ಚೆನ್ನಾಗಿ ಸಿಂಗರಿಸಿಕೊಂಡು ಅಂದವಾಗಿ ಕಾಣ್ಬೇಕು ಅನ್ನೋ ಆಸೆ ಸಾಮಾನ್ಯವಾಗಿ ಎಲ್ಲಾ ಹುಡುಗಿಯರಿಗೂ ಇರುತ್ತೆ. ಆದ್ರೆ ರೆಡಿಯಾಗುವಾಗ ಕೊನೇ ಘಳಿಗೆಯಲ್ಲಿ ಏನಾದ್ರೂ ಎಡವಟ್ಟಾದ್ರೆ ಅದನ್ನ ಮ್ಯಾನೇಜ್ ಮಾಡೋಕೂ ಬರ್ಬೇಕು. ಅಂತಹ ಸಮಯದಲ್ಲಿ ನಿಮಗೆ ಈ ಹ್ಯಾಕ್‍ಗಳು ನೆರವಾಗಬಹುದು. ಏನದು ಹ್ಯಾಕ್ಸ್ ಅಂದ್ರಾ? ಮುಂದೆ ಓದಿ
1. ಜೀನ್ಸ್ ಝಿಪ್ ಲೂಸ್ ಆಗಿದ್ದು ಪದೇ ಪದೇ ಕೆಳಗೆ ಜಾರ್ತಿದ್ರೆ ಅದಕ್ಕಿಂತ ಮುಜುಗರ ಮತ್ತೊಂದಿಲ್ಲ. ಹಾಗಂತ ಆ ಜೀನ್ಸ್ ಹಾಕದೇ ಮೂಲೆಯಲ್ಲಿ ಇಡೋಕಾಗಲ್ಲ. ಇದಕ್ಕಾಗಿ ಇಲ್ಲಿದೆ ಸೂಪರ್ ಹ್ಯಾಕ್. ಒಂದು ಕೀಚೈನ್‍ನ ರಿಂಗ್ ತೆಗೆದುಕೊಂಡು ಅದನ್ನ ಝಿಪ್‍ನ ತುದಿಗೆ ಹಾಕಿ. ಝಿಪ್ ಮೇಲಕ್ಕೆಳೆದು ಪ್ಯಾಂಟಿನ ಬಟನ್ ಮೇಲೆ ರಿಂಗ್ ಕೂರುವಂತೆ ಮಾಡಿ ನಂತರ ಬಟನ್ ಹಾಕಿದ್ರೆ ಝಿಪ್ ಜಾರೋದಿಲ್ಲ.
Advertisement
Advertisement
2. ಶರ್ಟ್‍ನ ಗುಂಡಿಯಿಂದ ದಾರ ಸ್ವಲ್ಪ ಸ್ವಲ್ಪವೇ ಕಿತ್ತು ಬರುತ್ತಿದ್ರೆ ಟ್ರಾನ್ಸ್‍ಪರೆಂಟ್ ನೇಲ್‍ಪಾಲಿಶ್(ಯಾವುದೇ ಬಣ್ಣವಿಲ್ಲದ ತಿಳಿಯಾದ ನೇಲ್‍ಪಾಲಿಶ್) ಹಾಕಿ ಒಣಗಿಸಿ ನಂತರ ಶರ್ಟ್ ಧರಿಸಿ.
Advertisement
Advertisement
3. ಶೂ ತುದಿಯ ಬಿಳಿ ಭಾಗದ ಮೇಲೆ ಮಣ್ಣು ಮೆತ್ತಿಕೊಂಡಿದ್ದರೆ ಇಡೀ ಶೂವನ್ನ ನೀರಿನಿಂದ ತೊಳೆಯೋ ಬದಲು ಟೂತ್‍ಪೇಸ್ಟ್ ಬಳಸಿ ತೆಗೆಯಬಹುದು. ಮೊದಲಿಗೆ ಬಟ್ಟೆ ಅಥವಾ ಟಿಶ್ಯೂನಿಂದ ಮಣ್ಣನ್ನ ತೆಗೆಯಿರಿ. ನಂತರ ಒಂದು ಟೂತ್‍ಬ್ರಷ್‍ಗೆ ಪೇಸ್ಟ್ ಹಾಕಿ ಶೂ ಮೇಲೆ ಉಜ್ಜಿ ನಂತರ ಒಣಬಟ್ಟೆಯಿಂದ ಒರೆಸಿದ್ರೆ ನಿಮ್ಮ ಶೂ ಫಳಫಳಿಸುತ್ತೆ.
4. ಕಪ್ಪು ಜೀನ್ಸ್ ಅಥವಾ ಪ್ಯಾಂಟ್ ಮೇಲೆ ನೂಲುಗಳು ಅಂಟಿಕೊಂಡಿದ್ದರೆ ಅದನ್ನ ತೆಗೆಯಲು ಸೆಲ್ಲೋ ಟೇಪ್ ಬಳಸಿ. ಸ್ವಲ್ಪ ಟೇಪ್ ಕಟ್ ಮಾಡಿಕೊಂಡು ಅಂಗೈಗೆ ಸುತ್ತಿಕೊಂಡು ಪ್ಯಾಂಟ್ ಮೇಲೆ ಒತ್ತಿದರೆ ನೂಲು ಟೇಪ್‍ಗೆ ಅಂಟಿಕೊಳ್ಳುತ್ತದೆ. ಹೀಗೆ ನೂಲು ಇರುವ ಕಡೆಯಲ್ಲೆಲ್ಲಾ ಪ್ರೆಸ್ ಮಾಡಿ ಪ್ಯಾಂಟ್ ಮೇಲೆ ಅಂಟಿಕೊಂಡ ನೂಲನ್ನು ತೆಗೆಯಬಹುದು.
5. ಸ್ವೆಟರ್‍ಗಳು ಸ್ವಲ್ಪ ಹಳೆಯದಾದಂತೆ ಅದರ ಮೇಲಿನ ನೂಲು ಸಣ್ಣ ಸಣ್ಣ ಉಂಡೆಗಳಂತೆ ಅಂಟಿಕೊಂಡು ಸ್ವೆಟರ್‍ನ ಅಂದವನ್ನ ಕಡೆಸುತ್ತದೆ. ಇದನ್ನ ತೆಗೆಯಬೇಕಾದ್ರೆ ಶೇವಿಂಗ್ ರೇಜರ್ ಬಳಸಿ. ರೇಜರ್‍ನಿಂದ ಒಂದೆರಡು ಬಾರಿ ಸ್ವೆಟರ್ ಮೇಲೆ ಶೇವ್ ಮಾಡಿದ್ರೆ ಆಯ್ತು.
6. ಜೀನ್ಸ್ ಅಥವಾ ಯಾವುದೇ ಪ್ಯಾಂಟ್ ಕೊಳ್ಳಲು ಹೋದಾಗ ಅದು ನಿಮಗೆ ಫಿಟ್ ಆಗುತ್ತದೋ ಇಲ್ಲವೋ ಎಂದು ಟ್ರೈ ಮಾಡಲು ಸಮಯವಿಲ್ಲ ಅಂತಾದ್ರೆ ಇಲ್ಲಿದೆ ಐಡಿಯಾ. ಪ್ಯಾಂಟನ್ನ ಹಿಂದಿನಿಂದ ನಿಮ್ಮ ಕುತ್ತಿಗೆಯ ಸುತ್ತ ಸುತ್ತಿ ಹಿದಿಡುಕೊಳ್ಳಿ. ಕುತ್ತಿಗೆಯ ಮುಂಭಾಗದಲ್ಲಿ ಪ್ಯಾಂಟ್‍ನ ಎರಡೂ ತುದಿ ಟಚ್ ಆದ್ರೆ ಆ ಪ್ಯಾಂಟ್ ನಿಮಗೆ ಫಿಟ್ ಆಗುತ್ತದೆ. ತುದಿಗಳು ಟಚ್ ಆಗದಿದ್ರೆ ಚಿಕ್ಕದು ಅಥವಾ ಎರಡೂ ತುದಿ ಒಂದರ ಮೇಲೊಂದು ಕುರುವಷ್ಟು ಉದ್ದವಿದ್ರೆ ಆ ಪ್ಯಾಂಟ್ ನಿಮಗೆ ದೊಡ್ಡದಾಗುತ್ತದೆ ಎಂದರ್ಥ.
7. ಜ್ಯಾಕೆಟ್, ಜೀನ್ಸ್ ಅಥವಾ ಬ್ಯಾಗಿನ ಝಿಪ್ ಹಾಕಲು ಕಷ್ಟವಾಗ್ತಿದ್ರೆ ಝಿಪ್‍ನ ಎರಡೂ ಬದಿಗೆ ಕ್ರೆಯಾನ್, ಕ್ಯಾಂಡಲ್ ಅಥವಾ ಪೆನ್ಸಿಲ್‍ನಿಂದ ಉಜ್ಜಿ. ನಂತರ ಝಿಪ್ ಸಲೀಸಾಗಿ ಎಳೆಯಬಹುದು.