ತುಮಕೂರು: ಮೈಕ್ರೋ ಫೈನಾನ್ಸ್‌ನಿಂದ (Micro Finance) ಸಾಲ ಪಡೆದಕ್ಕಿಂತ ಹೆಚ್ಚು ಬಡ್ಡಿಯನ್ನೇ (Interest) ಕಟ್ಟಿ ಹೃದಯಾಘಾತದಿಂದ (Heart Attack) ವ್ಯಕ್ತಿಯೊಬ್ಬರು ಸಾವಿಗೀಡಾದ ಘಟನೆ ತುಮಕೂರಿನಲ್ಲಿ (Tumakuru) ನಡೆದಿದೆ.
ತುಮಕೂರು ನಗರದ ಲೇಬರ್ ಕಾಲೋನಿಯ ಸೈಯದ್ ಸಮಿವುಲ್ಲಾ ಸಾವಿಗಿಡಾದ ವ್ಯಕ್ತಿ. ಇವರು ಫೈಸ್ ಸ್ಟಾರ್ ಫೈನಾನ್ಸ್‌ನಿಂದ 2019ರಲ್ಲಿ 4.66 ಮನೆ ಸಾಲ ಪಡೆದಿದ್ದರು. 2024 ಮೇವರೆಗೆ ಬರೊಬ್ಬರಿ 7.20 ಲಕ್ಷ ಬಡ್ಡಿ ಕಟ್ಟಿದ್ದರು. ಆದರೆ ಅಸಲು ಹಾಗೆಯೇ ಉಳಿದಿತ್ತು. ಮತ್ತೆ ಅಸಲು ಕಟ್ಟುವಂತೆ ಫೈನಾನ್ಸ್‌ನವರು ಕಿರುಕುಳ ಕೊಡುತ್ತಿದ್ದರು. ಈ ಕಿರುಕುಳ ತಾಳಲಾರದೆ ಹೃದಯಾಘಾತದಿಂದ ಸಮೀವುಲ್ಲಾ ಮೇ ತಿಂಗಳಲ್ಲಿ ಸಾವಿಗೀಡಾಗಿದ್ದಾರೆ. ಇವರಿಗೆ ಸುಮಾರು 24.55 % ಬಡ್ಡಿ ಹಾಕಲಾಗಿತ್ತು. ಇದನ್ನೂ ಓದಿ: Kolar| ಮೊಬೈಲ್‌ನಲ್ಲಿ ರೀಲ್ಸ್ ನೋಡುತ್ತಾ ಸರ್ಕಾರಿ ಬಸ್ ಚಾಲನೆ – ವೀಡಿಯೋ ವೈರಲ್
ಈಗ ಫೈನಾನ್ಸ್‌ನವರು ಸಮೀವುಲ್ಲಾ ಮನೆಗೆ ಬಂದು ಅವರ ಪತ್ನಿ ಬಳಿ ಸಾಲ ಮರುಪಾವತಿ ಮಾಡುವಂತೆ ಕಿರುಕುಳ ನೀಡುತ್ತಿದ್ದಾರೆ. ಪತಿಯಂತೆ ನಾನೂ ಮಕ್ಕಳೊಂದಿಗೆ ಸಾಯಬೇಕಾಗುತ್ತದೆ ಎಂದು ಪತ್ನಿ ತಬಸಮ್ ಬಾನು ಕಣ್ಣೀರು ಹಾಕುತ್ತಿದ್ದಾರೆ. ಇದನ್ನೂ ಓದಿ: ಮಂಗಳೂರು| ಸಿನಿಮಾ ಶೂಟಿಂಗ್ ಸೆಟ್‌ನಲ್ಲಿ ಬೆಂಕಿ ಅವಘಡ