ನವದೆಹಲಿ: ಭಾರತದ ಚಂದ್ರಯಾನ-3 (Chandrayaan-3) ಯಶಸ್ಸಿಗೆ ಕ್ಷಣಗಣನೆ ಆರಂಭವಾಗಿದೆ. ವಿಜ್ಞಾನಿಗಳು ಲೆಕ್ಕಚಾರದ ಪ್ರಕಾರ ಎಲ್ಲವೂ ನಡೆದರೆ ಸಂಜೆ 6:04 ನಿಮಿಷಕ್ಕೆ ವಿಕ್ರಮ್ ಲ್ಯಾಂಡರ್ ಚಂದ್ರನಲ್ಲಿ (Moon) ಲ್ಯಾಂಡ್ ಆಗಲಿದ್ದು, ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸುವ ಮೂಲಕ ಭಾರತ ಬಾಹ್ಯಾಕಾಶ ವಲಯದಲ್ಲಿ ಹೊಸ ಸಾಧನೆ ಮಾಡಲಿದೆ.
ಚಂದ್ರನ ಅಧ್ಯಯನಕ್ಕೆ ಈವರೆಗೂ 146 ಪ್ರಯತ್ನಗಳು ನಡೆದಿವೆ. ಈ ಪೈಕಿ 69 ಚಂದ್ರಯಾನಗಳು ಮಾತ್ರ ಸಫಲವಾಗಿವೆ. ಮುಂದುವರಿದ ದೇಶಗಳಿಂದ ಮಾತ್ರ ಯಶಸ್ವಿ ಚಂದ್ರಯಾನ ಮಾಡಿದ್ದು, ಹಲವು ಯತ್ನಗಳ ಬಳಿಕ ಅಮೆರಿಕ, ರಷ್ಯಾ, ಚೀನಾ, ಜಪಾನ್ ಯಶಸ್ಸು ಕಂಡಿವೆ. ಇದನ್ನೂ ಓದಿ: Chandrayaan-3: ಬಾಹ್ಯಾಕಾಶ ಯೋಜನೆಗಳಿಗೆ ನೂರಾರು ಕೋಟಿ ವ್ಯಯ – ಭಾರತಕ್ಕೇನು ಲಾಭ?
Advertisement
Advertisement
1950ರ ದಶಕದಲ್ಲಿ 13, 1960 – 63, 1970 – 23, 1980 – 00, 1990 – 07, 2000 – 09, 2010 – 12, 2020 – 19 ಚಂದ್ರಯಾನ ಯೋಜನೆಗಳು ನಡೆದಿವೆ. ಅಮೆರಿಕಾ 59 ಪ್ರಯತ್ನಗಳನ್ನು ಮಾಡು 39 ಬಾರಿ ಯಶಸ್ಸು ಕಂಡಿದೆ. ರಷ್ಯಾದ 58 ಪ್ರಯತ್ನಗಳ ಪೈಕಿ 18 ರಲ್ಲಿ ಮಾತ್ರ ಸಫಲವಾಗಿದೆ. ಜಪಾನ್ 6ರ ಪೈಕಿ 3, ಚೀನಾ 8 ರ ಪೈಕಿ 4 ಯೋಜನೆಗಳು ಯಶಸ್ವಿಯಾಗಿವೆ. ಯುರೋಪಿಯನ್ ಒಕ್ಕೂಟ, ಲಕ್ಸೆಂಬರ್ಗ್, ಇಸ್ರೇಲ್, ದಕ್ಷಿಣ ಕೊರಿಯಾ, ಇಟಲಿ, ಯುಎಇ, ಭಾರತ ತಲಾ ಒಂದು ಬಾರಿ ಯಶಸ್ವಿ ಚಂದ್ರಯಾನ ಮಾಡಿವೆ.
Advertisement
ಹತ್ತಾರು ದೇಶಗಳು ಚಂದ್ರನ ಕಕ್ಷೆಯಲ್ಲಿದ್ದು ಅಧ್ಯಯನ ನಡೆಸಿದರೆ ಅಮೆರಿಕ, ರಷ್ಯಾ ಮತ್ತು ಚೀನಾ ಚಂದ್ರನಲ್ಲಿ ತನ್ನ ನೌಕೆ ಇಳಿಸಿವೆ. ಅಮೆರಿಕ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಚಂದ್ರನ ಅಂಗಳದಲ್ಲಿ ಮಾನವನ ಕಳುಹಿಸಿ ಯಶಸ್ವಿಯಾಗಿತ್ತು. ಹೀಗೆ ಜಾಗತಿಕ ದೇಶಗಳು ಚಂದ್ರನ ಮೇಲೆ ಸಂಶೋಧನೆ ನಡೆಸಲು ಹಲವು ಕಾರಣಗಳಿವೆ. ಇದನ್ನೂ ಓದಿ: ಪಾಕಿಸ್ತಾನ ಮಾಧ್ಯಮಗಳು ಚಂದ್ರಯಾನ-3 ಲ್ಯಾಂಡಿಂಗ್ ಕಾರ್ಯಕ್ರಮ ಪ್ರಸಾರ ಮಾಡಲಿ: ಪಾಕ್ ಮಾಜಿ ಸಚಿವ
Advertisement
ಚಂದ್ರನ ದಕ್ಷಿಣ ಧ್ರುವದಲ್ಲಿ ಪರ್ವತ ಶ್ರೇಣಿಗಳ ಶಾಶ್ವತ ನೆರಳಿನಲ್ಲಿ ಮಂಜುಗಡ್ಡೆಯಲ್ಲಿ ನೀರು ಇದೆ ಎಂದು ವಿಜ್ಞಾನಿಗಳು ನಂಬುತ್ತಾರೆ. ಭವಿಷ್ಯದಲ್ಲಿ ನೀರು ಮಾನವ ಜೀವನಕ್ಕೆ ನಿರ್ಣಾಯಕವಾಗಿರುವ ಕಾರಣ ಚಂದ್ರನ ಅಧ್ಯಯನ ನಡೆಯುತ್ತಿದೆ. ಹೈಡ್ರೋಜನ್ ಮತ್ತು ಆಮ್ಲಜನಕದ ಮೂಲವೂ ಚಂದ್ರನಲ್ಲಿರಬಹುದು. ಇದು ರಾಕೆಟ್ ಇಂಧನಕ್ಕಾಗಿ ಬಳಸಬಹುದು. ಚಂದ್ರನ ಅಧ್ಯಯನಕ್ಕೆ ಇದು ಕೂಡ ಕಾರಣ ಆಗಿದೆ.
ಮುಖ್ಯವಾಗಿ ಖನಿಜಗಳ ಸಂಪನ್ಮೂಲ ಪತ್ತೆ ಹಚ್ಚುವ ಉದ್ದೇಶಗಳಿವೆ. ಹೀಲಿಯಂ-3 ಭೂಮಿಯ ಮೇಲೆ ಅಪರೂಪದ ಖನಿಜ. ಆದರೆ ಚಂದ್ರನ ಮೇಲೆ ಒಂದು ಮಿಲಿಯನ್ ಟನ್‌ಗಳಷ್ಟು ಹೀಲಿಯಂ ಇದೆ ಎಂದು ನಾಸಾ ಹೇಳುತ್ತದೆ. ಇದು ಪರಮಾಣು ಶಕ್ತಿಯನ್ನು ಒದಗಿಸುತ್ತದೆ. ವಿಕಿರಣಶೀಲವಲ್ಲದ ಕಾರಣ ಅಪಾಯಕಾರಿ ತ್ಯಾಜ್ಯವನ್ನು ಉತ್ಪಾದಿಸುವುದಿಲ್ಲ ಎಂದು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: Chandrayaan-3ಕ್ಕೆ ಇಂದು ಕ್ಲೈಮ್ಯಾಕ್ಸ್; ಸಂಜೆ 6:04ಕ್ಕೆ ಸಾಫ್ಟ್ ಲ್ಯಾಂಡಿಂಗ್
ಬೋಯಿಂಗ್‌ನ ಸಂಶೋಧನೆಯ ಪ್ರಕಾರ ಸ್ಮಾರ್ಟ್‌ಫೋನ್‌ಗಳು, ಕಂಪ್ಯೂಟರ್‌ಗಳು ಮತ್ತು ಸುಧಾರಿತ ತಂತ್ರಜ್ಞಾನಗಳಲ್ಲಿ ಬಳಸಲಾಗುವ ಅಪರೂಪದ ಲೋಹಗಳಾದ ಸ್ಕ್ಯಾಂಡಿಯಮ್, ಯಟ್ರಿಯಮ್ ಮತ್ತು 15 ಲ್ಯಾಂಥನೈಡ್‌ಗಳನ್ನು ಚಂದ್ರ ಮೇಲ್ಮೈನಲ್ಲಿ ಒಳಗೊಂಡಿದೆ. ಇದನ್ನು ಖಚಿತಪಡಿಸಿಕೊಳ್ಳಲು ಈ ಸಂಶೋಧನೆಗಳ ಅಗತ್ಯವಿದೆ.
ಚಂದ್ರನಲ್ಲಿ ಗಣಿಗಾರಿಕೆ ನಡೆಸಬೇಕೆಂದರೆ ಒಂದಷ್ಟು ಮೂಲಸೌಕರ್ಯಗಳ ನಿರ್ಮಾಣ ಅಗತ್ಯವಾಗಿದೆ. ಬೇರೆ ಗ್ರಹಗಳಲ್ಲಿ ಗಣಿಗಾರಿಕೆ ಬಗ್ಗೆ ಸ್ಪಷ್ಟತೆ ಇಲ್ಲ. ಆದಾಗ್ಯೂ ಒಂದು ವೇಳೆ ಮಾಡಿದರೆ ಅದರಲ್ಲಿ ರೋಬೊಗಳ ಪಾತ್ರವೇ ದೊಡ್ಡದಿರಲಿದೆ. ಅದಕ್ಕೆ ಅಗತ್ಯವಿರುವ ನೀರು ದೊರೆತಲ್ಲಿ ಮನುಷ್ಯ ಹೆಚ್ಚು ಕಾಲ ಚಂದ್ರನಲ್ಲಿ ಇರಬಲ್ಲ. ಎಲ್ಲದಕ್ಕೂ ನೀರು ಮುಖ್ಯವಾಗಿರುವ ಹಿನ್ನೆಲೆ ನೀರಿನ ಹುಡುಕಾಟದಲ್ಲಿ ಎಲ್ಲ ದೇಶಗಳಿವೆ ಎನ್ನಲಾಗಿದೆ. ಇದನ್ನೂ ಓದಿ: Chandrayaan-3: ಕೊನೆಯ ಆ 20 ನಿಮಿಷವೇ ಆತಂಕ – ಲ್ಯಾಂಡಿಂಗ್ ಹೇಗಿರುತ್ತೆ? ಈ ಬಗ್ಗೆ ನೀವು ತಿಳಿಯಲೇಬೇಕು…
Web Stories