LatestMain PostNational

ನಿರ್ಮಾಣ ಹಂತದ ಕಟ್ಟಡದ ಲಿಫ್ಟ್ ಕುಸಿತ – 7 ಸಾವು, ಒಬ್ಬರ ಸ್ಥಿತಿ ಗಂಭೀರ

ಗಾಂಧೀನಗರ: ನಿರ್ಮಾಣ ಹಂತದ ಕಟ್ಟಡದಲ್ಲಿ ಲಿಫ್ಟ್(Lift) ಕುಸಿದು(Collapse) 7 ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಗುಜರಾತ್‌ನ(Gujarat) ಅಹಮದಾಬಾದ್‌ನಲ್ಲಿ(Ahmedabad) ಬುಧವಾರ ಸಂಭವಿಸಿದೆ. ಘಟನೆಯಲ್ಲಿ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಗುಜರಾತ್ ವಿಶ್ವವಿದ್ಯಾನಿಲಯದ ಬಳಿ ಸುಮಾರು 10 ಗಂಟೆಯ ವೇಳೆಗೆ ನಿರ್ಮಾಣ ಹಂತದಲ್ಲಿದ್ದ ಬಹುಮಹಡಿ ಕಟ್ಟಡದ ಲಿಫ್ಟ್ ಕುಸಿದಿದೆ. ಲಿಫ್ಟ್ ಕುಸಿತದ ವೇಳೆ ಅದರಲ್ಲಿ 8 ಕಾರ್ಮಿಕರಿದ್ದರು ಎನ್ನಲಾಗಿದೆ.

ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್(ಎಎಂಸಿ)ಯ ಅಗ್ನಿಶಾಮಕ ದಳ ಅಥವಾ ತುರ್ತು ಸೇವೆಗಳ ಇಲಾಖೆಯ ಅಧಿಕಾರಿಗಳಿಗೆ ಘಟನೆಯ ಬಗ್ಗೆ ಯಾವುದೇ ಕರೆಗಳು ಬಂದಿಲ್ಲ ಎನ್ನಲಾಗಿದೆ. ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳ ತಲುಪಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಕಂದಕಕ್ಕೆ ಉರುಳಿದ ಮಿನಿಬಸ್‌ – 10 ಮಂದಿ ದುರ್ಮರಣ, 28 ಮಂದಿಗೆ ಗಾಯ

ನಮಗೆ ಘಟನೆಯ ಬಗ್ಗೆ ಯಾವುದೇ ಏಜೆನ್ಸಿ ಅಥವಾ ಡೆವೆಲಪರ್‌ಗಳಿಂದ ಕರೆ ಬಂದಿರಲಿಲ್ಲ. ಮಾಧ್ಯಮಗಳ ವರದಿ ಹಾಗೂ ಪ್ರತಿನಿಧಿಗಳಿಂದ ಬಂದ ದೂರವಾಣಿ ಮೂಲಕ ಘಟನೆ ಬಗ್ಗೆ ತಿಳಿದುಕೊಂಡೆವು. ಬಳಿಕ ಘಟನೆ ಬಗ್ಗೆ ಪರಿಶೀಲಿಸಲು ಸ್ಥಳಕ್ಕೆ ಬಂದೆವು ಎಂದು ಮುಖ್ಯ ಅಗ್ನಿಶಾಮಕ ಅಧಿಕಾರಿ ಜಯೇಶ್ ಖಾಡಿಯಾ ತಿಳಿಸಿದ್ದಾರೆ.

ಇದು ಖಾಸಗಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡವಾಗಿದ್ದು, ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡಿರುವ ಕಾರ್ಮಿಕನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಬೇಗುಸರಾಯ್‍ನಲ್ಲಿ ಗುಂಡಿನ ದಾಳಿ – 11 ಮಂದಿಗೆ ಗಂಭೀರ ಗಾಯ, ಓರ್ವ ಸಾವು

Live Tv

Leave a Reply

Your email address will not be published.

Back to top button