ಹಾವೇರಿ: ಹಾವೇರಿ (Haveri) ನಗರ ಠಾಣೆ ಪೊಲೀಸರು (Police) ಕಾರ್ಯಾಚರಣೆ ನಡೆಸಿ ಬರೋಬ್ಬರಿ 10 ಕೆ.ಜಿ ಗಾಂಜಾ (Marijuana) ಜಪ್ತಿ ಮಾಡಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಹಾವೇರಿ ನಗರದ ಸುಭಾಶ್ ಸರ್ಕಲ್ ಮತ್ತು ನಾಗೇಂದ್ರನಮಟ್ಟಿಯ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ದಿಳ್ಳೆಪ್ಪ ಅಳಲಗೇರಿ ಎಂಬಾತ ಒಡಿಶಾದಿಂದ ಅಕ್ರಮವಾಗಿ ಗಾಂಜಾ ತಂದು ತನ್ನ ಅಂಗಡಿಯಲ್ಲಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ. ಅಲ್ಲದೆ ಆರೋಪಿಗಳಾದ ಫಾರೂಕ್ ಅಹಮ್ಮದ್ ಕುಂಚೂರು, ಇಸ್ಮಾಯಿಲ್ ನದಾಫ ಮತ್ತು ಸಾಹಿಲ್ ಕರ್ಜಗಿ ಗಾಂಜಾವನ್ನು ಸಣ್ಣಸಣ್ಣ ಪ್ಯಾಕೆಟ್‌ಗಳಲ್ಲಿ ತುಂಬಿಸಿ ಮಾರಾಟ ಮಾಡುತ್ತಿದ್ದರು.ಇದನ್ನೂ ಓದಿ: ನವೀನ್ ಪಟ್ನಾಯಕ್ ಆಪ್ತ ವಿ.ಕೆ.ಪಾಂಡಿಯನ್ ಸಕ್ರಿಯ ರಾಜಕಾರಣಕ್ಕೆ ವಿದಾಯ
ಬಂಧಿತರಿಂದ 4 ಮೊಬೈಲ್ ಮತ್ತು 7,91,000 ರೂ. ಮೌಲ್ಯದ ಗಾಂಜಾವನ್ನ ವಶಪಡಿಸಿಕೊಳ್ಳಲಾಗಿದೆ. ಹಾವೇರಿ ಶಹರ ಪೊಲೀಸ್ ಠಾಣೆ ಸಿಪಿಐ ಡಾ.ಮೋತಿಲಾಲ್ ಪವಾರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದನ್ನೂ ಓದಿ: ಮತ್ತೆ ಪ್ರಧಾನಿಯಾಗಿ ಮೋದಿ ಪದಗ್ರಹಣ – ಪುರಿ ಬೀಚ್‌ನಲ್ಲಿ ಮರಳು ಕಲಾಕೃತಿ ರಚಿಸಿ ಶುಭಕೋರಿದ ಕಲಾವಿದ