ಬೆಂಗಳೂರು: ಒಳಮೀಸಲಾತಿ (Internal Reservation) ಕೊಡುವ ಸಂಬಂಧ ನ್ಯಾ. ನಾಗಮೋಹನ್ ದಾಸ್ ಆಯೋಗ ಇವತ್ತು ವರದಿ ಕೊಡ್ತಿದ್ದು, ಮಾದಿಗರಿಗೆ ನ್ಯಾಯ ಸಿಗೋ ವಿಶ್ವಾಸ ಇದೆ. ಮಾದಿಗರಿಗೆ 7% ಆದರೂ ಒಳಮೀಸಲಾತಿ ಕೊಡಬೇಕು ಎಂದು ಮಾಜಿ ಸಚಿವ ಆಂಜನೇಯ (H Anjaneya) ಒತ್ತಾಯ ಮಾಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಒಳಮೀಸಲಾತಿ ವರದಿ ಕೊಡುತ್ತಿರುವುದರಿಂದ ಆತಂಕ, ಕುತೂಹಲ, ಸಂತೋಷ ಎಲ್ಲಾ ಆಗುತ್ತಿದೆ. ಒಳಮೀಸಲಾತಿ ಬೇಕು ಅಂತ 35 ವರ್ಷಗಳ ಹೋರಾಟ ಮಾಡುತ್ತಿದ್ದೇವೆ. ಮಾದಿಗರಿಗೆ ಸರಿಯಾದ ಸವಲತ್ತು ಇದೂವರೆಗೂ ಸಿಕ್ಕಿಲ್ಲ. ಸುಪ್ರೀಂ ಕೋರ್ಟ್ ಒಳಮೀಸಲಾತಿ ಕೊಡಿ ಅಂತ ಆದೇಶ ಬಂದ ಮೇಲೆ ನಮಗೆ ಧೈರ್ಯ ಬಂತು. ಈವರೆಗೂ ನಮಗೆ ಸಿಗೋ ಸವಲತ್ತು ಸಿಕ್ಕಿಲ್ಲ. ಮಾದಿಗರು ಅವಕಾಶದಿಂದ ವಂಚನೆ ಆಗುತ್ತಿದ್ದಾರೆ. ಒಳಮೀಸಲಾತಿಯ ವರದಿ ಕೊಡುತ್ತಿದ್ದಾರೆ. ಒಳಮೀಸಲಾತಿ ವರದಿ ಕೊಡ್ತಿರೋದ್ರಿಂದ ಮಾದಿಗರು ಬದುಕಬಹುದು ಎಂಬ ನಂಬಿಕೆ ಬಂದಿದೆ ಎಂದರು. ಇದನ್ನೂ ಓದಿ: 1 ದಿನ ಸಾರಿಗೆ ಮುಷ್ಕರ ಮುಂದೂಡಿ: ಹೈಕೋರ್ಟ್ ಸೂಚನೆ
ನಾವು ಅಸ್ಪೃಶ್ಯರು ಅಂತ ಸರಿಯಾಗಿ ಸರ್ಕಾರದ ಸವಲತ್ತು ಸಿಕ್ಕಿರಲಿಲ್ಲ. ಸಿದ್ದರಾಮಯ್ಯ (Siddaramaiah) ಸಾಮಾಜಿಕ ನ್ಯಾಯದ ಹರಿಕಾರ ಒಳಮೀಸಲಾತಿ ಜಾತಿಗೆ ಆಯೋಗ ರಚನೆ ಮಾಡಿದ್ರು. ಆಯೋಗ ರಾಜ್ಯಾದ್ಯಂತ ಸಮೀಕ್ಷೆ ಮಾಡಿದೆ. ವರದಿ ಚೆನ್ನಾಗಿ ಇದೆ ಅನ್ನೋ ವಿಶ್ವಾಸ ಇದೆ. ನಮಗೆ ಸಿಗಬೇಕಾದ ಸವಲತ್ತು ಸಿಗೋ ವಿಶ್ವಾಸ ಇದೆ ಎಂದು ತಿಳಿಸಿದರು. ಇದನ್ನೂ ಓದಿ: ಸಹಮತದಿಂದ ಒಳಮೀಸಲಾತಿ ಹಂಚಿಕೆ – ಪರಮೇಶ್ವರ್ ಹೇಳಿಕೆಗೆ ಗೋವಿಂದ ಕಾರಜೋಳ ಆಕ್ರೋಶ
ಸದಾಶಿವ ಆಯೋಗ ಎಡ ಸಮುದಾಯಕ್ಕೆ 6% ಒಳಮೀಸಲಾತಿ ಕೊಟ್ಟಿದ್ದರು. ಮಾಧುಸ್ವಾಮಿ ಅವರು 6% ಕೊಡಬೇಕು ಅಂತ ಹೇಳಿದ್ರು. ಈಗ 7% ಮೀಸಲಾತಿಯಾದ್ರು ಮಾದಿಗರಿಗೆ ಸರ್ಕಾರ ಕೊಡಬೇಕು. 15% ಮೀಸಲಾತಿ ಇದ್ದಾಗ 6% ಶಿಫಾರಸು ಮಾಡಿದ್ರು. ಈಗ 17% ಮೀಸಲಾತಿ ಇದೆ. ಈಗ 7% ಆದ್ರು ಮೀಸಲಾತಿ ಎಡ ಸಮುದಾಯಕ್ಕೆ ಕೊಡಬೇಕು ಎಂದು ಒತ್ತಾಯ ಮಾಡಿದರು. ಇದನ್ನೂ ಓದಿ: ಯೆಮೆನ್‌ನಲ್ಲಿ ವಲಸಿಗರಿದ್ದ ಬೋಟ್ ಮುಳುಗಡೆ – 76 ಮಂದಿ ಸಾವು