ಲಕ್ನೋ: ಉತ್ತರಪ್ರದೇಶದಲ್ಲಿ ಮತ್ತೊಂದು ರೈಲು ಸುರಂತ ಸಂಭವಿಸಿದೆ. ಹೌರಾ-ಜಬಲ್‍ಪುರ್-ಶಕ್ತಿಪುಂಜ್ ಎಕ್ಸ್ ಪ್ರೆಸ್‍ನ 7 ಬೋಗಿಗಳು ಹಳಿ ತಪ್ಪಿವೆ.
Advertisement
ಇಂದು ಬೆಳಿಗ್ಗೆ 6.30ರ ಸುಮಾರಿಗೆ ಸೋನ್‍ಭದ್ರಾದ ಓಬ್ರಾ ಹಾಗೂ ಪಾಫ್ರಾಕುಂದ್ ನಿಲ್ದಾಣಗಳ ಮಧ್ಯೆ ಈ ಘಟನೆ ನಡೆದಿದೆ. ಪ್ರಯಾಣಿಕರಿಗೆ ಗಾಯಗಳಾಗಿರುವ ಬಗ್ಗೆ ಯಾವುದೇ ವರದಿಯಾಗಿಲ್ಲ ಎಂದು ಭಾರತೀಯ ರೈಲ್ವೆಯ ವಕ್ತಾರರು ತಿಳಿಸಿದ್ದಾರೆ.
Advertisement
Advertisement
ಕಳೆದ 20 ದಿನಗಳಲ್ಲಿ ನಡೆದ ನಾಲ್ಕನೇ ರೈಲು ದುರಂತ ಇದಾಗಿದೆ. ಘಟನೆಯಿಂದಾಗ ರೈಲು ಸಂಚಾರ ವ್ಯತ್ಯಯವಾಗಿದೆ.
Advertisement
ಇಂದು ಬೆಳಿಗ್ಗೆ 6.25ಕ್ಕೆ ಈ ಘಟನೆ ನಡೆದಿದೆ. ಘಟನಾ ಸ್ಥಳವನ್ನ ಈಗಾಗಲೇ ತೆರವುಗೊಳಿಸಿದ್ದೇವೆ ಎಂದು ರೈಲ್ವೆ ಸಚಿವಾಲಯದ ವಕ್ತಾರರಾದ ಅನಿಲ್ ಸಕ್ಸೇನಾ ಹೇಳಿದ್ದಾರೆ.
ಹಳಿ ತಿಪ್ಪಿದ ಬೋಗಿಗಳಲ್ಲಿದ್ದ ಪ್ರಯಾಣಿಕರನ್ನು 7.28ರ ವೇಳೆಗೆ ಉಳಿದ ಬೋಗಿಗಳಿಗೆ ಶಿಫ್ಟ್ ಮಡಲಾಗಿದೆ. ಎಲ್ಲರೂ ಸುರಕ್ಷಿತವಾಗಿದ್ದಾರೆ. ಅವಘಡದಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ರೈಲು ಗಂಟೆಗೆ 40 ಕಿ.ಮೀ ವೇಗದಲ್ಲಿ ಹೋಗುತ್ತಿದ್ದರಿಂದ ಯಾವುದೇ ಹಾನಿಯಾಗಿಲ್ಲ ಎಂಧು ಅಧಿಕಾರಿಗಳು ಹೇಳಿದ್ದಾರೆ.
ಆಗಸ್ಟ್ 29ರಂದು ನಾಗ್ಪುರ ಮುಂಬೈ ದುರಂತೋ ಎಕ್ಸ್ ಪ್ರೆಸ್‍ನ 9 ಬೋಗಿಗಳು ಮಹಾರಾಷ್ಟ್ರದ ಕಲ್ಯಾಣ್‍ನ ತಿತ್ವಾಲಾ ನಿಲ್ದಾಣದ ಬಳಿ ಹಳಿ ತಪ್ಪಿದ್ದವು. ಈ ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿರಲಿಲ್ಲ.
ಆಗಸ್ಟ್ 23ರಂದು ಕೈಫಿಯಾತ್ ಎಕ್ಸ್ ಪ್ರೆಸ್ ಹಳಿ ತಪ್ಪಿತ್ತು. ಈ ಘಟನೆಯಲ್ಲಿ 80 ಜನರಿಗೆ ಗಾಯಗಳಾಗಿತ್ತು. ಆಗಸ್ಟ್ 19ರಂದು ಉತ್ಕಲ್ ಎಕ್ಸ್ ಪ್ರೆಸ್ ನ 14 ಬೋಗಿಗಳು ಹಳಿ ತಪ್ಪಿ 24 ಮಂದಿ ಸಾವನ್ನಪ್ಪಿದ್ದರು. ಈ ಘಟನೆಯಲ್ಲಿ 156 ಮಂದಿ ಗಾಯಗೊಂಡಿದ್ದರು. ಈ ಎರಡೂ ಘಟನೆಗಳು ಉತ್ತರಪ್ರದೇಶದಲ್ಲಿ ನಡೆದಿತ್ತು.
Incident happened at 6:25 am near Obra in Sonbhadra; all passengers safe, no injury. Railway min Piyush Goyal briefed: Indian Railways PRO pic.twitter.com/bH9GSQU4rK
— ANI UP/Uttarakhand (@ANINewsUP) September 7, 2017