ನವದೆಹಲಿ: ಬರೋಬ್ಬರಿ 7 ತಿಂಗಳ ಬಳಿಕ ಥಿಯೇಟರ್, ಮಲ್ಟಿಪ್ಲೆಕ್ಸ್ ಓಪನ್ ಆಗುತ್ತಿದೆ. ಅಕ್ಟೋಬರ್ 15ರಿಂದ ಚಿತ್ರಪ್ರೇಮಿಗಳು ಚಿತ್ರಮಂದಿರಕ್ಕೆ ಹೋಗಿ ಫಿಲಂ ವೀಕ್ಷಣೆ ಮಾಡಬಹುದು. ಆದರೆ, ಈ ಮೊದಲಿನಂತೆ ಥಿಯೇಟರ್ನಲ್ಲಿ ಜೊತೆಯಾಗಿ ಹಿತವಾಗಿ ಪತಿ, ಪತ್ನಿಯರು, ಪ್ರೇಮಿಗಳು ಅಕ್ಕ ಪಕ್ಕ ಕುಳಿತು ಒಟ್ಟಿಗೆ ಕುಳಿತು ಸಿನಿಮಾ ನೋಡಲು ಸಾಧ್ಯವಿಲ್ಲ.
ಕೇಂದ್ರ ಸರ್ಕಾರ ಥಿಯೇಟರ್ ಓಪನ್ ಸಂಬಂಧ ಇಂದು ಪ್ರಕಟಿಸಿರುವ ಮಾರ್ಗಸೂಚಿಯಲ್ಲಿ ಸಾಕಷ್ಟು ಟಫ್ ರೂಲ್ಸ್ ಇವೆ. ಇದನ್ನು ನೋಡಿ, ಚಿತ್ರರಂಗದ ಮಂದಿ ಸಿನಿಮಾ ರಿಲೀಸ್ ಮಾಡೋದು ಹೇಗಪ್ಪಾ ಎಂದು ಚಿಂತಾಕ್ರಾಂತರಾಗಿದ್ದಾರೆ.
Advertisement
Advertisement
ಮಾರ್ಗಸೂಚಿಯಲ್ಲಿ ಏನಿದೆ?
* ಥಿಯೇಟರ್ನಲ್ಲಿ ಶೇ.50ರಷ್ಟು ಸೀಟ್ ಮಾತ್ರ ಭರ್ತಿಗೆ ಅವಕಾಶ
* ಪ್ರೇಕ್ಷಕರು ಕುಳಿತುಕೊಳ್ಳದ ರೀತಿಯಲ್ಲಿ ಸೀಟ್ ಮಾರ್ಕ್ ಮಾಡಬೇಕು
* ಪ್ರೇಕ್ಷಕರು ಕುಳಿತುಕೊಳ್ಳುವ ಸೀಟ್ಗಳ ನಡುವೆ 6 ಅಡಿ ಅಂತರ ಇರಬೇಕು
* ಥಿಯೇಟರ್ಗೆ ಹೋಗುವವರು ಆರೋಗ್ಯ ಸೇತು ಆ್ಯಪ್ ಹೊಂದಿರಬೇಕು
* ಥಿಯೇಟರ್ಗೆ ಬರುವ ಪ್ರೇಕ್ಷಕರ ಮೊಬೈಲ್ ಸಂಖ್ಯೆ ಸಂಗ್ರಹ ಕಡ್ಡಾಯ
* ಹ್ಯಾಂಡ್ ವಾಶ್, ಸ್ಯಾನಿಟೈಸರ್ ಇರಿಸುವುದು ಕಡ್ಡಾಯ ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಟಫ್ ರೂಲ್ಸ್ – ಯಾರಿಗೆ ಕೊರೊನಾ ಟೆಸ್ಟ್ ಕಡ್ಡಾಯ?
Advertisement
Advertisement
* ಮಧ್ಯಂತರ ವಿರಾಮದಲ್ಲಿ ಪ್ರೇಕ್ಷಕರ ಅನಗತ್ಯ ಓಡಾಟಕ್ಕೆ ನಿರ್ಬಂಧ
* ಅನಾರೋಗ್ಯ ಇದ್ದವರು ಥಿಯೇಟರ್ನಿಂದ ದೂರ ಉಳಿಯಬೇಕು
* ಅಡ್ವಾನ್ಸ್ ಬುಕಿಂಗ್, ಡಿಜಿಟಲ್ ಪೇಮೆಂಟ್ಗೆ ಒತ್ತು ಕೊಡಬೇಕು
* ಥಿಯೇಟರ್ನಲ್ಲಿರುವ ಅಂಗಡಿಗಳ ಮುಂದೆ ಸಾಮಾಜಿಕ ಅಂತರ ಕಡ್ಡಾಯ
* ಪ್ಯಾಕ್ ಮಾಡಿದ ಆಹಾರ ಪದಾರ್ಥಗಳಿಗಷ್ಟೇ ಅವಕಾಶ ನೀಡಬೇಕು
* ಸಿನಿಮಾ ಹಾಲ್ನಲ್ಲಿ ಆಹಾರ ಪದಾರ್ಥ ಪೂರೈಸುವಂತಿಲ್ಲ
* ಉಸಿರಾಟಕ್ಕೆ ಸಂಬಂಧಿಸಿದ ಶಿಷ್ಟಾಚಾರಗಳ ಪಾಲನೆ ಕಡ್ಡಾಯ
* ಏರ್ ಕಂಡೀಷನ್ ಮಟ್ಟ 24 ರಿಂದ 30 ಡಿಗ್ರಿ ನಡುವೆ ಇರಬೇಕು