– ಒಂದೇ ದಿನ 964 ಮಂದಿ ಕೋವಿಡ್ಗೆ ಬಲಿ
ನವದೆಹಲಿ: ಕಳೆದ ಎರಡು ವಾರಗಳಿಂದ ದೇಶದಲ್ಲಿ ನಿತ್ಯ ಕೊರೊನಾ ಸೋಂಕಿತರಿಗಿಂತ ಚೇತರಿಸಿಕೊಂಡವರ ಸಂಖ್ಯೆ ಹೆಚ್ಚುತ್ತಿದೆ. ದೇಶದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 69 ಲಕ್ಷ ಆಗಿದ್ದರೆ, ಚೇತರಿಸಿಕೊಂಡವರ ಸಂಖ್ಯೆ 59 ಲಕ್ಷಕ್ಕೂ ಅಧಿಕವಾಗಿದೆ.
Advertisement
ಕಳೆದ 24 ಗಂಟೆಯಲ್ಲಿ 70,496 ಮಂದಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ ಕೊರೊನಾ ಸೋಂಕಿತ ಸಂಖ್ಯೆ 69,06,152ಕ್ಕೆ ಏರಿಕೆಯಾಗಿದೆ. ಇನ್ನೂ ಒಂದೇ ದಿನ 964 ಮಂದಿ ಕೋವಿಡ್ಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
Advertisement
India's #COVID19 tally crosses 69-lakh mark with a spike of 70,496 new cases & 964 deaths reported in the last 24 hours.
Total case tally stands at 69,06,152 including 8,93,592 active cases, 59,06,070 cured/discharged/migrated cases & 1,06,490 deaths: Union Health Ministry pic.twitter.com/4TlKC5qEZh
— ANI (@ANI) October 9, 2020
Advertisement
69,06,152ರ ಪೈಕಿ 8,93,592 ಸಕ್ರಿಯ ಪ್ರಕರಣಗಳಿದ್ದು, ಇದುವರೆಗೂ 59,06,070 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ 24 ಗಂಟೆಯಲ್ಲಿ 964 ಮಂದಿ ಸಾವನ್ನಪ್ಪುವ ಮೂಲಕ ಕೋವಿಡ್ಗೆ ಇದುವರೆಗೂ 1,06,490 ಮಂದಿ ಬಲಿಯಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
Advertisement
India’s COVID-19 fight is people driven and gets great strength from our COVID warriors. Our collective efforts have helped saved many lives. We have to continue the momentum and protect our citizens from the virus. #Unite2FightCorona pic.twitter.com/GrYUZPZc2m
— Narendra Modi (@narendramodi) October 8, 2020
ಗುಣಮುಖರಾದವರ ಪ್ರಮಾಣ ಶೇ. 85.25 ತಲುಪಿದೆ. ಈ ಕುರಿತು ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿ, ನಿಮ್ಮೆಲ್ಲರ ಸಹಕಾರದಿಂದ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ಎಷ್ಟೋ ಮಂದಿ ಸೋಂಕಿನಿಂದ ಬಚಾವ್ ಆಗಿದ್ದಾರೆ. ಇದೇ ರೀತಿಯಲ್ಲಿ ಕೆಲಸ ಮಾಡಿ. ಇನ್ನಷ್ಟು ಜನರ ಜೀವ ಉಳಿಸಿ ಎಂದು ಕೊರೊನಾ ವಾರಿಯರ್ಸ್ ಗೆ ಮನವಿ ಮಾಡಿದ್ದರು.