ಮುಂಬೈ: ನಾಗ್ಪುರದಿಂದ ಮುಂಬೈಗೆ ಬರುತ್ತಿದ್ದ ದುರಂತೊ ಎಕ್ಸ್ ಪ್ರೆಸ್ ಥಾಣೆಯ ಟಿಟಿವಾಲಾ ನಿಲ್ದಾಣದ ಬಳಿ ಇಂದು ಬೆಳಗ್ಗೆ ಹಳಿ ತಪ್ಪಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ.
ದುರಂತೊ ಎಕ್ಸ್ ಪ್ರೆಸ್‍ನ ಒಟ್ಟು 7 ಎಸಿ ಬೋಗಿಗಳು ಹಳಿ ತಪ್ಪಿದ್ದು, ರೈಲಿನಲ್ಲಿ ಸಿಲುಕಿರುವ ಪ್ರಯಾಣಿಕರನ್ನು ರಕ್ಷಣೆ ಮಾಡಲಾಗುತ್ತಿದೆ. ಇಂದು ಬೆಳಗಿನ ಜಾವದಿಂದ ಘಟನಾ ಸ್ಥಳದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ. ಘಟನೆಯಿಂದ ಇದೂವರೆಗೂ ಯಾವುದೇ ಸಾವು-ನೋವುಗಳ ಬಗ್ಗೆ ದಾಖಲಾಗಿಲ್ಲ. ಇನ್ನು ರೈಲಿನ ಕೆಲವು ಬೋಗಿಗಳಲ್ಲಿರುವ ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
10 ದಿನಗಳಲ್ಲಿ 3ನೇ ಅಪಘಾತ: ಇದು ಆಗಸ್ಟ್ ತಿಂಗಳಲ್ಲಿ ನಡೆಯುತ್ತಿರುವ ಮೂರನೇ ರೈಲು ಅಪಘಾತವಾಗಿದೆ. ಉತ್ತರ ಪ್ರದೇಶ ರಾಜ್ಯದ ಮುಜಾಫರ್ ನಗರದ ಬಳಿ ಉತ್ಕಲ್ ಎಕ್ಸ್ ಪ್ರೆಸ್ ಹಳಿ ತಪ್ಪಿ ಕಾಲೇಜಿಗೆ ನುಗ್ಗಿತ್ತು. ಈ ಅಪಘಾತದಲ್ಲಿ 23 ಜನರು ಸಾವನ್ನಪ್ಪಿದ್ದು, 97 ಜನರು ಗಾಯಗೊಂಡಿದ್ದರು. ಇದಾದ ಬಳಿಕ ಅಝಮ್ಘಡ್ ದಿಂದ ನವದೆಹಲಿಗೆ ತೆರಳುತ್ತಿದ್ದ ಕೈಫಿಯತ್ ಎಕ್ಸ್ ಪ್ರೆಸ್ ರೈಲಿನ 10 ಬೋಗಿಗಳು ಹಳಿ ತಪ್ಪಿದ್ದು, ರೈಜಿನ ಇಂಜಿನ್ ಡಂಪರ್ ಗೆ ಡಿಕ್ಕಿಯಾಗಿದೆ. ಪರಿಣಾಮ 74 ಮಂದಿ ಗಾಯಗೊಂಡಿದ್ದರು.
2/Derailed 7Coaches at km 83/09.
NO CASUALTIES OR INJURIES.GM GM,DRM CSO PCE others reaching to site
— Ministry of Railways (@RailMinIndia) August 29, 2017
#DurontoExpress derails: Local train services from #Kasara to #Kalyan (towards CSMT) affected https://t.co/85cGL91Blb @Shashankrao06 pic.twitter.com/S3Lnq4nxLt
— DNA (@dna) August 29, 2017
Watch: Five coaches and engine of Nagpur-Mumbai #DurontoExpress derailed https://t.co/85cGL91Blb pic.twitter.com/1bJO8RyeCb
— DNA (@dna) August 29, 2017
BREAKING: Nagpur-Mumbai #DurontoExpress derails near Titwala in #Maharashtra; more details awaited pic.twitter.com/Uke8SexSNH
— DD News (@DDNewslive) August 29, 2017
#Maharashtra: 5 coaches & engine of Nagpur-Mumbai #DurontoExpress derails near #Titwala pic.twitter.com/KRhbRuPk8O
— News Nation (@NewsNationTV) August 29, 2017
BREAKING: नागपुर-दुरंतो एक्सप्रेस पटरी से उतरी #Maharashtra #DurontoExpress #derails https://t.co/5SgEAkaRKy pic.twitter.com/Sj4UlQdGAt
— News24 (@news24tvchannel) August 29, 2017