ತಿರುವನಂತಪುರಂ: ಕರ್ನಾಟಕದಲ್ಲಿ ಭಾರೀ ವಿವಾದ ಸೃಷ್ಟಿಸಿದ್ದ ಹಿಜಬ್ (Hijab) ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಕೇರಳದ 7 ಮಂದಿ ವಿದ್ಯಾರ್ಥಿನಿಯರು ಹಿಜಬ್ ಕುರಿತು ಪ್ರಾಂಶುಪಾಲರಿಗೆ ಪತ್ರ ಬರೆದಿದ್ದಾರೆ.
ತಿರುವನಂತಪುರದ ಸರ್ಕಾರಿ ಮೆಡಿಕಲ್ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿನಿ (MBBS Students) ಯರು ಈ ಪತ್ರವನ್ನು ಬರೆಯುವ ಮೂಲಕ ಇದೀಗ ಸುದ್ದಿಯಾಗಿದ್ದಾರೆ. ಧಾರ್ಮಿಕ ನಂಬಿಕೆಯ ಪ್ರಕಾರ ಹಿಜಬ್ ಅನ್ನು ಕಡ್ಡಾಯವಾಗಿ ಧರಿಸಬೇಕಾಗಿದೆ. ಆದರೆ ನಮಗೆ ಆಪರೇಷನ್ ಥಿಯೇಟರ್ (Operation Theatre) ನಲ್ಲಿ ಹಿಜಬ್ ಧರಿಸಿ ಸರ್ಜರಿ ಮಾಡಲು ಕಷ್ಟವಾಗುತ್ತದೆ. ಹೀಗಾಗಿ ಈ ಸಂಬಂಧ ಪರ್ಯಾಯ ಆಯ್ಕೆ ಕೊಡುವಂತೆ ವಿದ್ಯಾರ್ಥಿನಿಯರು ಪತ್ರದಲ್ಲಿ ತಿಳಿಸಿದ್ದಾರೆ.
Advertisement
Advertisement
ನಮ್ಮ ಸಂಪ್ರದಾಯದಲ್ಲಿ ಎಲ್ಲಾ ಸಮಯದಲ್ಲೂ ತಲೆ ಮುಚ್ಚಿಕೊಳ್ಳಬೇಕು. ಆದರೆ ಆಪರೇಷನ್ ಥಿಯೇಟರ್ ಗಳಲ್ಲಿ ತಲೆ ಮುಚ್ಚಿಕೊಂಡು ಕೆಲಸ ಮಾಡಲು ಸಾಧ್ಯವಿಲ್ಲ. ಹೀಗಾಗಿ ಹಿಜಬ್ ಬದಲು ಉದ್ದ ತೋಳು ಇರುವಂತಹ ಜಾಕೆಟ್ ಅಥವಾ ಪರ್ಯಾಯ ಡ್ರೆಸ್ ಧರಿಸಲು ಅವಕಾಶ ನೀಡಬೇಕು ಎಂದು ಕೂಡ ಪ್ರಾಂಶುಪಾಲರ ಬಳಿ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: Breaking – ಕೆಜಿಎಫ್ ಹಾಡು ದುರ್ಬಳಕೆ : ರಾಹುಲ್ ಗಾಂಧಿ ಮತ್ತೆ ಸಂಕಷ್ಟ
Advertisement
Advertisement
ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಾಂಶುಪಾಲ, ಈ ಸಂಬಂಧ ಇತರೆ ಸರ್ಜನ್‍ಗಳು ಹಾಗೂ ಸೋಂಕು ನಿಯಂತ್ರಣ ತಂಡದ ಸಭೆ ಕರೆದು ಚರ್ಚಿಸುವುದಾಗಿ ತಿಳಿಸಿದ್ದಾರೆ. ಅಲ್ಲದೆ ವಿದ್ಯಾರ್ಥಿಗಳು ಸಲ್ಲಿಸಿರುವ ಮನವಿಯ ಬಗ್ಗೆ ತಂಡ ನಿರ್ಧರಿಸಲಿದೆ ಎಂದು ಹೇಳಿದ್ದಾರೆ.
Web Stories