ಮುಂಬೈ: ಮಹಾರಾಷ್ಟ್ರದ (Maharashtra) ನಾಸಿಕ್‌ನಲ್ಲಿ (Nashik) ನಡೆದ ರಸ್ತೆ ಅಪಘಾತದಲ್ಲಿ (Accident) ಮೂವರು ಮಹಿಳೆಯರು, ಮೂವರು ಪುರುಷರು ಹಾಗೂ ಎರಡು ವರ್ಷದ ಮಗು ಸೇರಿದಂತೆ 7 ಜನ ಸಾವನ್ನಪ್ಪಿದ್ದಾರೆ.
ಕಾರು ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ಬಳಿಕ ಪಕ್ಕದಲ್ಲಿದ್ದ ಸಣ್ಣ ಕಾಲುವೆಗೆ ಕಾರು ಪಲ್ಟಿಯಾಗಿದೆ. ಪರಿಣಾಮ ಕಾರಿನಲ್ಲಿದ್ದ 7 ಮಂದಿ ಸಾವಿಗೀಡಾಗಿದ್ದಾರೆ. ಬೈಕ್‌ನಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಇರಾಕ್‌ನ ಶಾಪಿಂಗ್ ಮಾಲ್‌ನಲ್ಲಿ ಬೆಂಕಿ ಅವಘಡ – 50 ಮಂದಿ ಸಾವು
ಕಾರಿನಲ್ಲಿದ್ದವರು ನಾಸಿಕ್ ನಗರದಲ್ಲಿ ಸಂಬಂಧಿಕರೊಬ್ಬರ ಮಗನ ಹುಟ್ಟುಹಬ್ಬದ ಆಚರಣೆಯಲ್ಲಿ ಭಾಗಿಯಾಗಿ ವಾಪಸ್ ಆಗುತ್ತಿದ್ದರು. ಈ ವೇಳೆ ಬೈಕ್‌ಗೆ ಕಾರು ಡಿಕ್ಕಿಯಾಗಿದೆ. ಡಿಕ್ಕಿಯ ಪರಿಣಾಮ ಸಣ್ಣ ಕಾಲುವೆಗೆ ಕಾರು ಉರುಳಿ ಬಿದ್ದಿದೆ.
ಕಾಲುವೆಗೆ ಕಾರು ಬೀಳುತ್ತಿದ್ದಂತೆ ಕಾರಿನೊಳಗೆ ನೀರು ತುಂಬಿದೆ. ಇದರಿಂದ ಒಳಗೆ ಸಿಲುಕಿಕೊಂಡ ಪ್ರಯಾಣಿಕರು ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: Bidar | ಲೋ ಬಿಪಿಯಿಂದ ಮಹಿಳಾ ಪೊಲೀಸ್ ಪೇದೆ ಸಾವು