ಬೆಂಗಳೂರು: ಸಿದ್ದರಾಮಯ್ಯ (Siddaramaiah) ಮಂಡಿಸಿದ ದಾಖಲೆಯ 15ನೇ ಬಜೆಟ್ ರಾಜ್ಯದ 7 ಕೋಟಿ ಜನರ ಕಿವಿ ಮೇಲೆ ಹೂವು ಮುಡಿಸಿದ ಬಜೆಟ್ (Budget) ಅಂತ ಮಾಜಿ ಸಿಎಂ ಕುಮಾರಸ್ವಾಮಿ (KumaraSwamy) ಲೇವಡಿ ಮಾಡಿದ್ದಾರೆ.
ಬಜೆಟ್ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕಳೆದ ಬಿಜೆಪಿ ಅವಧಿಯಲ್ಲಿ ಬೊಮ್ಮಾಯಿ ಬಜೆಟ್ ಮಂಡಿಸುವಾಗಿ ಹೂವು ಕಿವಿಗೆ ಇಟ್ಟುಕೊಂಡು ಸಿದ್ದರಾಮಯ್ಯ ಬಂದಿದ್ದರು. ಅ ಹೂವನ್ನ 7 ಕೋಟಿ ಜನರ ಕಿವಿಗೆ ಈಗ ಮುಡಿಸಿದ್ದಾರೆ ಸಿದ್ದರಾಮಯ್ಯ. ಈ ಬಜೆಟ್ ನೋಡಿದರೆ ಇದು ನಾಳೆ ಬಾ ಸರ್ಕಾರ ಎಂದು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಕಿಕ್ ಪ್ರಿಯರಿಗೆ ಶಾಕ್- ಅಬಕಾರಿಗೆ ಬಿಗ್ ಟಾರ್ಗೆಟ್: ಹಿಂದಿನ ಬಜೆಟ್‌ನಲ್ಲಿ ಗುರಿ ಎಷ್ಟಿತ್ತು?
ಸಿದ್ದರಾಮಯ್ಯ ಅವರ 15ನೇ ಬಜೆಟ್ ಇದು. ರಾಜ್ಯದ ಇತಿಹಾಸದಲ್ಲಿ 15 ಬಜೆಟ್ ಮಂಡಿಸೋರು ಮುಂದೆ ಬರುತ್ತಾರೋ ಗೊತ್ತಿಲ್ಲ. ಸಿದ್ದರಾಮಯ್ಯಗೆ ಅನುಭವ, ಆಡಳಿತದ ಅನುಭವ ಇದೆ. ಆದರೆ ಅವರು ಬಜೆಟ್ ಓದುವಾಗಲೇ ನನಗೆ ಅನಿಸಿದ್ದು ಅವರಲ್ಲಿ ವಿಶ್ವಾಸದ ಕೊರತೆ ಎದ್ದು ಕಾಣುತ್ತಿದೆ ಅಂತ. ಗ್ಯಾರಂಟಿಯ ಗುಂಗಿನಿಂದ ಈ ಸರ್ಕಾರ ಹೊರಗೆ ಬಂದಿಲ್ಲ. 10 ತಿಂಗಳು ಕಳೆದರೂ ಗ್ಯಾರಂಟಿ ಬಗ್ಗೆ ಕನವರಿಗೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: State Budget 2024- ರಾಜ್ಯ ಬಜೆಟ್ ನಲ್ಲಿ ಕನ್ನಡ ಮತ್ತು ಸಂಸ್ಕೃತಿ
ಸರ್ಕಾರ ಖಜಾನೆ ಖಾಲಿ ಆಗಿದೆ ಅಂತ ನಾವು ಹೇಳಿಲ್ಲ. ರಾಜ್ಯದ ಜನರು ಸಮೃದ್ಧಿಯಾಗಿ ಖಜಾನೆ ತುಂಬಿಸಿದ್ದಾರೆ. ಈ ಬಜೆಟ್ ನೋಡಿದರೆ ಜನರು ನಾವು ಎಷ್ಟು ತಪ್ಪು ಮಾಡಿದ್ದೇವೆ. ಇವರನ್ನ ಗೆಲ್ಲಿಸಿ ಅಂತ ಜನ ಅಂದುಕೊಂಡಿದ್ದಾರೆ. ಕೇಂದ್ರ ಸರ್ಕಾರ ತಮ್ಮ ಬಜೆಟ್‌ನಲ್ಲಿ ಅಮೃತಕಾಲ ಅಂದರೆ ಇದು ವಿನಾಶಕಾಲ ಅಂತ ಸಿದ್ದರಾಮಯ್ಯ ಹೇಳಿದ್ದರು. ಆದರೆ ಇವತ್ತಿನ ಸಿಎಂ ಬಜೆಟ್ ರಾಜ್ಯದ ವಿನಾಶಕಾಲಕ್ಕೆ ಬುನಾದಿ ಹಾಕಿದ್ದಾರೆ ಎಂದು ಹೆಚ್‌ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವನ್ನು ಆಯುಕ್ತಾಲಯವನ್ನಾಗಿ ಉನ್ನತೀಕರಣ – ಸಿಎಂಗೆ ಅಭಿನಂದನೆ ಸಲ್ಲಿಸಿದ ಡಾ.ಶರಣಪ್ರಕಾಶ್ ಪಾಟೀಲ್
ಕೇಂದ್ರ ಸರ್ಕಾರಕ್ಕೆ ನಿತ್ಯ ಬೈತಾರೆ. ಆದರೆ ಕೇಂದ್ರಕ್ಕೆ ಮನವಿ ಮಾಡ್ತೀವಿ ಅಂತ ಹೇಳಿದ್ದಾರೆ. ಪ್ರತಿ ಪುಟದಲ್ಲಿ ಕೇಂದ್ರವನ್ನು ಬೈದಿದ್ದಾರೆ. ಸತ್ಯ ನಿರೂಪಿಸಬೇಕಾದ್ರು ನೂರು ಬಾರಿ ಸುಳ್ಳು ಹೇಳು ಅಂತ ಗಾದೆ ಇದೆ. ಈಗ ಸಿದ್ದರಾಮಯ್ಯ ಇದನ್ನೇ ಮಾಡ್ತಿದ್ದಾರೆ. ಇಂತಹ ಸರ್ಕಾರ ಈ ದೇಶದಲ್ಲಿ ಯಾವತ್ತು ಬಂದಿರಲಿಲ್ಲ. ಸಿದ್ದರಾಮಯ್ಯಗೆ ಜೆಡಿಎಸ್, ಬಿಜೆಪಿ, ಕೇಂದ್ರದ ಮೇಲೆ ಇಷ್ಟು ದಿನ ಆಕ್ರೋಶ ಇತ್ತು ಅಂತ ಅಂದುಕೊಂಡಿದ್ದೆ. ಆದರೆ ಈ ಬಜೆಟ್ ನೋಡಿದ್ರೆ ಸಿದ್ದರಾಮಯ್ಯಗೆ 7 ಕೋಟಿ ಕನ್ನಡಿಗರ ಮೇಲೆ ಆಕ್ರೋಶ ಇದೆ ಅಂತ ಈ ಬಜೆಟ್‌ನಿಂದ ಗೊತ್ತಾಗುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲೇ ಪ್ರಥಮ- ಮೀನುಗಾರರ ರಕ್ಷಣೆಗೆ ಸಮುದ್ರ ಅಂಬುಲೆನ್ಸ್ ಖರೀದಿ: ಸಿಎಂ ಘೋಷಣೆ