ಕಾರವಾರ: ಭಾರವಾದ ಶಾಲಾ ಬ್ಯಾಗ್ ಹೊತ್ತುಕೊಂಡು ಹೋದ ಪರಿಣಾಮ ಆರನೇ ತರಗತಿ ವಿದ್ಯಾರ್ಥಿಯೊಬ್ಬನ ಬಲಗೈ ಮುರಿದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಕಾರವಾರದಲ್ಲಿ ಬೆಳಕಿಗೆ ಬಂದಿದೆ.
ಕಾರವಾರದ ವಿದ್ಯಾರ್ಥಿಯೊಬ್ಬ ಭಾರವಾದ ಬ್ಯಾಗ್ ಹೊತ್ತು ಕೈ ಮುರಿದುಕೊಂಡಿದ್ದಾನೆ. ಈತ ಕಾರವಾರದ ಖಾಸಗಿ ಶಾಲೆಯೊಂದರಲ್ಲಿ ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಶಾಲೆಗೆ ಹೋಗಿದ್ದ ವಿದ್ಯಾರ್ಥಿ, ಶಿಕ್ಷಕರು ಹೆಚ್ಚು ಪುಸ್ತಕ ತರಲು ಹೇಳಿದ್ದರಿಂದ ಸುಮಾರು ಹೆಚ್ಚು ಭಾರದ ಪುಸ್ತಕಗಳನ್ನು ತುಂಬಿಕೊಂಡು ಭಾರವಾದ ಬ್ಯಾಗ್ ಹೊತ್ತು ಶಾಲೆಗೆ ತೆರಳಿದ್ದನು. ಶಾಲೆಯಿಂದ ಮರಳಿ ಮನೆಗೆ ಬಂದಾಗ ವಿದ್ಯಾರ್ಥಿಯ ಬಲಗೈ ಭುಜ ಭಾಗದಲ್ಲಿ ತೀವ್ರ ಊತ ಕಂಡುಬಂದಿದೆ. ಇದನ್ನೂ ಓದಿ: ಬೆಂಗಳೂರು | ಸ್ನೇಹಿತನ ಹೆಂಡ್ತಿ ಮೇಲಿನ ಸೇಡಿಗೆ 6 ವರ್ಷದ ಮಗಳ ಹತ್ಯೆ – ಆರೋಪಿ ಅಂದರ್
ತಕ್ಷಣ ಆತಂಕಗೊಂಡ ಪೋಷಕರು ವಿದ್ಯಾರ್ಥಿಯನ್ನು ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿಸಿದ್ದಾರೆ. ವೈದ್ಯಕೀಯ ಪರೀಕ್ಷೆಯ ವೇಳೆ ವಿದ್ಯಾರ್ಥಿಯ ಬಲಗೈ ಮುರಿದಿರುವುದು ದೃಢಪಟ್ಟಿದೆ. ವಿಚಾರಣೆ ವೇಳೆ ವಿದ್ಯಾರ್ಥಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಕೆಜಿ ತೂಕದ ಭಾರವಾದ ಶಾಲಾ ಬ್ಯಾಗ್ ಅನ್ನು ಹೊತ್ತುಕೊಂಡು ಶಾಲೆಗೆ ಹೋಗುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.

