ಪಾಟ್ನಾ: ಬಿಹಾರದ ಲಖಿಸರಾಯ್ ಜಿಲ್ಲೆಯಲ್ಲಿ ಬಾಂಬ್ ಸ್ಫೋಟಗೊಂಡು ಸುಮಾರು ಏಳು ಮಂದಿ ಗಾಯಗೊಂಡಿದ್ದಾರೆ.
ಘಟನೆ ಕುರಿತಂತೆ ಪ್ರತಿಕ್ರಿಯಿಸಿದ ಲಖಿಸರಾಯ್ ಎಸ್‍ಪಿ ಸುಶೀಲ್ ಕುಮಾರ್ ಅವರು, ಪಿಪಾರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ವಾಲಿಪುರ್ ಗ್ರಾಮದಲ್ಲಿ ಬೆಳಗ್ಗೆ 7 ಗಂಟೆ ಸುಮಾರಿಗೆ ಬಾಂಬ್ ಸ್ಫೋಟಗೊಂಡಿದೆ. ಲುಟನ್ ರಜಾಕ್ ಅವರಿಗೆ ಸೇರಿದ ಮನೆಯ ಹಿಂಬದಿಯಲ್ಲಿ ಪ್ಲಾಸ್ಟಿಕ್ ಚೀಲ ಪತ್ತೆಯಾಗಿದ್ದು, ಈ ಚೀಲವನ್ನು ಬಾಲಕನೊಬ್ಬ ತೆರೆದು ನೋಡಿದಾಗ ಬಾಂಬ್ ಸ್ಫೋಟಗೊಂಡಿದೆ. ಅಲ್ಲದೇ ಇದೇ ವೇಳೆ ಬಾಲಕನ ಪಕ್ಕದಲ್ಲಿಯೇ ನಿಂತಿದ್ದ ಆರು ಮಂದಿ ಕೂಡ ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಬಾಂಬ್ ತೀವ್ರತೆ ಕಡಿಮೆ ಇದ್ದಿದ್ದರಿಂದ 7 ಮಂದಿ ಕೂಡ ಸಣ್ಣಪುಟ್ಟ ಗಾಯಗೊಂಡಿದ್ದು, ಇದೀಗ ಅವರನ್ನು ಪಿಪಾರಿಯಾದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
Advertisement
Advertisement
ಸದ್ಯ ಘಟನಾ ಸ್ಥಳವನ್ನು ಪರಿಶೀಲಿಸುತ್ತಿದ್ದ ವೇಳೆ ಇನ್ನೂ ಮೂರು ಕಡಿಮೆ ತೀವ್ರತೆಯ ಬಾಂಬ್‍ಗಳು ಪತ್ತೆಯಾಗಿದೆ. ಸದ್ಯ ಗಾಯಾಳುಗಳ ಹೇಳಿಕೆಯನ್ನು ಪಡೆದುಕೊಂಡಿದ್ದು, ಬಾಂಬ್ ಹೇಗೆ ಇರಿಸಲಾಯಿತು ಎಂಬುದರ ಕುರಿತಂತೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಾಕಾನೆಯಿಂದ ಕಾಡಾನೆ ಕಾಡಿಗಟ್ಟೋ ಕಾರ್ಯಚರಣೆ – ಅಂಬಾರಿ ಹೊರುವ ಭೀಮ-ಅರ್ಜುನ ಭಾಗಿ
Advertisement
ಇದೇ ರೀತಿ ಮಾರ್ಚ್ 9 ರಂದು ಗೋಪಾಲ್‍ಗಂಜ್‍ನಲ್ಲಿ ಪಟಾಕಿ ತಯಾರಿಕೆ ವೇಳೆ ಬಾಂಬ್ ಸ್ಫೋಟಗೊಂಡು ವೃದ್ಧನೊಬ್ಬನ ಪ್ರಾಣ ಕಳೆದುಕೊಂಡಿದ್ದ. ಅಲ್ಲದೆ, ಮಾರ್ಚ್ 4 ರಂದು ಭಾಗಲ್ಪುರದಲ್ಲಿ ಭಾರೀ ಸ್ಫೋಟ ಸಂಭವಿಸಿ, ಇದರಲ್ಲಿ ನಾಲ್ಕು ಮನೆಗಳು ಸಂಪೂರ್ಣವಾಗಿ ಸುಟ್ಟುಹೋಗಿ, 13 ಜನರು ಸಾವನ್ನಪ್ಪಿದ್ದರು. ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿ ರಾಜ್ಯ ಕಾಂಗ್ರೆಸ್‍ನ ಪವರ್ ಪಾಯಿಂಟ್‍ಗಳಲ್ಲ: ಎಂ.ಬಿ.ಪಾಟೀಲ್