ವಾಷಿಂಗ್ಟನ್: ಅಮೆರಿಕದ (America) ಅಲಾಸ್ಕಾದಲ್ಲಿ (Alaska) ಭಾನುವಾರ 7.4 ತೀವ್ರತೆಯ ಭಾರೀ ಭೂಕಂಪ (Earthquake) ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ. ಭೂಕಂಪ ಸಂಭವಿಸಿದ ಬಳಿಕ ಅಮೆರಿಕದ ಕೆಲವು ರಾಜ್ಯಗಳಲ್ಲಿ ಸುನಾಮಿ ಎಚ್ಚರಿಕೆಯನ್ನು (Tsunami Warning) ನೀಡಲಾಗಿದೆ.
ಅಲಾಸ್ಕಾ ಪೆನಿನ್ಸುಲಾ, ಅಲ್ಯೂಟಿಯನ್ ದ್ವೀಪಗಳು ಹಾಗೂ ಕುಕ್ ಇನ್ಲೆಟ್ ಪ್ರದೇಶಗಳಲ್ಲಿ ಕಂಪನದ ಅನುಭವವಾಗಿದೆ ಎಂದು ಅಲಾಸ್ಕಾ ಭೂಕಂಪ ಕೇಂದ್ರ ತಿಳಿಸಿದೆ. ಭೂಕಂಪದ ಕೇಂದ್ರ ಬಿಂದುವನ್ನು 9.3 ಕಿ.ಮೀ ಆಳದಲ್ಲಿ ಗುರುತಿಸಲಾಗಿದೆ. ಸದ್ಯ ಇಲ್ಲಿಯವರೆಗೆ ಯಾವುದೇ ಸಾವು, ನೋವು, ಹಾನಿಯ ಬಗ್ಗೆ ವರದಿಯಾಗಿಲ್ಲ. ಇದನ್ನೂ ಓದಿ: ಮತ್ತೊಂದು ಕೇಸ್ – ಪಬ್ಜಿ ಪ್ರೇಮಿಗಾಗಿ ಭಾರತಕ್ಕೆ ಹಾರಿ ಬಂದ ಬಾಂಗ್ಲಾದೇಶದ ಯುವತಿ!
Advertisement
Advertisement
1964ರಲ್ಲಿ ಅಲಾಸ್ಕಾದಲ್ಲಿ 9.2 ತೀವ್ರತೆಯ ಭಾರೀ ಭೂಕಂಪ ಸಂಭವಿಸಿತ್ತು. ಇದು ಉತ್ತರ ಅಮೆರಿಕದಲ್ಲಿ ಸಂಭವಿಸಿದ ಅತ್ಯಂತ ಪ್ರಬಲ ಭೂಕಂಪವಾಗಿತ್ತು. ಇದು ಆಂಕಾರೇಜ್ ಅನ್ನು ಧ್ವಂಸಗೊಳಿಸಿತ್ತು. ಅಲಾಸ್ಕಾ ಕೊಲ್ಲಿ, ಅಮೆರಿಕದ ಪಶ್ಚಿಮ ಕರಾವಳಿ ಹಾಗೂ ಹವಾಯಿಯಲ್ಲಿ ಸುನಾಮಿಯೂ ಸಂಭವಿಸಿತ್ತು. ಈ ಪ್ರಕೃತಿಕ ವಿಕೋಪಕ್ಕೆ ಅಲ್ಲಿನ 250ಕ್ಕೂ ಹೆಚ್ಚು ಜನರು ಬಲಿಯಾಗಿದ್ದರು. ಇದನ್ನೂ ಓದಿ: 27 ಯುವಕರನ್ನ ಮದುವೆಯಾಗಿ ವಂಚಿಸಿ ಖತರ್ನಾಕ್ ಲೇಡಿ ಎಸ್ಕೇಪ್ – ಒಬ್ಬಳಿಗಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಸಂತ್ರಸ್ತರು
Advertisement
Web Stories