ನೈಪಿಡಾವ್/ಬ್ಯಾಂಕಾಕ್: ಮ್ಯಾನ್ಮಾರ್‌ನಲ್ಲಿಂದು ಎರಡೆರಡು ಬಾರಿ ಪ್ರಬಲ ಭೂಕಂಪ (Myanmar Earthquake) ಸಂಭವಿಸಿದೆ. ಮೊದಲ ಭೂಕಂಪ ಸಂಭವಿಸಿದ 15 ನಿಮಿಷಗಳಲ್ಲೇ ಮತ್ತೊಂದು ಬಾರಿ ಭೂಕಂಪ ಸಂಭವಿಸಿದೆ.
BREAKING: Skyscraper under construction collapses during earthquake in Bangkok pic.twitter.com/URArEojgyc
— BNO News (@BNONews) March 28, 2025
ರಿಕ್ಷರ್ ಮಾಪಕದಲ್ಲಿ ಮೊದಲ ಬಾರಿ ಭೂಕಂಪದ ತೀವ್ರತೆ 7.7, 2ನೇ ಬಾರಿಗೆ 6.4 ತೀವ್ರತೆ ದಾಖಲಾಗಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (USGS) ತಿಳಿಸಿದೆ. ಇದರಿಂದ ಮಯನ್ಮಾರ್ ಗಡಿ ದೇಶವಾಗಿರುವ ಭಾರತದ ನವದೆಹಲಿಯಲ್ಲೂ ಭೂಮಿ ಕಂಪಿಸಿದ ಅನುಭವ ಆಗಿದೆ.
WATCH: Strong earthquake hits Bangkok, sending pool water over edge of building pic.twitter.com/r8eUr1c2gX
— BNO News (@BNONews) March 28, 2025
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಬೆಳಿಗ್ಗೆ 11.50ರ ಸುಮಾರಿಗೆ ಭೂಮಿಯ 10 ಕಿ.ಮೀ ಆಳದಲ್ಲಿ ಈ ಭೂಕಂಪ ಸಂಭವಿಸಿದೆ. ತಕ್ಷಣಕ್ಕೆ ಯಾವುದೇ ಸಾವು ನೋವುಗಳ ವರದಿಯಾಗಿಲ್ಲ. ಅತ್ತ ಬ್ಯಾಂಕಾಕ್‌ನಲ್ಲೂ (Bangkok) ಭೂಕಂಪದ ಎಫೆಕ್ಟ್ ತಟ್ಟಿದೆ.
A 6.4 magnitude aftershock has hit 15 minutes after the 7.7 struck Burma. pic.twitter.com/KRsMqlnBZE
— Earthquake Watch (@jacobwoning) March 28, 2025
ಮ್ಯಾನ್ಮಾರ್‌ನಲ್ಲಿ ಭೂಕಂಪ ಸಂಭವಿಸಿದ ಎಫೆಕ್ಟ್ ಬ್ಯಾಂಕಾಕ್‌ಗೂ ತಟ್ಟಿದೆ. ಬ್ಯಾಂಕಾಕ್ ಹಾಗೂ ಥೈಲ್ಯಾಂಡ್‌ನಲ್ಲೂ ಭೂಮಿ ಕಂಪಿಸಿದ ಅನುಭವ ಆಗಿದೆ. ಕಟ್ಟಡಗಳು ಅಲುಗಾಡಿವೆ, ಕೆಲವಡೆ ಮುಗಿಲೆತ್ತರದ ಕಟ್ಟಗಳು ಧ್ವಂಸವಾದ ದೃಶ್ಯಗಳು ಸೆರೆಯಾಗಿವೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ಸಾಮಾಜಿಕ ಜಾಲತಾಣದಲ್ಲಿ ಭೂಕಂಪದ ತೀವ್ರತೆ ಬಗ್ಗೆ ಮಾಹಿತಿ ನೀಡಿದೆ.
Breaking: Video shows the moment a skyscraper under construction collapsed due to earthquake in Bangkok. pic.twitter.com/OIdxc4epKf
— PM Breaking News (@PMBreakingNews) March 28, 2025
ಬ್ಯಾಂಕಾಕ್‌ನಲ್ಲಿ ಭೂಕಂಪದ ಅನುಭವವಾದ ನಂತರ ಕಟ್ಟಡದ ಮೇಲ್ಛಾವಣಿಯಲ್ಲಿದ್ದ ಟ್ಯಾಂಕ್‌ನಿಂದ ನೀರು ಕೆಳಗೆ ಬೀಳುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಜೊತೆಗೆ ಸ್ವಿಮ್ಮಿಂಗ್ ಪೂಲ್‌ನಲ್ಲಿರುವ ನೀರು ಚಿಮ್ಮಿ ಹೊರ ಚೆಲ್ಲುತ್ತಿದೆ. ಹೋಟೆಲ್‌ನಲ್ಲಿ ವಸ್ತುಗಳೆಲ್ಲ ಅಲುಗಾಡುತ್ತಿರುವ ದೃಶ್ಯಗಳನ್ನು ಅಲ್ಲಿನ ಜನ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.