ಚಂಡೀಗಢ: ಗಣೇಶ ಮೂರ್ತಿ ವಿಸರ್ಜನೆ ವೇಳೆ ಏಳು ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಹರಿಯಾಣದಲ್ಲಿ ನಡೆದಿದೆ.
ಘಟನೆಯಲ್ಲಿ ಸೋನಿಪತ್‍ನಲ್ಲಿ ಮೂವರು ಹಾಗೂ ಮಹೇಂದ್ರಗಢದ ನಾಲ್ವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆಗಸ್ಟ್ 31 ರಂದು ಆರಂಭವಾದ ಗಣೇಶ ಚತುರ್ಥಿ ಹಬ್ಬ 10 ದಿನಗಳ ಬಳಿಕ ಮೂರ್ತಿಯನ್ನು ವಿಸರ್ಜನೆ ಮಾಡುವ ಮೂಲಕ ಅಂತ್ಯಗೊಂಡಿತು. ಗಣೇಶ ಮೂರ್ತಿಯನ್ನು ಭಕ್ತರು ಮೆರವಣಿಗೆ ಮಾಡಿ ನಂತರ ಸಮೀಪದಲ್ಲಿರುವ ಕೆರೆಗೆ ತೆಗೆದುಕೊಂಡು ಹೋಗಿ ವಿಸರ್ಜನೆ ಮಾಡಿದ್ದಾರೆ.
Advertisement
Advertisement
ಸೋನಿಪತ್‍ನ ಮಿಮಾರ್‍ಪುರ ಘಾಟ್‍ಗೆ ತಮ್ಮ ಮಗ ಮತ್ತು ಸೋದರಳಿಯನೊಂದಿಗೆ ಗಣೇಶ ಮೂರ್ತಿಯನ್ನು ವಿಸರ್ಜನಾ ಮಾಡಲು ತೆರಳಿದ್ದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇದೀಗ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
महेंद्रगढ़ और सोनीपत जिले में गणपति विसर्जन के दौरान नहर में डूबने से कई लोगों की असामयिक मृत्यु का समाचार हृदयविदारक है।
इस कठिन समय में हम सभी मृतकों के परिजनों के साथ खड़े हैं।
NDRF की टीम ने कई लोगों को डूबने से बचा लिया है, मैं उनके शीघ्र स्वस्थ होने की प्रार्थना करता हूँ।
— Manohar Lal (@mlkhattar) September 9, 2022
Advertisement
ಮತ್ತೊಂದೆಡೆ ಮಹೇಂದ್ರಗಢದಲ್ಲಿ, ಕನಿನಾ-ರೇವಾರಿ ರಸ್ತೆಯಲ್ಲಿರುವ ಜಗಡೋಲಿ ಗ್ರಾಮದ ಬಳಿಯ ಕಾಲುವೆಯ ಮೇಲೆ ಗಣೇಶನ ವಿಗ್ರಹವನ್ನು ವಿಸರ್ಜನಾ ಮಾಡಲು ಹೋದ ಸುಮಾರು ಒಂಬತ್ತು ಜನರು ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದರು. ಅವರಲ್ಲಿ ತಡರಾತ್ರಿ ಎಂಟು ಜನರನ್ನು ಕಾಲುವೆಯಿಂದ ಹೊರತೆಗೆಯಲಾಯಿತು. ಈ ಪೈಕಿ ನಾಲ್ವರು ಸಾವನ್ನಪ್ಪಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಎಂಎಲ್ ಖಟ್ಟರ್ ಅವರು, ಮಹೇಂದ್ರಗಢ ಮತ್ತು ಸೋನಿಪತ್ ಜಿಲ್ಲೆಗಳಲ್ಲಿ ಗಣಪತಿ ವಿಸರ್ಜನೆ ವೇಳೆ ಕಾಲುವೆಯಲ್ಲಿ ಮುಳುಗಿ ಹಲವರು ಅಕಾಲಿಕ ಮರಣ ಹೊಂದಿರುವ ಸುದ್ದಿ ಹೃದಯ ವಿದ್ರಾವಕವಾಗಿದೆ. ಈ ಸಂಕಷ್ಟದ ಸಮಯದಲ್ಲಿ ಮೃತರ ಕುಟುಂಬದವರ ಜೊತೆ ನಾವೆಲ್ಲರೂ ನಿಂತಿದ್ದೇವೆ. ಎನ್‍ಡಿಆರ್‍ಎಫ್ ತಂಡವು ಅನೇಕ ಜನರನ್ನು ನೀರಿನಿಂದ ಮುಳುಗುವುದರಿಂದ ರಕ್ಷಿಸಿದೆ. ಅವರೆಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ನಾನು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.