ಶ್ರೀನಗರ: ಜಮ್ಮು ಕಾಶ್ಮೀರದ (Jammu Kashmir) ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ (Pahalgam Terror Attack) ಘಟನೆಗೆ ಸಂಬಂಧಿಸಿದಂತೆ ಐಇಡಿ ಸ್ಫೋಟಿಸಿ ಮತ್ತೊಬ್ಬ ಉಗ್ರನ ಮನೆಯನ್ನು ಭಾರತೀಯ ಸೇನೆ ಉಡೀಸ್ ಮಾಡಿದೆ.
ಲಷ್ಕರ್ ಎ ತೊಯ್ಬಾ ಉಗ್ರ ಫಾರೂಕ್ ಮನೆಯನ್ನು ಸೇನೆ ಧ್ವಂಸಗೊಳಿಸಿದೆ. ಕುಪ್ವಾರದ ಕಲಾರೂಸ್ ಪ್ರದೇಶದಲ್ಲಿರುವ ಫಾರೂಕ್ ಮನೆಯನ್ನು ಐಇಡಿ ಸ್ಫೋಟಿಸಿ ಛಿದ್ರಛಿದ್ರ ಮಾಡಿದ್ದು, ಇಲ್ಲಿವರೆಗೆ ಒಟ್ಟು 6 ಉಗ್ರರ ಮನೆಯನ್ನು ನಾಶಪಡಿಸಲಾಗಿದೆ. ಇದನ್ನೂ ಓದಿ: ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟ ನೌಕಾಪಡೆ ಅಧಿಕಾರಿಯ ಕುಟುಂಬಕ್ಕೆ 50 ಲಕ್ಷ ಪರಿಹಾರ, ಸರ್ಕಾರಿ ಉದ್ಯೋಗ ಘೋಷಣೆ
#FLASH : A blast damages the house of Lashkar-e-Taiba terrorist Farooq Teedwa in Kalaroos area.
Reports : @MakhdoomiEmaad pic.twitter.com/YXxyiTWtdV
— The New Indian (@TheNewIndian_in) April 26, 2025
ಪಹಲ್ಗಾಮ್ ದಾಳಿಯ ನಂತರ ಪುಲ್ವಾಮಾ, ಶೋಪಿಯಾನ್, ಅನಂತ್‌ನಾಗ್, ಕುಲ್ಗಾಮ್ ಮತ್ತು ಕುಪ್ವಾರಾ ಜಿಲ್ಲೆಗಳಲ್ಲಿ ಸ್ಫೋಟಕಗಳನ್ನು ಬಳಸಿ ಆರು ಭಯೋತ್ಪಾದಕರ ಮನೆಗಳನ್ನು ಕೆಡವಲಾಗಿದೆ. ಈ ಎಲ್ಲಾ ಭಯೋತ್ಪಾದಕರು ಲಷ್ಕರ್-ಎ-ತೊಯ್ಬಾಗೆ ಸೇರಿದವರಾಗಿದ್ದು, ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದಲ್ಲಿ ಸಕ್ರಿಯರಾಗಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನಕ್ಕೆ ಸಿಂಧೂ ನದಿ ನೀರು ತಡೆಯಲು ಸಾಧ್ಯನಾ? – ಜಲತಜ್ಞ ರಾಜಾರಾವ್ ಹೇಳಿದ್ದೇನು?
ಫಾರೂಕ್ ಪ್ರಸ್ತುತ ಪಾಕಿಸ್ತಾನದಲ್ಲಿದ್ದು, ಭಾರತದಲ್ಲಿ ತೊಂದರೆ ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಭಾರತದ ವಿರುದ್ಧ ಯುದ್ಧಕ್ಕೆ ಸಿದ್ಧ – ಬುಸುಗುಟ್ಟಿದ ಪಾಕ್ ಗೃಹ ಸಚಿವ