಾಗೂ 10 ಮಂದಿ ಪೊಲಿಸ್ ಅಧಿಕಾರಿಗಳು ಇದ್ದಾರೆ ಎಂದು ಸಚಿವಾಲಯ ತಿಳಿಸಿದೆ.
Advertisement
Advertisement
ಈ ಸಂಬಂಧ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ (Zelenskiy) ಟೆಲಿಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಚೆರ್ನಿವ್ (Chernihiv) ನಗರದ ಕೇಂದ್ರ ಭಾಗಕ್ಕೆ ರಷ್ಯಾ ಕ್ಷಿಪಣಿ ಅಪ್ಪಳಿಸಿದೆ. ಈ ಮೂಲಕ ರಷ್ಯಾ ಸೇನೆಯು ಎಂದಿನಂತೆ ಸಾಮಾನ್ಯವಾಗಿದ್ದ ದಿನವನ್ನು ದುಃಖ ಮತ್ತು ನಷ್ಟ ಆವರಿಸುವಂತೆ ಮಾಡಿದೆ ಎಂದು ಕಿಡಿಕಾರಿದ್ದಾರೆ. ಪೋಸ್ಟ್ ಜೊತೆಗೆ ವೀಡಿಯೋ ತುಣುಕು ಕೂಡ ಅಪ್ಲೋಡ್ ಮಾಡಿದ್ದಾರೆ. ವೀಡಿಯೋದಲ್ಲಿ ಚದುರಿದ ಅವಶೇಷಗಳು, ಹಾನಿಗೊಳಗಾದ ಕಾರಿಗಳನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಅಮೆರಿಕಾದಲ್ಲಿ ದಾವಣಗೆರೆ ಮೂಲದ ಪತಿ, ಪತ್ನಿ, ಮಗು ದುರ್ಮರಣ
Advertisement
Advertisement
ಚೆರ್ನಿವ್ ರಾಜಧಾನಿ ಕೈವ್‍ನ ಉತ್ತರಕ್ಕೆ ಶತಮಾನಗಳಷ್ಟು ಹಳೆಯದಾದ ಚರ್ಚ್‍ಗಳು ಇವೆ. ರಷ್ಯಾವು ಕಳೆದ ವರ್ಷ ಫೆಬ್ರವರಿಯಿಂದ ಉಕ್ರೇನ್ ಮೇಲೆ ದಾಳಿ ನಡೆಸುತ್ತಿದೆ.
Web Stories