– ಕುಟುಂಬಸ್ಥರ ಸುರಕ್ಷತೆಗಾಗಿ ಟಾಯ್ಲೆಟ್ ಕ್ವಾರಂಟೈನ್
ಭುವನೇಶ್ವರ: ಸಾಂಸ್ಥಿಕ ಕ್ವಾರಂಟೈನ್ ಬಳಿಕ ಹೋಮ್ ಕ್ವಾರಂಟೈನ್ ಆಗಬೇಕೆಂಬ ನಿಯಮವಿರುವುದರಿಂದ ವ್ಯಕ್ತಿಯೊಬ್ಬ ಮನೆಯಲ್ಲಿ ಜಾಗ ಇಲ್ಲದ್ದಕ್ಕೆ ಶೌಚಾಲಯದಲ್ಲೇ 7 ದಿನಗಳ ಹೋಮ್ ಕ್ವಾರಂಟೈನ್ ಅವಧಿಯನ್ನು ಕಳೆದಿರುವ ವಿಚಿತ್ರ ಘಟನೆ ನಡೆದಿದೆ.
ಒಡಿಶಾದ ಜಗತ್ಸಿಂಗ್ಪುರ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, 28 ವರ್ಷದ ವ್ಯಕ್ತಿ ತಮಿಳುನಾಡಿನಿಂದ ಒಡಿಶಾಗೆ ತೆರಳಿದ್ದಾನೆ. ಒಡಿಶಾದಲ್ಲಿ ಸಹ 7 ದಿನ ಸಾಂಸ್ಥಿಕ ಕ್ವಾರಂಟೈನ್ ಹಾಗೂ 7 ದಿನ ಹೋಮ್ ಕ್ವಾರಂಟೈನ್ ಎಂಬ ನಿಯಮವಿದೆ. 7 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಮುಗಿಸಿದ ವ್ಯಕ್ತಿ ಹೋಮ್ ಕ್ವಾರಂಟೈನ್ ಆಗಲು ಮನೆಗೆ ತೆರೆಳಿದ್ದು, ಮನೆ ಚಿಕ್ಕದಿರುವುದರಿಂದ ಶೌಚಾಲಯದಲ್ಲೇ 7 ದಿನ ಜೀವನ ಕಳೆದಿದ್ದಾನೆ.
Advertisement
Advertisement
ಸುದುಕಂತಿ ಶಾಲೆಯಲ್ಲಿ ಏಳು ದಿನ ಸಾಂಸ್ಥಿಕ ಕ್ವಾರಂಟೈನ್ ಮುಗಿಯುತ್ತಿದ್ದಂತೆ ಮಾನಸ್ ಪಾತ್ರಾ ನುಗಾಂವ್ ಬ್ಲಾಕ್ನ ಜಮುಗಾಂವ್ನಲ್ಲಿರುವ ತಮ್ಮ ಮನೆಗೆ ತೆರಳಿದ್ದು, ಹೋಮ್ ಕ್ವಾರಂಟೈನ್ ಕಡ್ಡಾಯದ ಹಿನ್ನೆಲೆ ಈ ಏಳು ದಿನಗಳ ಅವಧಿಯನ್ನು ಶೌಚಾಲಯದಲ್ಲಿ ಕಳೆದಿದ್ದಾನೆ.
Advertisement
ಮಾನಸ್ ಪಾತ್ರಾ ಅವರ ಮನೆ ಚಿಕ್ಕದಾಗಿದ್ದು, 6 ಜನ ವಾಸಿಸುತ್ತಿದ್ದಾರೆ. ಹೀಗಾಗಿ ಮನೆಯಲ್ಲಿರಲು ಅವಕಾಶ ನೀಡಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಬೇರೆ ದಾರಿ ಇಲ್ಲದೆ ಅನಿವಾರ್ಯವಾಗಿ ಮನೆಯ ಬಳಿ ಇರುವ ಸ್ವಚ್ಛ್ ಭಾರತ್ನ ಶೌಚಾಲಯದ ಶೆಲ್ಟರ್ ನಲ್ಲೇ ಕಾಲ ಕಳೆದಿದ್ದಾರೆ.
Advertisement
ಮನೆಯವರ ಸುರಕ್ಷತೆಗಾಗಿ ಶೌಚಾಲಯದಲ್ಲೇ ಕಾಲ ಕಳೆಯಬೇಕು ಎಂದು ಒತ್ತಾಯಿಸಿದರು. ಹೀಗಾಗಿ ಅಲ್ಲೇ ಇದ್ದೆ ಎಂದು ತಿಳಿಸಿದ್ದಾರೆ. ಜೂ.9ರಿಂದ 15ರ ವರೆಗೆ ಶೌಚಾಲಯದಲ್ಲೇ ಕಾಲ ಕಳೆದಿದ್ದಾರೆ. ಇದೀಗ ರೋಗ ಲಕ್ಷಣಗಳು ಕಾಣದ ಹಿನ್ನೆಲೆ ಅವರನ್ನು ಬಿಡುಗಡೆ ಮಾಡಲಾಗಿದೆ.