ಮಲಂಗೊ: ಸೋಮವಾರ ಇಂಡೋನೇಷ್ಯಾದಲ್ಲಿ (Indonesia) ಸಂಭವಿಸಿದ ಭೀಕರ ಭೂಕಂಪದಿಂದಾಗಿ (Earthquake) 160ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸುಮಾರು 700 ಜನರು ಗಾಯಗೊಂಡಿದ್ದಾರೆ. ಈ ಘಟನೆಯ ಬೆನ್ನಲ್ಲೇ ದಕ್ಷಿಣ ಪೆಸಿಫಿಕ್‌ನಲ್ಲಿರುವ ದ್ವೀಪರಾಷ್ಟ್ರ ಸೊಲೊಮನ್‌ನಲ್ಲಿ (Solomon Islands) ಭಾರೀ ಭೂಕಂಪ ಸಂಭವಿಸಿದೆ.
ಮಂಗಳವಾರ ಮುಂಜಾನೆ ಸೊಲೊಮನ್ ದ್ವೀಪದಲ್ಲಿನ ಮಲಂಗೊದ (Malango) ನೈಋತ್ಯ ಭಾಗದಲ್ಲಿ 7.3 ತೀವ್ರತೆಯ ಭೂಕಂಪ ಸಂಭವಿಸಿರುವುದಾಗಿ ಅಮೆರಿಕದ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ. ಭೂಕಂಪದ ಕೇಂದ್ರ ಬಿಂದುವನ್ನು 15 ಕಿ.ಮೀ ಆಳದಲ್ಲಿ ಗುರುತಿಸಲಾಗಿದೆ. ಸದ್ಯ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ.
Advertisement
Advertisement
ಸೋಮವಾರ ಇಂಡೋನೇಷ್ಯಾದ ಜಾವಾದಲ್ಲಿ ಸಂಭವಿಸಿದ ಭೂಕಂಪದಲ್ಲಿ 160 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಪಶ್ಚಿಮ ಜಾವಾ ಗವರ್ನರ್ ರಿದ್ವಾನ್ ಕಾಮಿಲ್ ಹೇಳಿದ್ದಾರೆ. ಅವಶೇಷಗಳಡಿ ಸಿಲುಕಿ ಬದುಕುಳಿದವರ ರಕ್ಷಣೆಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಕಾಮಿಲ್ ತಿಳಿಸಿದ್ದಾರೆ. ಇದನ್ನೂ ಓದಿ: ಇಂಡೋನೇಷ್ಯಾದಲ್ಲಿ ಭಾರೀ ಭೂಕಂಪ – 162 ಮಂದಿ ಸಾವು, 700ಕ್ಕೂ ಅಧಿಕ ಮಂದಿಗೆ ಗಾಯ
Advertisement
Advertisement
ವರದಿಗಳ ಪ್ರಕಾರ ನಿನ್ನೆ ಮಧ್ಯಾಹ್ನ ಸ್ಥಳೀಯ ಕಾಲಮಾನ 1:21ರ ವೇಳೆಗೆ ಜಾವಾದ ಸಿಯಾಂಜೂರ್ ಪ್ರದೇಶದಲ್ಲಿ 5.6 ತೀವ್ರತೆಯ ಭೂಕಂಪ ಸಂಭವಿಸಿದೆ. ಅಮೆರಿಕದ ಜಿಯೋಲಾಜಿಕಲ್ ಸರ್ವೆ ಭೂಕಂಪದ ಕೇಂದ್ರಬಿAದುವನ್ನು 10 ಕಿ.ಮೀ ಆಳದಲ್ಲಿ ಗುರುತಿಸಲಾಗಿದೆ. ಇದನ್ನೂ ಓದಿ: ಚಳಿಗೆ ನಡುಗಿದ ಬೆಂಗಳೂರು – ಕಳೆದ 10 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು